ಹೆದ್ದಾರಿ ಸಮಸ್ಯೆ ಬಗ್ಗೆ ನನಗೆ ಮಾಹಿತಿ ಬಂದಿದೆ.:
ಸಿರುಗುಪ್ಪ.ಜೂ.16:- ಬೀದರ್-ಚಾಮರಾಜನಗರ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಾಷ್ಟಿçÃಯ ಹೆದಾರಿ 150ಎ ಕಾಮಗಾರಿಯನ್ನು ಮಾಡುತ್ತಿರುವ ಗುತ್ತಿಗೆದಾರರ ನಿರ್ಲಕ್ಷö್ಯದಿಂದ ಕಾಮಗಾರಿ ಕುಂಟುತ್ತಾ ಸಾಗಿದ್ದು, ಸಾರ್ವಜನಿಕರಿಗೆ ಅನಾನುಕೂಲವಾಗಿರುವ ಬಗ್ಗೆ ನನಗೆ ಮಾಹಿತಿ ಬಂದಿದ್ದು, ಸಂಬAಧಿಸಿದ ಗುತ್ತಿಗೆದಾರರಿಗೆ ಸಂಬAಧಿಸಿದ ವಸ್ತುಗಳನ್ನು ಜಪ್ತು ಮಾಡಿಕೊಂಡು ಕೇಸು ದಾಖಲಿಸುವಂತೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೋಳಿ ಪೊಲೀಸರಿಗೆ ಸೂಚಿಸಿದರು.
ನಗರಕ್ಕೆ ಆಗಮಿಸಿದ ಅವರು ಅತಿಥಿ ಗೃಹದಲ್ಲಿ ಕಾಂಗ್ರೇಸ್ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೆದ್ದಾರಿಯ ಕಾಮಗಾರಿ ಸ್ಥಗಿತಗೊಂಡಿದ್ದು, ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು, ಗುತ್ತಿಗೆದಾರರಿಗೆ ಸಂಬAಧಿಸಿದ ವಸ್ತುಗಳನ್ನು ವಶಪಡಿಸಿಕೊಂಡು ಕೇಸು ದಾಖಲಿಸುವಂತೆ ಸಿರುಗುಪ್ಪ ಪೊಲೀಸ ಠಾಣೆಯ ಸಿ.ಪಿ.ಐ. ಹನುಮಂತಪ್ಪ ಅವರಿಗೆ ಸೂಚಿಸಿದರು.
ಈಗಾಗಲೇ 2 ಕೇಸ್‌ಗಳನ್ನು ಗುತ್ತಿಗೆದಾರರ ಮೇಲೆ ದಾಖಲಿಸಲಾಗಿದೆ ಎಂದು ಸಿ.ಪಿ.ಐ. ಹನುಮಂತಪ್ಪ ಅವರು ಸಚಿವರಿಗೆ ಮಾಹಿತಿ ನೀಡಿದರು.
ರೂ.2 ಕೋಟಿ ವೆಚ್ಚದಲ್ಲಿ ಸಿರುಗುಪ್ಪದಲ್ಲಿ ನಿರ್ಮಾಣವಾಗಿರುವ ಸರ್ಕೀಟ್ ಹೌಸ್ ಉದ್ಘಾಟನೆಯಾಗದೇ ಹಾಳು ಬಿದ್ದಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಈ ಬಗ್ಗೆ ಶಾಸಕ ಬಿ.ಎಂ.ನಾಗರಾಜ ಅವರೊಂದಿಗೆ ಚರ್ಚಿಸುತ್ತೇನೆಂದು ಸಚಿವರು ಉತ್ತರಿಸಿದರು.
ಮುಖಂಡ ಬಿ.ಎಂ.ಸತೀಶ್ ಇನ್ನಿತರರು ಇದ್ದರು.
ಸಿರುಗುಪ್ಪ: ನಗರಕ್ಕೆ ಆಗಮಿಸಿದ ಅವರು ಅತಿಥಿ ಗೃಹದಲ್ಲಿ ಕಾಂಗ್ರೇಸ್ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೋಳಿ.
