ದಾವಣಗೆರೆ.ಆ.15; ಸರ್ಕಾರ ರಾಜ್ಯದ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದ್ದು, ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳೊಂದಿಗೆ ಜನಸಾಮಾನ್ಯರಿಗಾಗಿ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠನ ಮಾಡಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದರು.
ಅವರು (ಆ.15) ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ 78 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ವಿವಿಧ ತುಕಡಗಳಿಂದ ಗೌರವ ವಂದನೆ ಸ್ವೀಕರಿಸಿ ತಮ್ಮ ಸ್ವಾತಂತ್ರ್ಯೋತ್ಸವ ಸಂದೇಶದಲ್ಲಿ ಮಾತನಾಡಿದರು. ಬ್ರಿಟೀಷರ ದಾಸ್ಯದಲ್ಲಿದ್ದ ಭಾರತ ದೇಶ ಸ್ವಾತಂತ್ರ್ಯ ಹೊಂದಿದ್ದು ಇದಕ್ಕಾಗಿ ಅನೇಕ ಹಿರಿಯರು ತ್ಯಾಗ, ಬಲಿದಾನ ಮಾಡಿದ್ದಾರೆ, ಅವರೆಲ್ಲರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಪಂಚ ಗ್ಯಾರಂಟಿ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದ್ದು ಇದಕ್ಕಾಗಿ ಸಾವಿರಾರು ಕೋಟಿ ವೆಚ್ಚ ಮಾಡಿದೆ. ದಾವಣಗೆರೆ ಜಿಲ್ಲೆಗೆ ಶಕ್ತಿ ಯೋಜನೆಗಾಗಿ ಇಲ್ಲಿಯವರೆಗೆ 662 ಕೋಟಿ, ಅನ್ನಭಾಗ್ಯದಡಿ 10 ಕೆಜಿ ಅಕ್ಕಿಯಲ್ಲಿ 5 ಕೆಜಿ ನಗದು ಪಾವತಿಸುತ್ತಿದ್ದು ಇದಕ್ಕಾಗಿ ಪ್ರತಿ ತಿಂಗಳು 3.41 ಲಕ್ಷ ಜಿಲ್ಲೆಯ ಕಾರ್ಡ್‍ದಾರರಿಗೆ ಪ್ರತಿ ತಿಂಗಳು 19.66 ಕೋಟಿ ಪಾವತಿಸುತ್ತಿದ್ದು ಇಲ್ಲಿವರೆಗೆ 228 ಕೋಟಿ ಪಾವತಿಸಿದೆ. ಗೃಹ ಜ್ಯೋತಿಯಡಿ 4.27 ಲಕ್ಷ ಗ್ರಾಹಕರ ವಿದ್ಯುತ್ ಬಿಲ್ ಪಾವತಿಗಾಗಿ 282 ಕೋಟಿ ನೀಡಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ 3.55 ಲಕ್ಷ ಯಜಮಾನಿಯರಿಗೆ ಜೂನ್‍ವರೆಗೆ 662 ಕೋಟಿ ಪಾವತಿಸಲಾಗಿದೆ. ಯುವನಿಧಿಯಡಿ 9035 ಪದವಿ ಹಾಗೂ ಡಿಪ್ಲೊಮಾದಾರರಿಗೆ ನಿರುದ್ಯೋಗ ಭತ್ಯೆಯಾಗಿ 2.70 ಕೋಟಿ ನೀಡಲಾಗಿದ್ದು ಇದು ದಾವಣಗೆರೆ ಜಿಲ್ಲೆಯ ಪ್ರಗತಿಯಾಗಿದೆ. ಆದರೆ ಈ ಯೋಜನೆಗಳನ್ನು ಪರಿಷ್ಕರಿಸಲಾಗುತ್ತಿದೆ ಎಂಬ ಗುಮಾನಿಗಳಿದ್ದು ಯಾವುದೇ ಪರಿಷ್ಕರಣೆ ಸರ್ಕಾರದ ಮುಂದಿಲ್ಲ, ಯೋಜನೆಗಳು ಸಫಲವಾಗಿ ಅನುಷ್ಟಾನವಾಗುತ್ತಿವೆ ಎಂದರು.
