ಆರ್ಥಿಕ ಸಬಲೀಕರಣಕ್ಕೆ ಜೇನು ಸಾಕಾಣಿಕೆ ಸಹಕಾರಿ : ಶೈಲಾ ಎನ್

Vijayanagara Vani
ಆರ್ಥಿಕ ಸಬಲೀಕರಣಕ್ಕೆ ಜೇನು ಸಾಕಾಣಿಕೆ ಸಹಕಾರಿ : ಶೈಲಾ ಎನ್
ಶಿವಮೊಗ್ಗ, ಫೆ.18 ಆರ್ಥಿಕ ಸಬಲೀಕರಣಕ್ಕೆ ಜೇನು ಸಾಕಾಣಿಕೆ ಒಂದು ಉತ್ತಮ ಮಾರ್ಗವಾಗಿದ್ದು, ಜೇನು ಸಾಕಾಣಿಕೆ ತರಬೇತಿಯ ಸದುಪಯೋಗ ಪಡೆಯಬೇಕೆಂದು ತೀರ್ಥಹಳ್ಳಿ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಶೈಲಾ ಎನ್ ತಿಳಿಸಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ತಾ.ಪಂ ತೀರ್ಥಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಐಸಿಎಆರ್, ಟಿಎಸ್‌ಪಿ ಯೋಜನೆ ‘ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಜೇನು ಸಾಕಾಣಿಕೆಯ ತಂತ್ರಗಳೊ0ದಿಗೆ ಪರಿಶಿಷ್ಟ ಪಂಗಡಗಳ ಸಬಲೀಕರಣ’ ಎಂಬ ವಿಷಯದಡಿ ಫೆ.14 ರಿಂದ 16 ರವರೆಗೆ ತೀರ್ಥಹಳ್ಳಿ ಗ್ರಾಮೀಣಾಭಿವೃದ್ದಿ ಭವನದಲ್ಲಿ ಏರ್ಪಡಿಸಲಾಗಿದ್ದ ಜೇನು ಸಾಕಾಣಿಕೆ ತರಬೇತಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೇನು ಸಾಕಾಣಿಕೆ ಒಂದು ಉತ್ತಮ ತರಬೇತಿಯಾಗಿದೆ. ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಸಾಕಾಣಿಕೆ ಕೈಗೊಂಡು ನಂತರ ಹಲವಾರು ಪೆಟ್ಟಿಗೆಗಳನ್ನು ಇಟ್ಟು ದೊಡ್ಡ ಪ್ರಮಾಣದಲ್ಲಿ ಮಾಡಿ ಕುಟುಂಬದ, ಸಮಾಜದ ಹಾಗೂ ದೇಶದ ಅಭಿವೃದ್ದಿಗೆ ಕಾರಣರಾಗುವಂತೆ ಕರೆ ನೀಡಿದರು.
ಆರ್ಥಿಕ ಸಬಲೀಕರಣಕ್ಕೆ ಈ ತರಬೇತಿಯು ಸಹಕಾರಿಯಾಗಿದ್ದು ಆಸಕ್ತರೆಲ್ಲ ಈ ತರಬೇತಿಯ ಪ್ರಯೋಜನ ಪಡೆದುಕೊಂಡು ತಮ್ಮ ಜೀವನ ಸುಧಾರಿಸಿಕೊಳ್ಳುವಂತೆ ಸಲಹೆ ನೀಡಿದರು.
ಇದೇ ವೇಳೆ ಶಿಬಿರಾರ್ಥಿಗಳಿಗೆ ತರಬೇತಿ ಪ್ರಮಾಣ ಪತ್ರದೊಂದಿಗೆ ಜೇನು ಸಾಕಾಣಿಕೆಗೆ ಅಗತ್ಯವಾದ ಪರಿಕರಗಳನ್ನು ವಿತರಣೆ ಮಾಡಲಾಯಿತು.
ನೋಡಲ್ ಅಧಿಕಾರಿ ಹಾಗೂ ಪ್ರಧಾನ ಪರಿಶೋಧಕರಾದ ಡಾ.ಜಯಲಕ್ಷಿö್ಮ ನಾರಾಯಣ ಹೆಗಡೆ ಕಾರ್ಯಕ್ರಮ ನಿರ್ವಹಿಸಿ, ಮೂರು ದಿನಗಳ ಕಾಲ ನಡೆದ ತರಬೇತಿಯ ಕುರಿತು ವಿವರಣೆ ನೀಡಿದರು. ವಿಘ್ನೇಶ ತಲಕಾಲಕೊಪ್ಪ, ಪ್ರತೀಕ್ ಇತರರು ಹಾಜರಿದ್ದರು. ತೀರ್ಥಹಳ್ಳಿ ತಾಲ್ಲೂಕಿನ ಸುತ್ತಮುತ್ತಲಿನ ಪರಿಶಿಷ್ಟ ಪಂಗಡಗಳ 30 ರೈತ ಮಹಿಳೆಯರು, ರೈತರು, ಯುವಕ ಯುವತಿಯರು ಭಾಗವಹಿಸಿದ್ದರು.
Share This Article
error: Content is protected !!
";