Ad image

ಪಾಸಿಟಿವ್ ಹೋಮಿಯೊಪತಿ ಸೇವಾನ್ಯೂನ್ಯತೆ ; ಪರಿಹಾರ ನೀಡಲು ಸೂಚನೆ

Vijayanagara Vani
ಶಿವಮೊಗ್ಗ,ಜು.03 ದೂರುದಾರರಾದ ಎಸ್ ಎಂ ಮಂಜಪ್ಪ, ವಿನೋಬನಗರ, ಶಿವಮೊಗ್ಗ ಇವರು ವ್ಯವಸ್ಥಾಪಕರು ಪಾಸಿಟಿವ್ ಹೋಮಿಯೋಪತಿ, ಪಿಜೆ ಎಕ್ಸ್ಟೆನ್ಶನ್ ದಾವಣೆಗೆರೆ ಇವರ ವಿರುದ್ದ ಸೇವಾ ನ್ಯೂನ್ಯತೆ ಕುರಿತು ದಾಖಲಿಸಿದ್ದ ದೂರಿನ ವಿರುದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದೆ.
ದೂರುದಾರರು ಕ್ರಾನಿಕ್ ಪ್ಯಾಂಕ್ರಿಯಾಟೈಟಿಸ್ ಕಾಯಿಲೆಯ ರೋಗಿಯಾಗಿದ್ದು, ಎದರುದಾರರನ್ನು ಸಂಪರ್ಕಿಸಿದಾಗ ರೂ.40,000/- ಗಳನ್ನು ಪಾವತಿಸಿದರೆ, 3 ವರ್ಷಗಳ ಕಾಲ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡುವುದಾಗಿ ಭರವಸೆ ನೀಡಿರುತ್ತಾರೆ. ಅದರಂತೆ ದೂರುದಾರರು ದಿ: 29-03-2024 ಮತ್ತು ದಿ: 01-04-2024 ರಂದು ರೂ. 40 ಸಾವಿರಗಳನ್ನು ಪಾವತಿಸಿರುತ್ತಾರೆ.
ತದನಂತರ ಎದುರುದಾರರು ದೂರುದಾರರಿಗೆ ಯಾವುದೇ ರೀತಿಯ ಚಿಕಿತ್ಸೆ/ಔಷಧಿಗಳನ್ನು ಕೊಟ್ಟಿರುವುದಿಲ್ಲ. ಅನೇಕ ಬಾರಿ ಕೇಳಿಕೊಂಡರೂ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡದೇ ಇರುವ ಕಾರಣ ಸ್ಥಳೀಯ ರಾಜಕುಮಾರ್ ಡಯಾಗ್ನೊಸ್ಟಿಕ್, ಶಿವಮೊಗ್ಗ ಇವರ ಬಳಿ ಚಿಕಿತ್ಸೆ ಪಡೆದಿದ್ದಕ್ಕೆ ರೂ.50,000 ಖರ್ಚಾಗಿರುತ್ತದೆ. ಎದುರುದಾರರು ರೂ.40,000/- ಗಳನ್ನು ಪಡೆದು 3 ವರ್ಷಗಳವರೆಗೆ ಹೋಮಿಯೋಪತಿ ಚಿಕಿತ್ಸೆ/ಔಷಧಿಗಳನ್ನು ಕೊಡದೇ ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಎಂದು ಆಯೋಗದ ಮುಂದೆ ದೂರನ್ನು ಸಲ್ಲಿಸಿರುತ್ತಾರೆ.
ದೂರುದಾರರು ಸಲ್ಲಿಸಿರುವ ಪ್ರಮಾಣಪತ್ರ, ದಾಖಲಾತಿಗಳನ್ನು ಪರಿಶೀಲಿಸಿ ದೂರುದಾರರ ವಾದವನ್ನು ಆಲಿಸಿ, ಎದುರುದಾರರು ಹಣವನ್ನು ಪಡೆದು ಚಿಕಿತ್ಸೆ/ಔಷಧಿಗಳನ್ನು ನೀಡದೇ ಸೇವಾನ್ಯೂನ್ಯತೆ ಎಸಗಿದ್ದಾರೆ ಎಂದು ಆಯೋಗ ತೀರ್ಮಾನಿಸಿ, ದೂರನ್ನು ಪುರಸ್ಕರಿಸಿ ಎದುರುದಾರರು ದೂರುದಾರರಿಂದ ಪಡೆದ ರೂ.40,000/- ಗಳಿಗೆ ಶೇ.9 ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡಲು ಹಾಗೂ ಕ್ರಮವಾಗಿ ಪರಿಹಾರವಾಗಿ, ಮಾನಸಿಕ ಹಿಂಸೆಗೆ ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ ರೂ.8000 ಮತ್ತು 5000 ಗಳನ್ನು ಈ ಆದೇಶವಾದ 45 ದಿನಗಳ ಒಳಗೆ ಪಾವತಿಸಬೇಕು. ತಪ್ಪಿದಲ್ಲಿ, ಶೇ.12 ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡತಕ್ಕದ್ದು ಎಂದು ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನು ಒಳಗೊಂಡ ಪೀಠವು ದಿ: 30-06-2025 ರಂದು ಆದೇಶಿಸಿದೆ

Share This Article
error: Content is protected !!
";