Ad image

ಕಾಂಗ್ರೇಸ್ ಸರ್ಕಾರದ ವಿರುದ್ಧ ಬಿ.ಜೆ.ಪಿ. ಕಾರ್ಯಕರ್ತರಿಂದ ಪ್ರತಿಭಟನೆ:

Vijayanagara Vani
ಕಾಂಗ್ರೇಸ್ ಸರ್ಕಾರದ ವಿರುದ್ಧ ಬಿ.ಜೆ.ಪಿ. ಕಾರ್ಯಕರ್ತರಿಂದ ಪ್ರತಿಭಟನೆ:

ಸಿರುಗುಪ್ಪ.ಏ.10:- ರಾಜ್ಯ ಕಾಂಗ್ರೇಸ್ ಪಕ್ಷದ ಸರ್ಕಾರದ ಜನ ವಿರೋಧಿ ಧೋರಣೆ ನೀತಿ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ತಾಲೂಕು ಬಿ.ಜೆ.ಪಿ. ಘಟಕದ ವತಿಯಿಂದ ಮಾಜಿ ಶಾಸಕ ಎಂ.ಎಸ್.ಸೊಮಲಿoಗಪ್ಪ ನೇತೃತ್ವದಲ್ಲಿ ಗುರುವಾರ ನಗರದ ಗಾಂಧಿವೃತದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಂ.ಎಸ್.ಸೋಮಲಿoಗಪ್ಪ ಮಾತನಾಡಿ ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನರಿಗೆ ಬರೆ ಎಳೆದಿದೆ, ಒಂದು ಸಮುದಾಯದ ಪರ ಸರ್ಕಾರ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ಅವರು ರಾಜ್ಯ ಸರ್ಕಾರದ ಬಡ್ಜೆಟ್ ಪುಸ್ತಕದ ಅರ್ಧಭಾಗ ಮುಸ್ಲಿಂ ತುಷ್ಟಿಕರಣದ ಕಾರ್ಯಕ್ರಮ ಘೋಷಿಸಲಾಗಿದೆ. ಮುಸ್ಲಿಂ ಗುತ್ತಿಗೆದಾರರಿಗೆ ಶೇಕಡ 4ರಷ್ಟು ಮೀಸಲಾತಿ, 250 ಉರ್ದು ಮಾಧ್ಯಮ ಶಾಲೆಗಳಿಗೆ ರೂ.500ಕೋಟಿ ಅನುದಾನ, ಮೌಲನಾ ಆಜಾದ್ ಶಾಲೆಗಳಿಗೆ 400 ಕೋಟಿ ಸೇರಿದಂತೆ ಹಲವುಯೋಜನೆಗಳನ್ನು ಘೋಷಿಸಲಾಗಿದೆ. ಇರವನ್ನು ಬಿಟ್ಟು ರಾಜ್ಯದಲ್ಲಿ ಬೇರೆ ಯಾವ ಧರ್ಮದವರು ಉನ್ನತ ಶಿಕ್ಷಣ ಪಡೆಯುತ್ತಿಲ್ಲವೇ ಎಂದು ಪ್ರಶ್ನಿಸಿದ ಅವರು 25ಸಾವಿರ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ತರಬೇತಿ ನೀಡಲು ಸರ್ಕಾರ ಮುಂದಾಗಿದೆ. ನಿಜವಾಗಿ ಕರಾಟೆ ತರಬೇತಿ, ಹಿಂದೂ ಹೆಣ್ಣು ಮಕ್ಕಳಿಗೆ ಕೊಡಬೇಕು ಎಂದು ಒತ್ತಾಯಿಸಿದರು.
ಬಿ.ಜೆ.ಪಿ.ತಾ.ಅಧ್ಯಕ್ಷ ಹೆಚ್.ಎಂ.ಮಲ್ಲಿಕಾರ್ಜುನಸ್ವಾಮಿ ಕುಂಟ್ನಾಳ್, ಬಿ.ಜೆ.ಪಿ.ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಎಸ್.ಸಿದ್ದಪ್ಪ, ನಗರಸಭೆ ಮಾಜಿ ಅಧ್ಯಕ್ಷ ಬಿ.ಈರಣ್ಣ, ಮುಖಂಡರಾದ ಧರಪ್ಪ ನಾಯಕ, ಮಹಾದೇವ, ಬಂಡ್ರಾಳ್ ಮಲ್ಲಿಕಾರ್ಜುನ, ಮುದೇನೂರು ವೀರೇಶ, ಬಿ.ಹನುಮೇಶ, ಪೂಜಾರಿ ಗಾದಿಲಿಂಗ, ಪೂಜಾರಿ ಶ್ರೀನಿವಾಸ ಮತ್ತು ವಿವಿಧ ಗ್ರಾಮಗಳ ಕಾರ್ಯಕರ್ತರು ಇದ್ದರು.
ರಾಜ್ಯ ಕಾಂಗ್ರೇಸ್ ಪಕ್ಷದ ಸರ್ಕಾರದ ಜನ ವಿರೋಧಿ ಧೋರಣೆ ನೀತಿ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ತಾಲೂಕು ಬಿ.ಜೆ.ಪಿ. ಘಟಕದ ವತಿಯಿಂದ ಮಾಜಿ ಶಾಸಕ ಎಂ.ಎಸ್.ಸೊಮಲಿoಗಪ್ಪ ನೇತೃತ್ವದಲ್ಲಿ ನಗರದ ಗಾಂಧಿವೃತದಲ್ಲಿ ಪ್ರತಿಭಟನೆ ನಡೆಸಿದರು.

Share This Article
error: Content is protected !!
";