Ad image

ಶ್ರೀ ಲಕ್ಷ್ಮಿವೆಂಕಟೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ರಜತ ಮಹೋತ್ಸವ ಇನ್ನೂ ಹೆಚ್ಚು ಜನಸಾಮಾನ್ಯರಿಗೆ ಸೇವೆ ನೀಡಲಿ; ಅಭಿನವ ಗವಿಶ್ರೀ

Vijayanagara Vani
ಶ್ರೀ ಲಕ್ಷ್ಮಿವೆಂಕಟೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ರಜತ ಮಹೋತ್ಸವ     ಇನ್ನೂ ಹೆಚ್ಚು ಜನಸಾಮಾನ್ಯರಿಗೆ ಸೇವೆ ನೀಡಲಿ; ಅಭಿನವ ಗವಿಶ್ರೀ

ಕಾರಟಗಿ : ಪಟ್ಟಣದ ಶ್ರೀ ಲಕ್ಷ್ಮಿವೆಂಕಟೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘ(ನಿ)ವು  ಪ್ರಾರಂಭವಾಗಿ 25 ವರ್ಷಗಳಾಗಿದ್ದು, ಸಂಘದ ರಜತ ಮಹೋತ್ಸವ ಕಾರ್ಯಕ್ರಮವನ್ನು ಪಟ್ಟಣದ ಶ್ರೀ ಪದ್ಮಶ್ರೀ ಕನ್ವೆನ್ಷನ್ ಹಾಲ್ ನಲ್ಲಿ ಅದ್ದೂರಿಯಾಗಿ ಜರುಗಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಶ್ರೀ ಅಭಿನವ ಗವಿ ಶ್ರೀಗಳು ವಹಿಸಿ ಶುಭ ಹಾರೈಸಿ ಮಾತನಾಡಿದರು, ಆಹಾರವನ್ನು ಕೈ ಮೂಲಕ ಬಾಯಿಗೆ, ಬಾಯಿಯಿಂದ ಹೊಟ್ಟೆಗೆ, ಹೊಟ್ಟೆಯಿಂದ ಅಂಗಾಂಗಗಳಿಗೆ ಶಕ್ತಿ ನೀಡುವ ಮೂಲಕ ದೇಹ ಸದೃಢವಾಗುತ್ತದೆ. ಒಂದು ಇನ್ನೊಂದರ ಸಹಕಾರದಿಂದ ದೇಹವೇ ಬಲಿಷ್ಠವಾದಂತೆ ಒಬ್ಬರ ಇನ್ನೊಬ್ಬರ ಸಹಕಾರವೇ ಸಹಕಾರಿ ಸಂಘಗಳ ಬಲವಾಗಿದೆ. ಈ ಸಹಕಾರಿ ಸಂಘವು ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಲಿ ಜನಸಾಮಾನ್ಯರ ಸೇವೆ ಮಾಡುವಂತಾಗಲಿ, ಆ ದೇವರು ಶುಭವನ್ನು ಕರುಣಿಸಲಿ ಎಂದು ಆಶೀರ್ವಚನ ನೀಡಿದರು.

