ಬಳ್ಳಾರಿ,ಜು.02:
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವರಾಗಿ ನಿರ್ವಹಣಾಶಾಸ್ತç ವಿಭಾಗದ ಪ್ರಾಧ್ಯಾಪಕ ಡಾ.ಜಿ.ಪಿ.ದಿನೇಶ್ ಅವರನ್ನು ನೇಮಕ ಮಾಡಲಾಗಿದ್ದು, ಬುಧವಾರÀ ಅಧಿಕಾರ ವಹಿಸಿಕೊಂಡರು.
ನಿಕಟಪೂರ್ವ ಕುಲಸಚಿವರಾಗಿದ್ದ ರುದ್ರೇಶ್.ಎಸ್.ಎನ್ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಪ್ರೊ.ಜಿ.ಪಿ.ದಿನೇಶ್ ಅವರನ್ನು ಹಂಗಾಮಿ ಕುಲಸಚಿವರಾಗಿ ಆದೇಶಿಸಿ ವಿವಿಯ ಕುಲಪತಿ ಪ್ರೊ.ಎಂ.ಮುನಿರಾಜು ಅವರು ಕಚೇರಿ ಪತ್ರ ಹೊರಡಿಸಿದ್ದಾರೆ.