Ad image

ಜಿಲ್ಲೆಯ ಪಡಿತರ ಕಾರ್ಡದಾರರಿಗೆ ಜೂನ್ ಮಾಹೆಯ ಪಡಿತರ ಹಂಚಿಕೆ

Vijayanagara Vani
ಕೊಪ್ಪಳ ಜೂನ್ 20 ಕೊಪ್ಪಳ ಜಿಲ್ಲೆಯ ಪಡಿತರ ಚೀಟಿದಾರರಿಗೆ 2025ರ ಜೂನ್ ಮಾಹೆಯಲ್ಲಿ ಪಡಿತರ ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಅವರು ತಿಳಿಸಿದ್ದಾರೆ.
ಜೂನ್ 2025ರ ಮಾಹೆಗೆ ಬಿಪಿಎಲ್ (ಪಿಹೆಚ್‌ಹೆಚ್) ಕಾರ್ಡಿನ ಪ್ರತಿ ಸದಸ್ಯರಿಗೆ 8 ಕೆ.ಜಿ ಅಕ್ಕಿ ಹಾಗೂ 2 ಕೆ.ಜಿ ಜೋಳ ಮತ್ತು ಅಂತ್ಯೋದಯ ಪ್ರತಿ ಕಾರ್ಡಿಗೆ 21 ಕೆ.ಜಿ ಅಕ್ಕಿ ಹಾಗೂ 14 ಕೆ.ಜಿ ಜೋಳ ಹಾಗೂ ರಾಜ್ಯ ಬಿಪಿಎಲ್ (ಪಿಹೆಚ್‌ಹೆಚ್) ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ನೀಡಲಾಗಿದ್ದು, ಜೋಳ ಹಂಚಿಕೆ ಇರುವುದಿಲ್ಲ. ಪಡಿತರವು ಉಚಿತ ಹಂಚಿಕೆಯಾಗಿದ್ದು, ನಿಗದಿತ ಪ್ರಮಾಣದಂತೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡೆಯುವಂತೆ ಹಾಗೂ ಈ ಬಗ್ಗೆ ದೂರುಗಳು ಇದ್ದಲ್ಲಿ ಸಂಬಂಧಿಸಿದ ತಹಶೀಲ್ದಾರ ಕಛೇರಿ ಅಥವಾ ಕೊಪ್ಪಳ ಆಹಾರ ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರ ಕಛೇರಿ ಅಥವಾ ಉಚಿತ ಸಹಾಯವಾಣಿ ಸಂಖ್ಯೆ 1967 ಗೆ ದೂರು ನೀಡಬಹುದಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Share This Article
error: Content is protected !!
";