ಕಾರಟಗಿ : ಗ್ರಾಮೀಣ ಪ್ರದೇಶದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಬ್ಬವಾಗಿರುವ ಮೊಹರಂ ನ್ನು ತಾಲೂಕಿನ ತೊಂಡಿಹಾಳ ಗ್ರಾಮದಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
ಹಿಂದು ಮುಸ್ಲಿಂ ಭಾವೈಕ್ಯತೆಯ ಹಬ್ಬವಾಗಿರುವ ಮೊಹರಂ ನಲ್ಲಿ ಗ್ರಾಮದ ಪ್ರತಿಯೊಂದು ಮನೆಯನ್ನು ಶುಚಿಗೊಳಿಸಿ ಸುಣ್ಣಬಣ್ಣ ತೊಡೆದು ಅಲಂಕಾರಗೊಳಿಸಲಾಗಿತ್ತು. ಹಿಂದುಗಳು ಸಹ ಮನೆಯ ಮಕ್ಕಳನ್ನು ಪಕೀರರನ್ನಾಗಿಸುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾದರು. ಜುಲೈ-05ರಂದು ಕತ್ತಲರಾತ್ರಿಯ ದಿನದಂದು ತೊಂಡಿಹಾಳ, ದುಂಡಗಿ, 28&29ನೇ ಕಾಲುವೆ, ಉಸಗಿನಕ್ಯಾಂಪ್ ಸೇರಿದಂತೆ ಸುತ್ತ ಮುತ್ತಿಲಿನ ಗ್ರಾಮಸ್ಥರು ಹಲಾಯಿ ದೇವರಿಗೆ ದೀರ್ಘದಂಡ ನಮಸ್ಕಾರ, ಬೇಡಿಕೆ, ಫಲದಾಯಕದ ನಂತರ ಹರಕೆ ಮುಟ್ಟಿಸುವುದು, ಸಕ್ಕರೆ ಸಮರ್ಪಣೆ ಮಾಡುವ ಮೂಲಕ ಅಲಾಯಿ ದೇವರು ಕೃಪೆಗೆ ಪಾತ್ರರಾದರು. ಅಲಾಯಿ ಕುಣಿಯಲ್ಲಿ ಕಟ್ಟಿಗೆಗಳನ್ನು ಹಾಕಿ ಅಗ್ನಿ ಸ್ಪರ್ಶಿಸಿ, ಯುವಕರು ಅಲಾಯಿ ಕುಣಿದು ಕುಪ್ಪಳಿಸಿದರು. ಬೆಳಗ್ಗೆ 3ಗಂಟೆಗೆ ಗ್ರಾಮದ ಮುಖ್ಯಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಮೊಹರಂ ಕೊನೆಯ ದಿನವಾದ ಜುಲೈ-06ರಂದು ಗ್ರಾಮಸ್ಥರೆಲ್ಲರೂ ಮಸೀದಿಯ ಮುಂದೆ ನೆರೆದು ದೇವರನ್ನು ಸ್ಮರಿಸುವ ಮೂಲಕ ದೇವರು ಕೃಪೆಗೆ ಪಾತ್ರರಾದರು. ನೂರಾರು ಯುವಕರು ಹಲಗೆಯ ಶಬ್ದಕ್ಕೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿ ಹಲಾಯಿ ದೇವರುಗಳನ್ನು ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ನಾಗನಗೌಡ ಪೊಲೀಸ್ ಪಾಟೀಲ್, ನೀಲಾಧರ ನಾಯಕ, ಶರಣಪ್ಪ ನಾಡಿಗೇರ್, ಭದ್ರಪ್ಪ ನಾಡಿಗೇರ್, ಪಾರಿಚಾತಪ್ಪ, ವೆಂಕೋಬಣ್ಣ ಕಲ್ಗುಡಿ, ಹನುಮಂತ ಕಲ್ಗುಡಿ, ನಿಂಗಪ್ಪ ಮನ್ನಾಪುರ, ಸಣ್ಣನಾಗಪ್ಪ ನಾಡೀಗೇರ್, ವೆಂಕಟೇಶ, ಲಚಮಪ್ಪ ಕಲ್ಗುಡಿ, ಸೋಮಲಿಂಗಪ್ಪ ಗುಂಡಾಣಿ, ಸೋಮನಾಥ ಹಿರೇಮನಿ, ಶೇಷಪ್ಪ ಹಿರೇಮನಿ, ಓಲಿಸಾಬ್, ಮಲ್ಲಿಕಾರ್ಜುನ ತೊಂಡಿಹಾಳ, ಸಣ್ಣಕುಂಟೆಪ್ಪ, ನಿಂಗಪ್ಪ ಗುನ್ನಾಳ, ದುರುಗಪ್ಪ ಕರಡೋಣಿ, ಶರಣಪ್ಪ ಛಲವಾದಿ, ಪರಸಪ್ಪ, ವೀರೇಶ ಗುಡೂರು, ಯಮನೂರ ಮೂಲಿಮನಿ, ಮಂಜುನಾಥ ಬುಕ್ಕನಟ್ಟಿ, ರಮೇಶ ಹಿರೇಮನಿ, ಶಿವಕುಮಾರ ಹಿರೇಮನಿ, ಧನಂಜಯ ಗುಡೂರು, ಕುಮಾರಪ್ಪ ಗುಂಡಾಣಿ, ವೆಂಕಟೇಶ ನಾಡಿಗೇರ್, ರವಿಚಂದ್ರ ಗುಂಡಾಣಿ, ಯಮನೂರ ಛಲವಾದಿ, ಮಹಾದೇವಪ್ಪ ಕುರುಬರು, ನಾಗಪ್ಪ ಹಡಪದ, ಹುಲುಗಪ್ಪ ಮಡಿವಾಳ, ಶಿವಪೂರ ಹನುಮಂತ, ಬಸಪ್ಪ ಮನ್ನಾಪೂರ, ಹನುಮಂತ ಹಿರೇಮನಿ, ಬಾಲನಗೌಡ, ಬಸವರಾಜ ಗುಡೂರು, ಪವಡೆಪ್ಪ ಕ್ಯಾರಿಹಾಳ, ಸೇರಿದಂತೆ ತೊಂಡಿಹಾಳ, ದುಂಡಿಗಿ, ಉಸಗಿನಕ್ಯಾಂಪ್, 28-29ನೇ ಕಾಲುವೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಯುವಕರು ಮಹಿಳೆಯರು ಸೇರಿದ್ದರು.