ಪ್ರಸಕ್ತ ಮುಂಗಾರು ಆಶಾದಾಯಕವಾಗಿದ್ದು ಕಳೆದ ವರ್ಷಕ್ಕಿಂತ ಈ ವರ್ಷ ಅಧಿಕ ಮಳೆಯಾಗಿದೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಜಿಲ್ಲೆಯ ಜೀವನಾಡಿಯಾದ ಭದ್ರಾ ಜಲಾಶಯ ಭರ್ತಿಯಾಗಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿದ್ದು ಇದರಿಂದ ಜಿಲ್ಲೆಯ ರೈತರ ಆರ್ಥಿಕ ಸ್ಥಿತಿಗತಿ ಈ ವರ್ಷ ಉತ್ತಮವಾಗಲಿದೆ ಎಂದರು.
ತುಂಗಾಭದ್ರಾ ನದಿ ಮೂಲದಿಂದ ಹರಿಹರ ತಾಲ್ಲೂಕು ದೀಟೂರು ಬಳಿಯಿಂದ ಏತ ನೀರಾವರಿ ಮೂಲಕ ಜಗಳೂರು ತಾಲ್ಲೂಕಿನ 51 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ 31 ಕೆರೆಗಳಿಗೆ ನೀರು ಹರಿಸಿಸಲಾಗುತ್ತಿದೆ. ಬಾಕಿ ಉಳಿದ ಕೆರೆಗಳಿಗೂ ನೀರು ಹರಿಸಲು ಕಾಮಗಾರಿ ಮುಂದುವರೆದಿದೆ. ಹೊನ್ನಾಳಿ ತಾಲ್ಲೂಕಿನ 23 ಹಾಗೂ ಹರಿಹರ ತಾಲ್ಲೂಕಿನ ಒಂದು ಕೆರೆಗೆ ನೀರು ತುಂಬಿಸಲು ರೂ. 52 ಕೋಟಿ ವೆಚ್ಚದ ಯೋಜನೆ , ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕಿನ 26 ಕೆರೆಗಳಿಗೆ ನೀರು ತುಂಬಿಸಲು ರೂ. 100 ಕೋಟಿ ವೆಚ್ಚದ ಯೋಜನೆ, ಸಾಸ್ವೆಹಳ್ಳಿ ಏತನೀರಾವರಿ ಯೋಜನೆ ಮೂಲಕ ಚನ್ನಗಿರಿ, ಹೊನ್ನಾಳಿ ಹಾಗೂ ದಾವಣಗೆರೆ ತಾಲ್ಲೂಕುಗಳಲ್ಲಿನ ಒಟ್ಟು 96 ಗ್ರಾಮಗಳ 102 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಈ ಕಾಮಗಾರಿ ಬಹುತೇಕ ಮುಕ್ತಾಯದ ಹಂತಕ್ಕೆ ತಲುಪಿದ್ದು, ಕೆಲವೇ ದಿನಗಳಲ್ಲಿ ಚಾಲನೆಗೊಳ್ಳಲಿದೆ ಎಂದರು.
ಎಲ್ಲಾ ಕೆರೆ ತುಂಬಿಸಲು ಮಾಸ್ಟರ್ ಪ್ಲಾನ್; ಮಳೆಗಾಲದಲ್ಲಿ ಜಿಲ್ಲೆಯಲ್ಲಿನ ಎಲ್ಲಾ ಕೆರೆಗಳನ್ನು ಭರ್ತಿ ಮಾಡುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಳದ ಜೊತೆಗೆ ರೈತರ ಕೃಷಿಚಟುವಟಿಕೆಗಳಿಗೆ ಸಾಕಷ್ಟು ಲಾಭವಾಗಲಿರುವುದರಿಂದ ಮಾದರಿ ಯೋಜನೆಯಾಗಿ ಪರಿಗಣಿಸಲು ಯೋಜನೆ ತಯಾರಿಸಲು ಉದ್ದೇಶಿಸಲಾಗಿದೆ ಎಂದರು.