ನಂತರ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮತ ಸಂಘದ ಅಧ್ಯಕ್ಷರಾದ ಬಿ.ನಂಜನಗೌಡ ಮಾತನಾಡಿ, ಒಂದು ಸಹಕಾರಿ ಸಂಘ ಬಲಿಷ್ಠವಾಗಬೇಕಾದರೆ ಠೇವಣಿದಾರರ ಜೊತೆಗೆ ಸಾಲಗಾರರ ಪಾತ್ರವೂ ಪ್ರಮುಖವಾಗಿರುತ್ತದೆ. ಇಲ್ಲಿ ಪ್ರತಿಯೊಬ್ಬರೂ ಸದಸ್ಯರಾಗಿ ಕರ್ತವ್ಯ ನಿರ್ವಹಿಸುತ್ತಾರೆ. ನಮ್ಮವರೇ ನಮಗಾಗಿ ಸೃಷ್ಟಿಸಿಕೊಂಡು ಸಹಾಯಾರ್ಥವಾಗಿ ಮಾಡಿಕೊಂಡಿರುವ ಸಂಸ್ಥೆ ಇದಾಗಿದ್ದು, ನಮ್ಮವರೇ ಹಾಕಿದ ಹಣವನ್ನು ಕಷ್ಟದ ಸಮಯದಲ್ಲಿ ಇತರರಿಗೆ ನೀಡಿ, ನಂತರ ಅಲ್ಪ ಬಡ್ಡಿಯಲ್ಲಿ ಪುನಃ ಕಟ್ಟಿಸಿಕೊಳ್ಳುವ ವಿಧಾನವಾಗಿದೆ. ಸಾಲ ಪಡೆದಿರುವವರು ಸಹ ಇಲ್ಲಿ ಪ್ರಾಮಾಣಿಕವಾಗಿ ಹಣ ಕಟ್ಟುವುದು ಅಗತ್ಯವಾಗಿದೆ. ಯಾವುದೇ ಒಂದು ಸಂಸ್ಥೆಯು ಅನೇಕ ವರ್ಷಗಳ ಕಾಲ ನಡೆಯುತ್ತಿದೆ ಎಂದರೆ ಅದರಲ್ಲಿನ ನಿರ್ವಾಹಕರು ನಿರ್ದೇಶಕರ ಪಾತ್ರ ಮಹತ್ವದ್ದಾಗಿದೆ. ಹೃದಯವಂತಿಕೆ ಹಾಗೂ ಬುದ್ಧಿವಂತಿಕೆಯ ಆಧಾರಗಳ ಮೇಲೆ ಈ ಬ್ಯಾಂಕನ್ನು ನಡೆಸಬೇಕಾಗಿರುತ್ತದೆ. ಪ್ರತಿಯೊಬ್ಬರು ಇದರ ಸೌಲಭ್ಯ ಪಡೆಯಬಹುದು. ಹಿರಿಯರು ಮಾರ್ಗದರ್ಶಕರಾದ ಸೂಗಪ್ಪ ಎಲ್ ವಿ ಟಿ ಅವರ ಆಶಯದಂತೆ ಉನ್ನತ ಮಟ್ಟದಲ್ಲಿ ಈ ಒಂದು ಸಂಘವು ಬೆಳೆಯುತ್ತಿದ್ದು ಇನ್ನೂ ಉನ್ನತಕ್ಕೆ ಇರಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮಿವೆಂಕಟೇಶ್ವರ ಸೌಹಾರ್ದ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಕೆ ಸೂಗಪ್ಪ ಎಲ್ ವಿ ಟಿ, ಅಧ್ಯಕ್ಷರಾದ ಶರಣಬಸವ ಚನ್ನಳ್ಳಿ, ಮಾಜಿ ಸಚಿವರಾದ ನಾಗಪ್ಪ ಸಾಲೋಣಿ, ಪುರಸಭೆಯ ಅಧ್ಯಕ್ಷರಾದ ರೇಖಾ ರಾಜಶೇಖರ್ ಆನೇಹೊಸೂರು, ಆರ್.ಕೆ‌.ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರಾದ ವಿಶ್ವನಾಥ ಪಾಟೀಲ್ ತೋರಣದಿನ್ನಿ, ಸೌಹಾರ್ದ ಕಾಯ್ದೆ ರೂವಾರಿಗಳಾದ ಮನೋಹರ ಮಸ್ಕಿ, ವಿಕಾಸ್ ಬ್ಯಾಂಕ್ ಅಧ್ಯಕ್ಷರಾದ ವಿಶ್ವನಾಥ ಹಿರೇಮಠ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀಧರ್ ಜಿ ಕೇಸರಹಟ್ಟಿ, ಉಪ ನೀಬಂಧಕರಾದ ಸಜ್ಜನರ ಪ್ರಕಾಶ್, ಸಂಘದ ಉಪಾಧ್ಯಕ್ಷರಾದ ಜಗದೀಶ್ ವೈ, ನಿರ್ದೇಶಕರುಗಳಾದ ಶಿವರೆಡ್ಡಿ ನಾಯಕ, ವೆಂಕಟರೆಡ್ಡಿ, ಕೆ ನಾಗಪ್ಪ, ಕೆ ನಾಗರಾಜ, ಪರಶುರಾಮ ಸಾಲೋಣಿ, ಭಾರತೇಶ ಕೆಂಡದ್, ಕೆ ಮಹಾದೇವಿ, ಶ್ರೀದೇವಿ, ರೇಣುಕಮ್ಮ ಸಾಲೋಣಿ ಸೇರಿದಂತೆ ಸರ್ವ ನಿರ್ದೇಶಕರ ಮಂಡಳಿ ಮುಖ್ಯ ಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿ ವರ್ಗ ಮತ್ತು ಗ್ರಾಹಕರು ಭಾಗವಹಿಸಿದ್ದರು.

