Ad image

ಬಳ್ಳಾರಿ: ನಾಗರಿಕ ರಕ್ಷಣಾ ಕಾರ್ಯಚರಣೆಯ ಅಣುಕು ಪ್ರದರ್ಶನ

Vijayanagara Vani
ಬಳ್ಳಾರಿ: ನಾಗರಿಕ ರಕ್ಷಣಾ ಕಾರ್ಯಚರಣೆಯ ಅಣುಕು ಪ್ರದರ್ಶನ
ಬಳ್ಳಾರಿ,ಮೇ 17
ಪ್ರಸ್ತುತ ದೇಶದಲ್ಲಿ ಯುದ್ಧ ಸಂಭವಿಸುವ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರದ ಕೇಂದ್ರ ಗೃಹ ಸಚಿವಾಲಯ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ಮುಂದೆ ಆಗಬಹುದಾದ ಎಲ್ಲಾ ರೀತಿಯ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತೆ ಮೂಡಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ವತಿಯಿಂದ ಅಪರೇಶನ್ ಅಭ್ಯಾಸ್ ಅಡಿ ನಾಗರಿಕ ರಕ್ಷಣಾ ಕಾರ್ಯಚರಣೆಯ ಅಣುಕು ಪ್ರದರ್ಶನವನ್ನು ಶನಿವಾರ ಸಂಡೂರಿನ ತೋರಣಗಲ್ಲು ಬಳಿಯ ಜೆಎಸ್‌ಡಬ್ಲೂö್ಯ ವಿಜಯನಗರ ಟೌನ್‌ಶಿಪ್ ನಲ್ಲಿ ಹಮ್ಮಿಕೊಳ್ಳಲಾಯಿತು.
ಅಣುಕು ಪ್ರದರ್ಶನದಲ್ಲಿ ನುರಿತ ಅಗ್ನಿಶಾಮಕ ಇಲಾಖೆ, ಪೋಲಿಸ್ ಇಲಾಖೆ ಹಾಗೂ ಜೆಎಸ್‌ಡಬ್ಲೂö್ಯ ನ ಕ್ಯೂಆರ್‌ಟಿ, ಸಂಶೋಧನಾ ಮತ್ತು ರಕ್ಷಣೆ, ವಿಮಾನ ನಿಲ್ದಾಣ ಭದ್ರತಾ ತಂಡ, ಶ್ವಾನದಳ, ಅಗ್ನಿಶಾಮಕ ದಳದ ತಂಡ ಮತ್ತು ಇತರೆ ತಂಡ ಒಳಗೊಂಡoತೆ ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿಗಳು ಅಣುಕು ಪ್ರದರ್ಶನ ನಡೆಸಿಕೊಟ್ಟರು.
ಅಣಕು ಪ್ರದರ್ಶನದಲ್ಲಿ ಅನಾಹುತ ಸಂಭವಿಸಿದಲ್ಲಿ ಕೈಗೊಳ್ಳಬಹುದಾದ ಪ್ರಥಮ ಚಿಕಿತ್ಸಾ ಕಾರ್ಯ, ಸುರಕ್ಷಿತ ಸ್ಥಳದಲ್ಲಿ ಅಡಗುವಿಕೆ, ಶ್ವಾನಗಳ ಕಾರ್ಯಾಚರಣೆ ಹಾಗೂ ಇತರೆ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಯಪಡಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪಿ.ಪ್ರಮೋದ್, ತೋರಣಗಲ್ಲು ವಿಭಾಗ ಡಿ.ಎಸ್.ಪಿ ಪ್ರಸಾದ್ ಗೋಖಲೆ ಸೇರಿದಂತೆ ಆರೋಗ್ಯ ಇಲಾಖೆ, ಕಾರ್ಖಾನೆಗಳು ಬಾಯ್ಲರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥö್ಯ ಇಲಾಖೆ, ಗೃಹ ರಕ್ಷಕದಳ ಅಧಿಕಾರಿಗಳು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳು, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರು ಮತ್ತು ಸಾರ್ವಜನಿಕರು ಹಾಜರಿದ್ದರು

Share This Article
error: Content is protected !!
";