ಜಿಲ್ಲೆಯ ಗ್ರಾಮೀಣಾಭಿವೃದ್ದಿ ಒತ್ತು ನೀಡಿದ್ದು ಖಾತರಿಯಡಿ 13.32 ಮಾನವ ದಿನ ಸೃಜಿಸಿ 46.220 ಕುಟುಂಬಗಳಿಗೆ ಕೆಲಸ ನೀಡಿ 44.85 ಕೋಟಿ ನೀಡಲಾಗಿದೆ. ಮತ್ತು ಕಾಲುವೆಗಳಲ್ಲಿನ ಹೂಳು ತೆಗೆಯುವ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ನಗರ ಮತ್ತು ಪಟ್ಟಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 200 ಕೋಟಿ ಮತ್ತು ನಗರೋತ್ಥಾನ 4 ರಲ್ಲಿ 59.50 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೊಂಡು ವಿವಿಧ ಮೂಲಭೂತ ಸೌಕರ್ಯ ಅಭಿವೃದ್ದಿಪಡಿಸಲಾಗಿದೆ.
ದಾವಣಗೆರೆ ಜಿಲ್ಲೆಯು ತೋಟಗಾರಿಕೆಯಲ್ಲಿ ಮುಂಚೂಣಿಯಲ್ಲಿದ್ದು, ಒಂದು ಲಕ್ಷ ಹೆಕ್ಟೇರ್ ಗಿಂತ ಹೆಚ್ಚು ಪ್ರದೇಶದಲ್ಲಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆಯಡಿ ರೂ. 5 ಕೋಟಿ ಅನುದಾನದಲ್ಲಿ ನಗರದಲ್ಲಿ 10 ಉದ್ಯಾನವನಗಳನ್ನು ನಿರ್ಮಿಸಲು ಯೋಜಿಸಿದೆ. ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಉಪ ಖನಿಜ ರಿಯಾಯಿತಿ ನಿಯಮಗಳನ್ನು ಮತ್ತಷ್ಟು ಸರಳೀಕರಿಸಿ, ಸುಲಭವಾಗಿ ಜನರಿಗೆ ಮರಳು ಮತ್ತು ಎಂ-ಸ್ಯಾಂಡ್ ದೊರಕುವಂತೆ ಕ್ರಮವಹಿಸಲಾಗಿದೆ ಎಂದರು.
ಚಿಗಟೇರಿ ಜಿಲ್ಲಾ ಆಸ್ಪತ್ರೆಯ ದುರಸ್ಥಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಹಾಗೂ ಹಂತ ಹಂತವಾಗಿ ಹೊಸ ಬ್ಲಾಕ್‍ಗಳ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆಗೆ ಆರೋಗ್ಯ ಸಚಿವರ ಜೊತೆ ಚರ್ಚಿಸಿದ್ದು ಮುಂದಿನ ದಿನಗಳಲ್ಲಿ ಇದು ಸಾಕಾರವಾಗಲಿದೆ. ಪ್ರಸ್ತುತ ಡೆಂಗ್ಯೂ ಜ್ವರ ಹೆಚ್ಚುತ್ತಿರುವುದರಿಂದ ಜಿಲ್ಲಾ ಮಟ್ಟದಲ್ಲಿ ಡೆಂಗ್ಯೂ ವಾರ್ ರೂಂ ತೆರೆದು ಡೆಂಗ್ಯೂ ಜ್ವರ ಹರಡದಂತೆ ಮುಂಜಾಗೃತೆ ವಹಿಸಲಾಗಿದೆ ಎಂದರು.
ಈ ವರ್ಷ ಸಮಾಜ ಕಲ್ಯಾಣ ಇಲಾಖೆಯಿಂದ 2 ಕಾಲೇಜು ಹಾಸ್ಟೆಲ್ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 8 ಕಾಲೇಜು ಹಾಸ್ಟೆಲ್‍ಗಳು ಹೊಸದಾಗಿ ಮಂಜೂರಾಗಿದ್ದು ಕಟ್ಟಡ ನಿರ್ಮಾಣಕ್ಕೆ ನಿವೇಶನ ನೀಡಿ ಕಟ್ಟಡ ನಿರ್ಮಾಣಕ್ಕೂ ಅನುದಾನ ನೀಡಲಾಗಿದೆ ಎಂದರು.
