ಶಿವಮೊಗ್ಗ, ಜುಲೈ ೨೪,
ಯುವ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕಾಗಿಯೇ ರೂಪಿತವಾದ ಆಕಾಶವಾಣಿ ಭದ್ರಾವತಿಯ ಕ್ಯಾಂಪಸ್‌ಕಟ್ಟೆ ೫೦ನೇ ಕಾರ್ಯಕ್ರಮವು ದಿನಾಂಕ ೨೫.೦೭.೨೦೨೪ರ ಗುರುವಾರ ಬೆಳಿಗ್ಗೆ ೧೦ ಗಂಟೆಯಿoದ ೧೧ಗಂಟೆಯವರೆಗೆ ನೇರಪ್ರಸಾರದಲ್ಲಿ ಪ್ರಸಾರವಾಗಲಿದೆ.
ಕ್ಯಾಂಪಸ್‌ಕಟ್ಟೆ ಎನ್ನುವ ಕಾರ್ಯಕ್ರಮದಲ್ಲಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನೇರಪ್ರಸಾರದಲ್ಲಿ ವಿವಿಧ ಮಹನೀಯರು, ಸಾಹಿತಿಗಳು, ಸಾಧಕರು ಮತ್ತು ಆಯ ಪ್ರದೇಶದ ವಿಶೇಷತೆಯನ್ನು ತಿಳಿಸುತ್ತಾರೆ. ಪ್ರತೀ ಕಾರ್ಯಕ್ರಮದಲ್ಲಿ ೬ ರಿಂದ ೮ ವಿದ್ಯಾರ್ಥಿಗಳು ಭಾಗವಹಿಸಿ ಮಾಹಿತಿ ನೀಡುತ್ತಾರೆ. ವಿದ್ಯಾರ್ಥಿಗಳು ಮಾಹಿತಿ ನೀಡಿದ ಮಹನೀಯರಿಗೆ ಸಂಬoಧಿಸಿದ ಪ್ರಶ್ನೆಗಳನ್ನು ಸಾರ್ವಜನಿಕರಿಗೆ ನೀಡಿ ಅವರಿಂದ ವಾಟ್ಸಪ್ ಮುಖಾಂತರ ಉತ್ತರ ಪಡೆದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ಚಿತ್ರಗೀತೆಗಳ ಸಂಗಮವಾದ ಈ ಕಾರ್ಯಕ್ರಮದಲ್ಲಿ ಇದುವರೆಗೆ ವಿವಿಧ ಕಾಲೇಜಿನ ೪೦೦ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಕಾಲೇಜಿನಿಂದ ನೇರಪ್ರಸಾರದಲ್ಲಿ ಭಾಗವಹಿಸಿದ್ದು ಈ ಕಾರ್ಯಕ್ರಮದ ಹೆಗ್ಗಳಿಕೆ. ೨೫.೦೭.೨೦೨೪ರ ಗುರುವಾರ ಬೆಳಿಗ್ಗೆ ೧೦ಗಂಟೆಯಿoದ ೧೧ಗಂಟೆವರೆಗೆ MPMES ಸ್ವತಂತ್ರ ಪದವಿಪೂರ್ವಕಾಲೇಜು ಭದ್ರಾವತಿಯ ಕ್ಯಾಂಪಸ್‌ನಿ0ದ ನೇರಪ್ರಸಾರದಲ್ಲಿ ಪ್ರಸಾರವಾಗಲಿದೆ. ಭದ್ರಾವತಿ ಆಕಾಶವಾಣಿ ವಜ್ರಮಹೋತ್ಸವ ವರ್ಷಾಚರಣೆ ಸಂದರ್ಭದಲ್ಲಿ ಈ ೫೦ನೇ ಕಾರ್ಯಕ್ರಮ ಪ್ರಸಾರವಾಗುತ್ತಿರುವುದನ್ನು ತಿಳಿಸಲು ಹೆಮ್ಮೆ ಆಗುತ್ತದೆ ಎಂದು ಆಕಾಶವಾಣಿ ಭದ್ರಾವತಿಯ ಕಾರ್ಯಕ್ರಮ ಮುಖ್ಯಸ್ಥರಾದ ಎಸ್.ಆರ್.ಭಟ್ ತಿಳಿಸಿದ್ದಾರೆ.
ಈ ಕಾರ್ಯಕ್ರಮವನ್ನು FM 103.5 ಹಾಗೂ MW 675 khz ನಲ್ಲಿ ಕೇಳುವದರೊಟ್ಟಿಗೆ ಜಗತ್ತಿನಾದ್ಯಂತAkashavani Bhadravathi live streaming ಮತ್ತು prasarbharati news on air app ನಲ್ಲಿ ಪ್ರಸಾರ ಸಮಯದಲ್ಲಿ ಕೇಳಬಹುದು.