ಚಿತ್ರದುರ್ಗಜುಲೈ05:
ಚಿತ್ರದುರ್ಗ ನಗರದ ಸರ್ಕಾರಿ ಕಲಾ ಕಾಲೇಜಿನ ಆವರಣದಲ್ಲಿ ಶುಕ್ರವಾರ ಕೆನರಾ ಬ್ಯಾಂಕ್ನ 120ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಚಿತ್ರದುರ್ಗ ಲೀಡ್ಬ್ಯಾಂಕ್ ವ್ಯವಸ್ಥಾಪಕ ಎಂ.ರಾಘವೇಂದ್ರ, ಕೆನರಾ ಬ್ಯಾಂಕಿನ 120ನೇ ಸಂಸ್ಥಾಪನಾ ದಿನಾಚರಣೆ ಸ್ಮರಣಾರ್ಥ ಚಿತ್ರದುರ್ಗದಲ್ಲಿ 120 ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕೆನರಾ ಬ್ಯಾಂಕ್ ಸರ್ಕಾರಿ ಸೌಮ್ಯದ ಬ್ಯಾಂಕ್ ಆಗಿದ್ದು, 1906 ಜುಲೈ 01ರಂದು ಮಂಗಳೂರಿನಲ್ಲಿ ಪ್ರಾರಂಭವಾಗಿದ್ದು, ಇಲ್ಲಿಯವರೆಗೂ ಎಲ್ಲಾ ರೀತಿಯ ಸ್ಥರದ ಗ್ರಾಹಕರನ್ನು ಒಳಗೊಂಡಿದ್ದು, ಗ್ರಾಹಕರೆಡೆಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. 2025ರ ಮಾರ್ಚ್ ಅಂತ್ಯಕ್ಕೆ ಸುಮಾರು ರೂ.25 ಲಕ್ಷ ಕೋಟಿಗಳಷ್ಟು ವಹಿವಾಟನ್ನು ನಡೆಸುತ್ತಿದ್ದು, ಜನಾನುರಾಗಿ ಬ್ಯಾಂಕ್ ಆಗಿದೆ ಎಂದು ಲೀಡ್ಬ್ಯಾಂಕ್ ವ್ಯವಸ್ಥಾಪಕ ಎಂ.ರಾಘವೇಂದ್ರ ತಿಳಿಸಿದರು.
ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ಕೆನರಾ ಬ್ಯಾಂಕ್ ಉತ್ತಮವಾದ ಸೇವೆಯನ್ನು ಒದಗಿಸುತ್ತಿದೆ. ಕೆನರಾ ಬ್ಯಾಂಕಿನ 120ನೇ ಸಂಸ್ಥಾಪನಾ ದಿನಾಚರಣೆ ಸ್ಮರಣಾರ್ಥ ಗಿಡಗಳನ್ನು ನೆಡುವ ಮೂಲಕ ಉತ್ತಮವಾದ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲೀಡ್ ಬ್ಯಾಂಕಿನ ಸಿಬ್ಬಂದಿಗಳಾದ ಶ್ರೀನಿವಾಸ್, ಮೂಕಪ್ಪ, ಎನ್.ಕೋಟೇಶ್, ಸೋಮಶೇಖರ್, ದರ್ಶನ್ ಸೇರಿದಂತೆ ಸರ್ಕಾರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಇದ್ದರು.