ಸಂಘದ ಕಾರ್ಯಕ್ರಮಗಳು

ಕರೋನಾ ಸಮಯದಲ್ಲಿ ಆಶಾ ಕಾರ್ಯಕರ್ತರಿಗೆ, ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ, ಸಾರ್ವಜನಿಕರಿಗೆ, ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ, ಪೌರಕಾರ್ಮಿಕರಿಗೆ ಸೇರಿದಂತೆ ಅನೇಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ, ಪಟ್ಟಣದ ಹೆದ್ದಾರಿಗಳಲ್ಲಿ ಸಸಿಗಳ ನೆಡುವುದು, ನೀರುಣಿಸುವದು, ಎರಡು ರೂಪಾಯಿನಲ್ಲಿ 20 ಲೀಟರ್ ಕುಡಿಯುವ ನೀರಿನ ವ್ಯವಸ್ಥೆ, ಇನ್ನು ಹತ್ತಲವಾರು ಸಮಾಜ ಸೇವಾ ಕಾರ್ಯಗಳು.

ಮುಂದಿನ ಗುರಿಗಳು

ಮುಂದಿನ ದಿನಗಳಲ್ಲಿ ಸಹಕಾರಿ ಸಂಘದಿಂದ ಅನೇಕ ಯೋಜನೆಗಳ ಗುರಿಯನ್ನು ಇಟ್ಟುಕೊಂಡಿದ್ದು ಗೋಶಾಲೆಯನ್ನು ಪ್ರಾರಂಭಿಸುವುದು, ಕಡಿಮೆ ದರದಲ್ಲಿ ರಸಗೊಬ್ಬರ ಕಂಪನಿಯನ್ನು ಪ್ರಾರಂಭಿಸುವುದು, ವಿದ್ಯಾರ್ಥಿಗಳಿಗೆ ಶಿಕ್ಷಣದ ಸಾಲ ಒದಗಿಸುವುದು, ಅಲ್ಲದೆ ವಿದ್ಯಾರ್ಥಿಗಳಿಗೆ ಇತರೆ ಕಂಪನಿ ಜೊತೆಗೂಡಿಸಿ ಉದ್ಯೋಗ ಸೃಷ್ಟಿ ಮಾಡಿಸಿ ಅವಕಾಶ ಕಲ್ಪಿಸುವುದು, ಇತರರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಪರಿಸರಕ್ಕೆ ಅನುಗುಣವಾದ ಕೈಗಾರಿಕಾ ಫ್ಯಾಕ್ಟರಿ ಪ್ರಾರಂಭಿಸುವುದು ಸೇರಿದಂತೆ ಅನೇಕ ಜನ ಸೇವಾ ಗುರಿಯನ್ನು ಹೊಂದಿದೆ

Share This Article
error: Content is protected !!
";