ಸಿರುಗುಪ್ಪ.ಮೇ.23:- ತಾಲೂಕಿನ ನಡಿವಿ ಗ್ರಾಮದಲ್ಲಿ ಕಲುಷಿತ ಆಹಾರ ಸೇವಿಸಿ 63 ಕ್ಕೂ ಹೆಚ್ಚು ಕುರಿಗಳು ಸಾವಿಗೀಡಾದ ಘಟನೆ ಬುಧುವಾರ ನಡೆದಿದೆ. ಗ್ರಾಮದ ಗುಮ್ಮಡಿ ರಾಜಶೇಖರ, ಗಾದಿಲಿಂಗ, ಮಂಜಪ್ಪ ಎನ್ನುವ ಕುರಿಗಾಹಿಗಳಿಗೆ ಸೇರಿದ ಕುರಿ ಮಂದೆಯಲ್ಲಿರುವ ಕುರಿಗಳು ಮಂಗಳವಾರದಿAದ ಅನಾರೋಗ್ಯಕ್ಕೀಡಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದರು ಚಿಕಿತ್ಸೆ ಫಲಕಾರಿಯಾಗದೇ ರಾತ್ರಿಯಿಂದ ಒಂದೊಂದಾಗಿ ಕುರಿಗಳು ಸಾವಿಗೀಡಾಗುತ್ತಿದ್ದು, ಮೂರು ಜನ ಕುರಿಗಾಹಿಗಳಿಗೆ ಸೇರಿದ ೬೩ ಕುರಿಗಳು ಸಾವನ್ನಪ್ಪಿವೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಬಳ್ಳಾರಿ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ವಿನೋದ್‌ಕುಮಾರ್, ಪ್ರಾದೇಶಿಕ ಪ್ರಯೋಗಾಲಯ ಸಂಶೋಧನಾಧಿಕಾರಿ ಡಾ.ರಾಜಶೇಖರ್, ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ ಡಾ.ವೈ.ಗಂಗಾಧರ, ಕುರಿಗಳ ಆರೋಗ್ಯವನ್ನು ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಪಶುವೈದ್ಯಾಧಿಕಾರಿ ಡಾ.ವೈ.ಗಂಗಾಧರ್ ಕುರಿಗಳು ಕಲುಷಿತ ಮೇವನ್ನು ಸೇವಿಸಿರುವುದರಿಂದ ನಾವು ಸೂಕ್ತ ಚಿಕಿತ್ಸೆ ನೀಡಿದರು ಸಾವನ್ನಪ್ಪಿವೆ. ಒಟ್ಟು 63 ಕುರಿಗಳು ಸತ್ತಿವೆ ಎಂದು ಮಾಹಿತಿ ನೀಡಿದ್ದಾರೆ.
ಕುರಿಗಾಹಿ ಗಾದಿಲಿಂಗಪ್ಪ ಮಾತನಾಡಿ ಮಂಗಳವಾರದಿAದ ನಮ್ಮ ಕುರಿಮಂದೆಯಲ್ಲಿ ಕೆಲವು ಕುರಿಗಳು ಏಕಾಏಕಿ ಅಸ್ವಸ್ತವಾಗಿದ್ದು, ಸೂಕ್ತ ಚಿಕಿತ್ಸೆ ನೀಡಿದರು ಚಿಕಿತ್ಸೆ ಫಲಿಸದೆ ಬುಧವಾರದವರೆಗೆ 63 ಕುರಿಗಳು ಸತ್ತಿವೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ತಾಲೂಕಿನ ನಡಿವಿ ಗ್ರಾಮದಲ್ಲಿ ಕಲುಷಿತ ಆಹಾರ ಸೇವಿಸಿ ಸಾವನ್ನಪ್ಪಿದ ಕುರಿಗಳನ್ನು ಪರಿಶೀಲಿಸುತ್ತಿರುವ ಪಶುಸಂಗೋಪನೆಯ ಅಧಿಕಾರಿಗಳು.