Ad image

ಇಬ್ರಾಹಿಂಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಮತ್ತು ಮುಖ್ಯೋಪಾಧ್ಯಾಯರಿಗೆ ಬೀಳ್ಕೊಡುಗೆ ಸಮಾರಂಭ..

Vijayanagara Vani
ಇಬ್ರಾಹಿಂಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಮತ್ತು ಮುಖ್ಯೋಪಾಧ್ಯಾಯರಿಗೆ ಬೀಳ್ಕೊಡುಗೆ ಸಮಾರಂಭ..

ಇಬ್ರಾಹಿಂಪುರ ಗ್ರಾಮದಲ್ಲಿ ಸ್ಥಾಪನೆಯಾಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿಕ್ಷಣ ಕ್ಷೇತ್ರದಲ್ಲಿ 75 ವರ್ಷದ ಶ್ರೇಷ್ಠಯಾತ್ರೆ ಮುಗಿಸಿ ‘ಅಮೃತ ಮಹೋತ್ಸವ’ದ ಸಂಭ್ರಮವನ್ನು ಆಚರಿಸಿದೆ.1950ರಲ್ಲಿ ಆರಂಭವಾದ ಈ ಶಾಲೆ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಶ್ರೇಷ್ಠ ಶಿಕ್ಷಣ ನೀಡುವಲ್ಲಿ ಆಗ್ರಗಣ್ಯವಾಗಿದ್ದು, ಇಂದು ಗ್ರಾಮೀಣ ಭಾಗದ ಹೆಮ್ಮೆಯ ಕೇಂದ್ರವಾಗಿ ಪರಿಣಮಿಸಿದೆ. “ಸಮರ್ಪಿತ ಶಿಕ್ಷಕವೃಂದ, ಸುಸಜ್ಜಿತ ಕೊಠಡಿಗಳು, ವಿಶಾಲ ಮೈದಾನ, ಶೌಚಾಲಯಗಳು, ನವೀಕರಿತ ಬಿಸಿಯೂಟದ ವ್ಯವಸ್ಥೆ, ನೂತನ ಶೈಕ್ಷಣಿಕ ಪರಿಕರಗಳು ಸೇರಿದಂತೆ ಹಲವು ಮೂಲಭೂತ ಹಾಗೂ ಆಧುನಿಕ ಸೌಲಭ್ಯಗಳು ಈ ಶಾಲೆಗೆ ವಿಶೇಷ ಮೆರುಗು ನೀಡಿವೆ. ಸಮವಸ್ತ್ರ, ಪಠ್ಯಪುಸ್ತಕ, ಕಂಪ್ಯೂಟರ್ ಶಿಕ್ಷಣ, ಗ್ರಂಥಾಲಯ, ಆಟಿಕೆ ಸಾಮಗ್ರಿಗಳು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಹಸಿರು ಪರಿಸರದೊಂದಿಗೆ ಈ ಶಾಲೆ ಮಕ್ಕಳ ಆಕರ್ಷಣೆಯ ಕೇಂದ್ರವಾಗಿದೆ. “ಉನ್ನತ ಸಾಧನೆಯ ಪಯಣ:”ಈ ಶಾಲೆಯ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ನಂತರ ಎಂಜಿನಿಯರ್, ಡಾಕ್ಟರ್, ಶಿಕ್ಷಕರು ಪತ್ರಕರ್ತರು ಹಾಗೂ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ಶಾಲೆಯ ಶೈಕ್ಷಣಿಕ ಪಟುತೆ ಮತ್ತು ಗುಣಮಟ್ಟದ ಸಾಕ್ಷಿಯಾಗಿದ್ದು, ಇಂದಿಗೂ ಶಾಲೆಯ ಹಿರಿಮೆ ಪಾರಮ್ಯವಾಗಿದೆ. ಕ್ರೀಡಾ ಲೋಕದಲ್ಲೂ ತಳಮಳದ ಹಾದಿ:”ಅಂತರ್ ಶಾಲಾ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ನಾನಾ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಫೋಬಾಲ್‌ನಲ್ಲಿ 