ಬೀದರ್ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದ ಅವರು.
ವಿವಿಧ ಇಲಾಖೆಗಳ ಅಧಿಕಾರಿಗಳ ಮಧ್ಯೆ ಸಮನ್ವಯದ ಕೊರತೆಯಿಂದಾಗಿ ಜನರು ಸಮಸ್ಯೆ ಎದುರಿಸ ಬೇಕಾಗುತ್ತದೆ ಎಲ್ಲಾ ಇಲಾಖೆಯ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿ ಕೆಲಸ ಮಾಡಬೇಕು.
ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆಯೂ ನಿರ್ಲಕ್ಷ್ಯ ವಹಿಸದಿರಿ ರೈತರೊಂದಿಗೆ ಸಂಪರ್ಕದಲ್ಲಿ ಇದ್ದು ಮಿಶ್ರ ಬೆಳೆ ಪದ್ಧತಿ ಕುರಿತು ಹೆಚ್ಚಿನ ಸಲಹೆ ನೀಡಬೇಕು ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವಂತೆ ನೋಡಿಕೊಳ್ಳಬೇಕು ರೈತರಿಗೆ ಫಸಲ್ ಬಿಮಾ(ವಿಮಾ) ಬಗ್ಗೆ ಮಾಹಿತಿ ನೀಡಿದರೆ ಅತಿವೃಷ್ಟಿಯಿಂದ, ಅನಾವೃಷ್ಟಿಗಳಿಂದ ಹಾಳಾದ ಬೆಳೆಗಳಿಗೆ ಪರಿಹಾರ ದೊರೆಯುತ್ತದೆ ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಕ್ಷೇತ್ರದ ಪ್ರತಿಯೊಬ್ಬ ರೈತರಿಗೆ ತಲುಸಿ ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಂಡರೆ ಆರ್ಥಿಕವಾಗಿ ಹಿಂದುಳಿದ ರೈತರು ಉತ್ತಮವಾಗಿ ಜೀವನ ನಡೆಸಲು ಸಾಧ್ಯ ರೈತರು ಉತ್ತಮವಾಗಿದ್ದರೆ ದೇಶದ ಪ್ರತಿಯೊಬ್ಬರಿಗೂ ಉತ್ತಮ ಆಹಾರ ಸಿಗಲು ಸಾಧ್ಯ ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಜನರಿಗೆ ಉತ್ತಮ ಸ್ಪಂದನೆ ನೀಡಬೇಕು ಹಲವು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಉಪಕರಣಗಳ ಅಭಾವ, ಅಂಬುಲೆನ್ಸ್ ಸೇವೆ ಸೌಲಭ್ಯ ಕುರಿತು, ಔಷಧಗಳ ಕೊರತೆ ಕುರಿತು ಹಲವು ದೂರುಗಳು ಬಂದಿವೆ ಹಾಗೂ ನಾನು ಸಹ ಬೇಮಳಖೇಡಾ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಂತಹ ಸಮಸ್ಯೆ ಕಂಡು ಬಂದಿದೆ ಈ ಕುರಿತು ಪರಿಶೀಲನೆ ನಡೆಸಿ ಸಮಸ್ಯೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದರು.
