ಮಾನ್ವಿ: ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ರೈತ ಸಂಘ ಎ.ಐ.ಯು.ಕೆ.ಎಸ್. ಜಿಲ್ಲಾ ಸಮಿತಿ ವತಿಯಿಂದ ನಡೆದ ಕಾರ್ಯಕರ್ತರ ವಿಸ್ತçತ ಸಭೆಯನ್ನು ಉದ್ಘಾಟಿಸಿ ಕೆ.ಆರ್.ಎಸ್.ಸಂಘದ ರಾಜ್ಯಧ್ಯಾಕ್ಷ ಡಿ.ಹೆಚ್. ಪೂಜಾರ್ ಮಾತನಾಡಿ ರೈತರು ಬೆಳೆದ ಭತ್ತ,ಜೋಳ ಸೇರಿದಂತೆ ಇತರ ಬೆಳೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ವರ್ಷ ಬೆಂಬಲ ಬೆಲೆ ಘೋಷಿಸುವಲ್ಲಿ ವಿಳಾಂಬ ಮಾಡುತ್ತಿರುವುದರಿಂದ ರೈತರಿಗೆ ನಷ್ಟವಾಗುತ್ತಿದೆ ಅದ್ದರಿಂದ ಜೋಳ ಸೇರಿದಂತೆ ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆಗೆ ಕಾನೂನು ರಚನೆ ಮಾಡಬೇಕು. ದೆಹಲ್ಲಿಯಲ್ಲಿ 3 ರೈತ ವಿರೋಧಿ ಕಾನೂನುಗಳ ರದ್ದು ಪಡಿಸುವುದಕ್ಕೆ ನಡೆದ ಹೋರಾಟದಲ್ಲಿ ನೂರಾರು ರೈತರು ಹುತತ್ಮಾರಾಗಿದ್ದಾರೆ. ಕೇಂದ್ರ ಸರ್ಕಾರ ನೀಡಿದ ಬರವಸೆಯಂತೆ 3 ಕಾಯ್ದೆಗಳನ್ನು ರದ್ದು ಪಡಿಸಿದರು ಕೂಡ ರಾಜ್ಯ ಸರ್ಕಾರ ಭೂಗುತ್ತಿಗೆ ,ಭೂಖರೀದಿ ಕಾಯ್ದೆ,ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿ, ರೈತರ ಪಂಪ್ ಸೇಟ್ ಗಳಿಗೆ ಸ್ಮಾರ್ಟ ಮೀಟರ್ ಅಳವಡಿಸುವ ಕಾಯ್ದೆಯನ್ನು ವಾಪಸ್ ಪಡೆಯುವುದು,ಹೊಸ ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಕೇಂದ್ರದ ರಾಷ್ಟಿçÃಯ ಕೃಷಿ ಮಾರುಕಟ್ಟೆ ಮಸೂದೆಯನ್ನು ರದ್ದು ಗೊಳ್ಳಿಸುವುದು. ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರುವುದು. ರೈತರ ಕೃಷಿ ಸಾಲವನ್ನು ಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಜುಲೈ.9 ರಂದು ದೆಹಲಿಯಲ್ಲಿ ಅಲ್ ಇಂಡಿಯಾ ಕಿಸಾನ್ ಸಂಘಟನೆ ಜೊತೆಗೂಡಿ,ಅಖಿಲ ಭಾರತ ಟ್ರೇಡ್ ಯೂನಿಯನ್ಸ್,ಜೆ.ಸಿ.ಟಿ.ಯು ವತಿಯಿಂದ ಸಾರ್ವರ್ತಿಕವಾದ ಮುಷ್ಕರಕ್ಕೆ ನೀಡುವ ಕರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವ ಮೂಲಕ ಮುಷ್ಕರವನ್ನು ಯಶಸ್ವಿಗೊಳ್ಳಿಸಬೇಕು ಎಂದು ಕರೆ ನೀಡಿದರು.
ಕೆ.ಆರ್.ಎಸ್.ಜಿಲ್ಲಾಧ್ಯಕ್ಷರಾದ ಅಶೋಕ ನಿಲಗಲ್, ಜಿಲ್ಲಾ ಕಾರ್ಯದರ್ಶಿ ಚಿಟ್ಟಿಬಾಬು ಸಿಂಧನೂರು, ಮುಖಂಡರಾದ ಬಸವರಾಜ ಹೊಸಹಳ್ಳಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ರೇಣುಕಮ್ಮ, ಸ್ವಾಮಿದಾಸ್ ಓಣ್ಣಿ, ಶಿವರಾಜ್ ದೊಡ್ಡಿ, ನಾಗರಾಜ ಬೊಮ್ಮನಾಳ್, ಸೇರಿದಂತೆ ರೈತ ಸಂಘದ ಕಾರ್ಯಕರ್ತರು ಭಾಗವಹಿಸಿದರು.