Ad image

ಜು. 07 ರಂದು ಪ್ರಥಮ ಬಿ.ವಿ.ಎ. ಪದವಿ ಪ್ರವೇಶ ಪರೀಕ್ಷೆ

Vijayanagara Vani
ಶಿವಮೊಗ್ಗ, ಜುಲೈ 05 : : ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗೊAಡಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು, ಸಿದ್ಧಾರ್ಥನಗರ, ಮೈಸೂರು ಸಂಸ್ಥೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ದೃಶ್ಯಕಲೆಯಲ್ಲಿ ಪ್ರಥಮ ಬ್ಯಾಚುಲರ್ ಆರ್ಫ ವಿಜ್ಯುಯಲ್ ಆರ್ಟ್ಸ್ (ಬಿ.ವಿ.ಎ) ನಾಲ್ಕು ವರ್ಷದ ಎಂಟು ಸೆಮಿಸ್ಟರ್‌ಗಳ ಎಸ್.ಇ.ಪಿ.ಪದ್ಧತಿಯ ಪದವಿ ಪ್ರವೇಶಾತಿಗಾಗಿ ದ್ವಿತೀಯ ಪಿ.ಯು.ಸಿ. ಉತ್ತೀರ್ಣರಾದ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಜುಲೈ 07 ರಂದು ಬೆಳಗ್ಗೆ 11.00 ಕ್ಕೆ ಅರ್ಹತಾ ಪರೀಕ್ಷೆ ಹಾಗೂ ಮಧ್ಯಾಹ್ನ 2.00 ಕ್ಕೆ ವೈಯಕ್ತಿಕ ಸಂದರ್ಶನ ಇರುತ್ತದೆ.
ಈ ಪದವಿಯಲ್ಲಿ 3ನೇ ಸೆಮಿಸ್ಟರ್‌ನಿಂದ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, ಅನ್ವಯಕಲೆ, ಕಲಾ ಇತಿಹಾಸ ಹಾಗೂ ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ ವಿಭಾಗಗಳಲ್ಲಿ ವಿಶೇಷ ಅಧ್ಯಯನದ ಸ್ನಾತಕ ಪದವಿಯಾಗಿರುತ್ತದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ https://uucms.karnataka.gov.in ಅಥವಾ https://www.cavamysore.karnataka.gov.in ಹಾಗೂ ಕಾರ್ಯಾಲಯದ ಸಹಾಯವಾಣಿ 0821-2438931 ನ್ನು ಸಂಪರ್ಕಿಸುವAತೆ ಕಾಲೇಜಿನ ಡೀನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Share This Article
error: Content is protected !!
";