ಮಳೆಗಾಲದಲ್ಲಿ ಜೆಸ್ಕಾಂ ಇಲಾಖೆಗೆ ಹೆಚ್ಚಿನ ದೂರು ಬರುತ್ತವೆ ಅಧಿಕಾರಿಗಳು ರೈತರಿಗೆ, ಸಾರ್ವಜನಿಕರಿಗೆ ತೊಂದರೆಯಾಗದAತೆ ನೋಡಿಕೊಳ್ಳಬೇಕು ಜೆಸ್ಕಾಂ ರಸ್ತೆಗಳಲ್ಲಿ ನೆತಾಡುತ್ತಿರುವ ತಂತಿ, ಬಾಗಿದ ಕಂಬಗಳು ಯಾವುದೇ ಅನಾಹುತ ಸಂಭವಿಸುವ ಮುನ್ನ ಸರಿಪಡಿಸಬೇಕು ಜೆಸ್ಕಾಂ ಯೋಜನೆಯಲ್ಲಿ ಬಡವರಿಗೆ ದೊರೆಯುವ ಸೌಲಭ್ಯಗಳನ್ನು ಒದಗಿಸಬೇಕು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗದಂತೆ ಶಿಕ್ಷಕರು ಹೆಚ್ಚಿನ ನಿಗಾ ವಹಿಸಬೇಕು ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರ ವಿಧ್ಯಾರ್ಥಿಗಳಿಗೆ ಬಿಸಿ ಊಟ, ಉಚಿತ ಬಟ್ಟೆ ಪುಸ್ತಕ, ಶೂ, ಸಾಕ್ಸ್ ನೀಡಲಾಗುತ್ತಿದೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ವಿಧ್ಯಾರ್ಥಿಗಳ ದೇಶದ ಉತ್ತಮ ಪ್ರಜೆಯಾಗುವಂತೆ ಶ್ರಮಿಸಬೇಕು ಎಂದರು. ಶಾಲೆಯಲ್ಲಿ ಮೂಲ ಸೌಕರ್ಯ ಕೊರತೆ ಆಗದಂತೆ ನೋಡಿಕೊಳ್ಳಬೇಕು ಯಾವುದೇ ರೀತಿಯ ಸೌಲಭ್ಯ ಅವಶ್ಯಕತೆ ಇದ್ದಲ್ಲಿ ಪಟ್ಟಿ ನೀಡಬೇಕು ಎಂದರು. ಅಂಗನವಾಡಿಗಳಲ್ಲಿ ಸಿಗುವ ಪೌಷ್ಟಿಕ ಆಹಾರ ಪದಾರ್ಥಗಳು ಎಲ್ಲಾ ಮಕ್ಕಳಿಗೆ ಹಾಗೂ ತಾಯಂದಿರಿಗೆ ಸರಿಯಾಗಿ ತಲುಪುವಂತೆ ನೋಡಿಕೊಳ್ಳಬೇಕು. ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಸತಿ ನಿಲಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.
ಅರಣ್ಯ ಇಲಾಖೆ ಅಧಿಕಾರಿಗಳು ಸಸಿ ನೆಡುವ ಕಾರ್ಯಕ್ಕೆ ಹೆಚ್ಚಿನ ಚುರುಕು ನೀಡಿ ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕು ರೈತರ ಜಮೀನಿನಲ್ಲಿ ಕಾಡು ಪ್ರಾಣಿಗಳಿಂದ ಹಾನಿಯಾದ ಬೆಳೆಗೆ ಅರಣ್ಯ ಇಲಾಖೆಯಿಂದ ಶೀಘ್ರ ಪರಿಹಾರ ನೀಡಬೇಕು ಎಂದು ಸೂಚಿಸಿದರು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕಳುವು ಪ್ರಕರಣಕ್ಕೆ ಕಟ್ಟುನಿಟ್ಟಾಗಿ ಕ್ರಮ ಜರುಗಿಸಬೇಕು ಹಾಗೂ ಅಪಘಾತ ಸಂಭವಿಸದAತೆ ಪೊಲೀಸ್ ಅಧಿಕಾರಿಗಳು, ಸಾರಿಗೆ ಇಲಾಖೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು ಪ್ರತಿಯೊಂದು ಗೂಡ್ಸ್ ವಾಹನಗಳಿಗೆ ಎಚ್ಚರಿಕೆ ರೆಡೀಯಂ ಕಡ್ಡಾಯ ಅಳವಡಿಸಬೇಕು ಅಪಘಾತ ಸಂಭವಿಸದAತೆ ಎಚ್ಚರಿಕೆ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಸೂಚಿಸಿದರು.
ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಜಲ್ವಂತ ಸಮಸ್ಯೆ ಕಂಡುಬAದಿಲ್ಲ, ಅವುಗಳಲ್ಲಿ ಪ್ರಮುಖವಾದವು ಶಿಕ್ಷಣ, ವಿದ್ಯುತ್, ಆಸ್ಪತ್ರೆ, ಶುದ್ಧ ಕುಡಿಯುವ ನೀರು, ಗ್ರಾಮೀಣ ರಸ್ತೆಗಳು, ಸಾರಿಗೆ, ಕಂದಾಯ ಇಲಾಖೆ ಹಾಗೂ ಜೆಜೆಎಂ ಕಾಮಗಾರಿ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳು ಇವೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತಕರಾದ ಮೊಹಮ್ಮದ್ ಶಕೀಲ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕ ಪಾಟೀಲ್ ಇದ್ದರು.
ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಅವರ ಮಾಧ್ಯಮ ಸಂಯೋಜಕ, ಸಹಾಯಕ ನಾಗೇಶ ಸಿದ್ಧಾ.