ಚಿತ್ರದುರ್ಗಜೂ.30:
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿ ಡಾ.ರಾಜಶೇಖರ್ ಪಾಳೇದರ್ ಹಾಗೂ ಆಹಾರ ಸುರಕ್ಷತೆ ಅಧಿಕಾರಿಗಳ ತಂಡ ಈಚೆಗೆ ಚಿತ್ರದುರ್ಗ ನಗರದ ವಿವಿಧೆಡೆ ಬೀದಿ ಬದಿ ವ್ಯಾಪಾರಿಗಳ ಸ್ಥಳಕ್ಕೆ ಭೇಟಿ ನೀಡಿ, ಆಹಾರ ಸುರಕ್ಷತೆ, ಆಹಾರ ತಯಾರಿಸುವ, ವಿತರಿಸುವ ರೀತಿ, ಉಪಯೋಗಿಸುವ ಸಾಮಗ್ರಿಗಳ ಬಳಕೆಯ ಬಗ್ಗೆ ಆಹಾರ ಸುರಕ್ಷತೆ ಕುರಿತು ಮಾಹಿತಿ ನೀಡಿದರು.
ಚಿತ್ರದುರ್ಗ ತಾಲ್ಲೂಕಿನ ಆಹಾರ ಸುರಕ್ಷತಾ ಅಧಿಕಾರಿ ನಂದಿನಿ ಕಡಿ ಅವರು, ಬೀದಿಬದಿ ವ್ಯಾಪಾರಸ್ಥರಿಗೆ ಶುದ್ಧ ಕುಡಿಯುವ ನೀರು ಲಭ್ಯತೆ, ವೈಯಕ್ತಿಕ ಸ್ವಚ್ಛತೆ, ಪ್ಲಾಸ್ಟಿಕ್ ನಿರ್ಮೂಲನಾ ಬಗ್ಗೆ, ಟೆಸ್ಟಿಂಗ್ ಪೌಡರ್, ಕೃತಕ ಬಣ್ಣ, ನ್ಯೂಸ್ ಪೇಪರ್ ಬಳಕೆ ಮಾಡಬಾರದು ಎಂದು ಮಾಹಿತಿ ನೀಡಿದರು.
ನಗರದ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಅಂಕಿತಾಧಿಕಾರಿ ಡಾ.ರಾಜಶೇಖರ್ ಪಾಳೇದರ್ ಮಾತನಾಡಿ, ಆಹಾರ ಸುರಕ್ಷಾ ಕ್ರಮಗಳ ಬಗ್ಗೆ, ಆಹಾರ ಗುಣಮಟ್ಟ ಪರವಾನಿಗೆ, ಆಹಾರ ಸುರಕ್ಷತಾ ಗುಣಮಟ್ಟದ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿ, ಅನುಸರಿಸದಿದ್ದಲ್ಲಿ ಕಾಲ ಕಾಲಕ್ಕೆ ತಪಾಸಣೆ ನಡೆಸಿ, ಪರವಾನಿಗೆ ರದ್ದುಗೊಳಿಸಿ, ಸೂಕ್ತ ದಂಡ ವಿಧಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳಾದ ನಂದಿನಿ ಕಡಿ, ಮಂಜುನಾಥ್, ನಾಗೇಶ್ ಹಾಗೂ. ಬೀದಿ ಬದಿ ವ್ಯಾಪಾರಸ್ಥ ಜಿಲ್ಲಾಧ್ಯಕ್ಷ ಮಾರಣ್ಣ ಇದ್ದರು.