2ನೇ ಸ್ಥಾನ, ಥೋ ಬಾಲ್‌ನಲ್ಲಿ ತಾಲೂಕು ಮಟ್ಟದ ದ್ವಿತೀಯ ಸ್ಥಾನ, ಡಿಸ್ಕ್ ಪ್ರೋನಲ್ಲಿ ಬಿ. ಸಿಂಧು ರಾಜ್ಯ ಮಟ್ಟಕ್ಕೆ ಆಯ್ಕೆ, ಖೋ ಖೋ ಹಾಗೂ ಕಬಡ್ಡಿ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳೊಂದಿಗೆ ಶಾಲೆಯ ಕೀರ್ತಿಗೆ ಮೆರಗು ತಂದಿದ್ದಾರೆ. “”ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ, ನಿವೃತ್ತ ಪ್ರಭಾರಿ ಮುಖ್ಯಗುರುಗಳಾದ ಡಿ.ಎರಿಸ್ವಾಮಿ ಅವರ ಬೀಳ್ಕೊಡುಗೆ ಸನ್ಮಾನ ಇನ್ನೊಂದು ವಿಶೇಷ ವೆಂದರೆ ಡಿ.ಎರಿಸ್ವಾಮಿ ಅವರು ತಮ್ಮ ಶಿಕ್ಷಣ ವೃತ್ತಿಯನ್ನು ಇಬ್ರಾಹಿಂಪುರದಲ್ಲಿ ಮೊದಲು ಮಾಡಿ 28 ವರ್ಷ ಸೇವೆ ಸಲ್ಲಿಸಿ ಇಬ್ರಾಹಿಂಪುರದಲ್ಲಿ ನಿವೃತ್ತಿ ಹೊಂದಿದ್ದಾರೆ ಅವರು ಮಾಡಿದ ಸೇವೆಗೆ ಮೆಚ್ಚಿ ಊರಿನ ಗ್ರಾಮಸ್ಥರು ಪ್ರಮುಖರು ಹಿರಿಯರು ಎಲ್ಲರೂ ಸೇರಿ ಅದ್ದೂರಿಯಾಗಿ ಮೆರವಣಿಗೆ ಮೂಲಕ ಸನ್ಮಾನವನ್ನು ಮಾಡಿದರು ಮತ್ತು 1950 ರಿಂದ ಇಲ್ಲಿಯವರೆಗೆ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಪೂರ್ಣ ಕುಂಭ ಸ್ವಾಗತ ಕಾರ್ಯಕ್ರಮ ನಡೆಸಿದರು.ಈಗಿನ ಶಾಲಾ ಪ್ರಭಾರಿ ಮುಖ್ಯಗುರುಗಳಾದ ಹನುಮೇಶಿ.ಟಿ ಅವರು ಉಪಸಿ , ತರಿದ್ದರು.”ಅಮೃತ ಮಹೋತ್ಸವ ಆಚರಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ರೂಪಶ್ರೀ ಶಿಕ್ಷಕಿ ನಿರೂಪಣೆ ಮಾಡಿ ನಡೆಸಿಕೊಟ್ಟರು, ಭವ್ಯ ಸಮಾರಂಭದ ಮೂಲಕ ಶಾಲೆಯ ಇತಿಹಾಸ, ಸಾಧನೆಗಳನ್ನು ಸ್ಮರಿಸಲಾಗುತ್ತಿದೆ. ಮಾಜಿ ವಿದ್ಯಾರ್ಥಿಗಳ ಸಮ್ಮಿಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲಾಯಿತು ಈ ಕಾರ್ಯಕ್ರಮವನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿ ಸಂತೋಷವನ್ನು ವ್ಯಕ್ತಪಡಿಸಿದ ಈ ಕಾರ್ಯಕ್ರಮಕ್ಕೆ ಬಂದಂತ ಪ್ರತಿಯೊಬ್ಬರಿಗೂ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿತ್ತು.

Share This Article
error: Content is protected !!
";