ಚಿತ್ರದುರ್ಗಜೂ.18:
ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಇದೇ ಜೂನ್ 20ರಂದು ಬೆಳಿಗ್ಗೆ 10ಕ್ಕೆ ಕೇಂದ್ರ ಪುರಸ್ಕøತ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಜಿಲ್ಲೆಯ ರೈತರಿಗೆ ವೈಜ್ಞಾನಿಕ ಪದ್ದತಿಯಲ್ಲಿ ಎರೆಹುಳು ಗೊಬ್ಬರ ಮತ್ತು ವಿವಿಧ ಕಾಂಪೋಷ್ಟ್ ತಯಾರಿಕಾ ವಿಧಾನಗಳ ಕುರಿತು ಒಂದು ದಿನದ ತರಬೇತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಹಮ್ಮಿಕೊಳ್ಳಳಾಗಿದೆ.
ಬೆಳಿಗ್ಗೆ ಹಿರಿಯೂರು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿ ಮತ್ತು ಕೀಟಶಾಸ್ತ್ರಜ್ಞ ಡಾ.ಟಿ.ರುದ್ರಮುನಿ ಅವರು ಲಭ್ಯವಿರುವ ಕೃಷಿ ಮತ್ತು ಪಶುಸಂಗೋಪನೆ ತ್ಯಾಜ್ಯಗಳನ್ನು ಬಳಸಿ ವಿವಿಧ ಕಾಂಪೋಷ್ಟ್ ತಯಾರಿಕೆಯ ತಾಂತ್ರಿಕತೆಗಳ ಕುರಿತು ಮತ್ತು ವೈಜ್ಞಾನಿಕ ಪದ್ದತಿಯಲ್ಲಿ ಎರೆಹುಳು ಗೊಬ್ಬರ ತಯಾರಿಕಾ ಬಗ್ಗೆ ವಿಷಯ ಮಂಡನೆ ಮಾಡುವರು. ಹಾಗೂ ಹಿರಿಯೂರು ತಾಲ್ಲೂಕಿನ ಐಮಂಗಳ ಹೋಬಳಿಯ ಗುಳಗೊಂಡನಹಳ್ಳಿ ಗ್ರಾಮದ ಪ್ರಗತಿಪರ ರೈತರಾದ ನಾಗರಜಪ್ಪನವರು ಎರೆಹುಳು ಗೊಬ್ಬರ ತಯಾರಿಕೆ ವಿಧಾನದ ಬಗ್ಗೆ ತಮ್ಮ ಅನುಭವವನ್ನು ರೈತರೊಂದಿಗೆ ಹಂಚಿಕೊಳ್ಳುವರು.
ಮಧ್ಯಾಹ್ನ ಹಿರಿಯೂರಿನ ಕೆವಿಕೆ ಎರೆಹುಳು ಗೊಬ್ಬರ ಮತ್ತು ವಿವಿಧ ಕಾಂಪೋಷ್ಟ್ ತಯಾರಿಕಾ ಘಟಕಗಳನ್ನು ವಿಕ್ಷಣೆ ಮತ್ತು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಲಾಗುವುದು. ಆದ ಪ್ರಯುಕ್ತ ಆಸಕ್ತ 70 ಜನ ರೈತಭಾಂದವರು ಈ ತರಬೇತಿಯಲ್ಲಿ ಭಾಗವಹಿಸಲು 8277931058 ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿ ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಮುಖ್ಯಸ್ಥ ಆರ್.ರಜನೀಕಾಂತ ತಿಳಿಸಿದ್ದಾರೆ.
ಮೊದಲು ನೋಂದಾವಣಿ ಮಾಡಿಕೊಂಡ 70 ರೈತಭಾಂದವರು ಫ್ರೂಟ್ಸ್ ಐಡಿ (ಎಫ್.ಐಡಿ) ಅಥವಾ ಚುನಾವಣೆ ಗುರುತಿನ ಚೀಟಿ ಅಥವಾ ಆಧಾರ್ಕಾರ್ಡನೊಂದಿಗೆ ತರಬೇತಿಗೆ ಹಾಜರಾಗಲು ಕೋರಿದೆ.