ಆಕರ್ಷಕ ಪಥ ಸಂಚಲನ : ಶಿಸ್ತಿನ ಮತ್ತು ಆಕರ್ಷಕ ಪಥ ಸಂಚಲನದಲ್ಲಿ ಒಟ್ಟು 31 ತಂಡಗಳು ಪಾಲ್ಗೊಂಡಿದ್ದವು, ಮಹೇಶ್ ಪಾಟೀಲ್ ಆರ್.ಎಸ್.ಐ. ನೇತೃತ್ವದ ಡಿಎಆರ್ ತಂಡ, ನಗರ ಉಪವಿಭಾಗ ಪೆÇಲೀಸ್ ಸಚೀನ್ ಬಿರಾದಾರ್ ತಂಡ, ಗ್ರಾಮಾಂತರ ಉಪವಿಭಾಗ ಪೊಲೀಸ್ ಶೀಪತಿ ಗಿನ್ನಿ ತಂಡ, ಗೃಹರಕ್ಷಕ ದಳದಿಂದ ಹಾಲೇಶ್, ಅಗ್ನಿಶಾಮಕದಳ ಪರುಶುರಾಮಪ್ಪ, ಡಿ.ಆರ್.ಎಂ. ಕಾಲೇಜ್‍ನಿಂದ ಶರನಿಲ್ ಡಿ.ಕೆ., ಎಆರ್‍ಜಿ ಕಾಲೇಜ್‍ನಿಂದ ಚಿನ್ಮಯ ಎಂ.ಎ, ಜಿ.ಎಫ್..ಜಿ.ಸಿ ಕಾಲೇಜ್‍ನಿಂದ ಗಗನ್ ದೀಪ್, ಜಿ.ಎಂ.ಐ.ಟಿ ಕಾಲೇಜಿನಿಂದ ಶಶಾಂಕ್, ಎ.ವಿ.ಕೆ ಕಾಲೇಜಿನಿಂದ ವೀಣಾ, ಡಿ.ಆರ್.ಆರ್ ಕಾಲೇಜ್‍ನಿಂದ ಮೊಹಮ್ಮದ್ ರಿಹಾನ್, ಸೆಂಟ್ ಫಾಲ್ಸ್ ಸ್ಕೂಲ್‍ನಿಂದ ಗೌತಮಿ , ಪಿ.ಎಸ್.ಎಸ್.ಇ.ಎಂ.ಆರ್ ತೋಳಹುಣಸೆ ಶ್ರವಣ್ ಬಿ.ಎನ್, ಪೆÇಲೀಸ್ ಪಬ್ಲಿಕ್ ರೆಸಿಡೆನ್ಶಿಯಲ್ ಸ್ಕೂಲ್‍ನಿಂದ ಸುಜಯ್ ಎಸ್.ಗೌಡ, ಸಿದ್ದೇಶ್ವರ ಸ್ಕೂಲ್ ಆನಗೋಡು ಸಿದ್ದೇಶ್, ಸಿದ್ದಗಂಗಾ ಪಿಯು ಕಾಲೇಜಿನಿಂದ ಮುರಾರಿ ಜಿ.ಆರ್, ಬಾಪೂಜಿ ಹೈಸ್ಕೂಲ್‍ನಿಂದ ಸನಿಕಾ, ಸಿದ್ದಗಂಗಾ ಸ್ಕೂಲ್‍ನಿಂದ ಸಿದ್ದೇಶ್, ಸಿದ್ದಗಂಗಾ ಸ್ಕೂಲ್ ಎಸ್.ಪಿ.ಸಿ ಗಲ್ರ್ಸ್ ಟ್ರೂಪ್‍ನಿಂದ ರೋಷಣಿ, ಸೇಂಟ್ ಫಾಲ್ಸ್ ಸೆಂಟ್ರಲ್ ಸ್ಕೂಲ್ ಗರ್ಲ್ ಟ್ರೂಪ್‍ನಿಂದ ಶ್ರೀಲೇಖ, ಭಾರತ ಸ್ಕೌಟ್ ಅಂಡ್ ಗೈಡ್ಸ್ ಡಿಸ್ಟ್ರಿಕ್ಟ್ ಟ್ರೂಪ್‍ನಿಂದ ಮಾನಸ ಡಿ, ಎಕ್ಸ್ ಮುನ್ಸಿಪಾಲ್ ಬಾಯ್ ಹೈಸ್ಕೂಲ್‍ನಿಂದ ಜುನೆದ್ ಅಹಮದ್ , ಜೈನ್ ಪಬ್ಲಿಕ್ ಸ್ಕೂಲ್‍ನಿಂದ ಪೃಥ್ವಿ ಎಸ್.