ಕೊಪ್ಪಳ ಮೇ 29 ರಾಷ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾ ಸರ್ವೇಕ್ಷಣಾ ಘಟಕದ ಐಡಿಎಸ್‌ಪಿ ಕಾರ್ಯಕ್ರಮದಡಿಯಲಲಿ ಗುತ್ತಿಗೆ ಆಧಾರದಲ್ಲಿ ಹಾಗೂ ನವೀಕರಣದ ಷರತ್ತಿಗೊಳಪಟ್ಟು ಎನ್.ಹೆಚ್.ಎಂ ನಿಯಮಾವಳಿ ಹಾಗೂ ಮೆರಿಟ್ ಮತ್ತು ರೋಸ್ಟರ್ ಆಧಾರದ ಮೇಲೆ ಜಿಲ್ಲಾ ಎಪಿಡೆಮಿಯೋಲಾಜಿಸ್ಟ್ ಹುದ್ದೆ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಯ ನೇಮಕಾತಿಗೆ ಸಂಬoಧಿಸಿದ ಪೂರ್ಣ ಪ್ರಮಾಣದ ಹಕ್ಕನ್ನು ಜಿಲ್ಲಾ ಆಯ್ಕೆ ಸಮಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು ಕಾಯ್ದಿರಿಸಿಕೊಂಡಿದೆ. ಆಯ್ಕೆಯನ್ನು ಮೆರಿಟ್ ಕಮ್ ರೋಸ್ಟರ್ ಆಧಾರದಲ್ಲಿ ಮಾಡಲಾಗುವುದು. ಅರ್ಹ ಅಭ್ಯರ್ಥಿಗಳು ಜಿಲ್ಲಾ ವೆಬ್‌ತಾಣ www.koppal.nic.in ಮೂಲಕ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಆಫ್‌ಲೈನ್ ಅರ್ಜಿಯನ್ನು ಸ್ವೀಕರಿಸುವುದಿಲ್ಲ.
ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿದೆ. ವಿದ್ಯಾರ್ಹತೆ, ವೇತನ ಮುಂತಾದ ವಿವರಗಳಿಗಾಗಿ ಜಿಲ್ಲಾ ವೆಬ್‌ತಾಣದಲ್ಲಿರುವ ನೇಮಕಾತಿ ಅಧಿಸೂಚನೆಯನ್ನು ಓದಿಕೊಳ್ಳಬಹುದು. ಕಚೇರಿ ವೇಳೆಯಲ್ಲಿ ದೂ.ಸಂ. 08539-230423 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಉಪಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.