Ad image

ಬಹುವಿಧ ದಾಸೋಹದ ಜಾತ್ರೆ

Vijayanagara Vani

ಕೈಬೀಸಿ ನಮ್ಮೆಲ್ಲರನು ಕರೆಯುತಲಿಹುದು
ನಮ್ಮೂರಿನ ಅದ್ದೂರಿಯ ಜಾತ್ರೆಯು/ಪ/
ಗದಗ ಮಠದ ಜಾತ್ರೆಯ ಸೊಬಗಿನ ಸಿರಿಯನು
ನೋಡಿ ಆನಂದಿಸಿರಿ ನಾಡಿನ ಸೊಗಡನು
ಸಂಭ್ರಮಿಸಲು ಮರೆಯದೆ ಬನ್ನಿ
ಕಣ್ತುಂಬಿ ಅನುಭವಿಸಲು ಬನ್ನಿ/೧/
ರಕ್ತದಾನ ಅತ್ಯುತ್ತಮ ಮಹಾದಾನ
ಸ್ರೃಷ್ಟಿಕರ್ತನಂತೆ ಜೀವದಾನಕೆ ಪ್ರೇರಕವು
ಆರೋಗ್ಯ ಸಂರಕ್ಷಣೆ ತಪಾಸಣೆಯು
ಆರೋಗ್ಯವರ್ಧನೆಯ ಪ್ರತೀಕವು/೨/
ವ್ಯಸನ ಮುಕ್ತ ಪೂಜ್ಯರ ಪಾದಯಾತ್ರೆಯು
ರೋಗಮುಕ್ತ ಪರಿಸರಕೆ ಸ್ಪೂರ್ತಿಸೆಲೆಯು
ಯೋಗಧ್ಯಾನ ಪ್ರಾಣಾಯಮ ಶಿಬಿರವು
ದೀರ್ಘಾಯುಷಿ ಸೌಂದರ್ಯವರ್ಧಕವು/೩/
ದೇಶಿತಳಿ ಜಾನುವಾರು ಪ್ರದರ್ಶನವು
ಕ್ರೃಷಿಮೇಳ ವಿಚಾರ ಸಂಕಿರಣವು
ಸಾವಯವ ನಮ್ಮ ಕೃಷಿ ಪದ್ಧತಿಯು
ಸಮತೋಲನ ಆಹಾರಕೆ ರಹದಾರಿಯು/೪/
ಎಳ್ಹಚ್ಚಿದ ರೊಟ್ಟಿ ತರತರಹದಪಲ್ಯೆ ಚಟ್ನಿಯು
ನಾರಿಯರ ಬಸವಬುತ್ತಿ ಸವಿರುಚಿಯು
ಕರ್ಚಿಕಾಯಿ ಕರಿಹಿಂಡಿ ಮೊಸರನ್ನವು
ಸರ್ವರ ಬಾಯಲಿ ನೀರೂರಿಸುವವು/೫/
ತಜ್ಞರ ವೈಚಾರಿಕ ಚಿಂತನ ಮಂಥನವು
ಜಾಗೃತಿಯ ಹುರಿದುಂಬಿಸುತಲಿಹುದು
ದಿಗ್ಗಜ ಸಾಧಕರ ಕಲಾವಿದರ ಸನ್ಮಾನವು
ಪುಸ್ತಕಬಿಡುಗಡೆ ಜ್ಞಾನತ್ರೃಷೆಯ ರೂವಾರಿಯು/೬/
ಬಹುವಿಧದ ವಿಶೇಷ ದಾಸೋಹವು
ಜಾತ್ರಾ ಮಹೋತ್ಸವದ ವೈಭವವು
ಸಡಗರದ ಅದ್ದೂರಿಯ ವಿಜ್ರಂಭಣೆಯು
ಆಯಸ್ಕಾಂತದಂತೆ ಸರ್ವಾಕರ್ಷಣೆಯು/೭/


ಪ್ರೊ. ಶಕುಂತಲಾ.ಚನ್ನಪ್ಪ.ಸಿಂಧೂರ.ಗದಗ.
೯೯೮೦೭೧೧೪೩೫.

Share This Article
error: Content is protected !!
";