ಬಿ , ಸರ್ಟಿಪೈಡ್ ಸ್ಕೂಲ್‍ನಿಂದ ಪುನೀತ್, ಮೌನೇಶ್ವರ ಡಪ್ ಅಂಡ್ ಡಂಬ್ ಸ್ಕೂಲ್‍ನಿಂದ ತಿಪ್ಪೇಸ್ವಾಮಿ, ಗಾಮೆರ್ಂಟ್ ಬಾಯ್ಸ್ ಸ್ಕೂಲ್‍ನಿಂದ ಓಂಕಾರ್, ಪುಷ್ಪ ಮಹಾಲಿಂಗಪ್ಪ ಸ್ಕೂಲ್‍ನಿಂದ ನಿರಂತರ , ಸೇಂಟ್ ಜಾನ್ಸ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್‍ನಿಂದ ಗೀತಾಂಜಲಿ, ರಾಷ್ಠ್ರೋತ್ಸವದತ್ಥನ ವಿದ್ಯಾ ಕೇಂದ್ರ ಹೈಸ್ಕೂಲ್‍ನಿಂದ ತನ್ಮಯ, ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಬ್ಯಾಂಡ್ ಮಿಥುನ ಬಿದರಿ ತಂಡ ಪಥ ಸಂಚಲನದಲ್ಲಿ ಭಾಗವಹಿಸಿ ಅತ್ಯುತ್ತಮವಾದ ಪ್ರದರ್ಶನ ನೀಡಿದವು. ಜಿಲ್ಲಾ ಪೊಲೀಸ್ ವಾದ್ಯ ವೃಂದ ಬ್ಯಾಂಡ್ ಮಾಸ್ಟರ್ ಪುರಂದರ ನಾಯ್ಕ ತಂಡದಿಂದ ರಾಷ್ಟ್ರಗೀತೆ ಸಹಿತ ವಾದ್ಯವನ್ನು ಪ್ರಸ್ತುತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ವಿದ್ಯಾರ್ಥಿನಿಲಯರು ನಾವು ಭಾರತೀಯರು ದೇಶಭ್ತಕಿ ಗೀತೆಗೆ ನೃತ್ಯ ರೂಪಕ ಪ್ರದರ್ಶನ ನೀಡಿದರು. ರಾಜನಹಳ್ಳಿ ಸೀತಮ್ಮ ಸರ್ಕಾರಿ ಪ್ರೌಢಶಾಲೆ, ಸೆಂಟ್ ಮೇರಿಸ್ ಹಿರಿಯ ಪ್ರಾಥಮಿಕ ಹಾಗೂ ಪದವಿ ಪೂರ್ವ ಕಾಲೇಜು, ಜೈನ್ ವಿದ್ಯಾಲಯದಿಂದ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ದಾವಣಗೆರೆ ಲೋಕಸಭಾ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಮೇಯರ್ ವಿನಾಯಕ್ ಬಿ.ಹೆಚ್, ಪೊಲೀಸ್ ಮಹಾನಿರೀಕ್ಷಕರಾದ ಬಿ.ರಮೇಶ್, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ರಕ್ಷಣಾಧಿಕಾರಿ ಉಮಾಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಹಾಗೂ ವಿವಿಧ ಪಾಲಿಕೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು