ಕಾರಟಗಿ : ಪಟ್ಟಣದ ಸೇರಿ ತಾಲೂಕಿನ ನಾನಾ ಗ್ರಾಮಗಳಲ್ಲಿ ಗುರುವಾರ ಸಂಜೆ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ರೈತರು ಆತಂಕಕ್ಕೀಡಾಗಿದ್ದಾರೆ.
ಇಂದು ಸಂಜೆ 5 ಗಂಟೆ ಸುಮಾರಿಗೆ ಸಣ್ಣದಾಗಿ ಪ್ರಾರಂಭಗೊಂಡ ಮಳೆ, ಏಕಾಏಕಿ ಬಿರುಸು ಪಡೆದು ಅರ್ಧ ಗಂಟೆ ವರೆಗೂ ಸುರಿಯಿತು,
ಪಟ್ಟಣದ ಸೇರಿದಂತೆ ರಾಮನಗರ , ಪನ್ನಾಪುರ,ನಾಗನಕಲ್, ಬೇವಿನಾಳ, ರವಿ ನಗರ, ಮರ್ಲಾನಹಳ್ಳಿ ಸೇರಿ ಹಲವೆಡೆ ಮಳೆಯ ಪ್ರಮಾಣ ಜೋರಾಗಿತ್ತು.
ಏಕಾಏಕಿ ಮಳೆ ಸುರಿದ ಕಾರಣ ಕಟಾವಿಗೆ ಬಂದಿದ್ದ ಭತ್ತ ಹಲವೆಡೆ ನೆಲಕಚ್ಚಿದರೆ. ಭತ್ತ ಕಟಾವು ಮಾಡುವಷ್ಟರಲ್ಲಿ ಇನ್ನೇನಾಗಲಿದೆ ಎಂಬ ಆತಂಕ ರೈತರಲ್ಲಿ ಕಾಡುತ್ತಿದೆ.