Ad image

ಹತ್ತಿ ಬೆಳೆಗಾರರ ಹಾಗೂ ಬೀಜೋತ್ಪಾದಕ ಕಂಪನಿ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿಗಳ ಸೂಚನೆ

Vijayanagara Vani
ಕೊಪ್ಪಳ ಜುಲೈ 10 : ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಹತ್ತಿ ಬೆಳೆಗಾರರು ಮತ್ತು ಬೀಜ ಉತ್ಪಾದನಾ ಕಂಪನಿಗಳ ಪ್ರತಿನಿಧಿಗಳ ಸಭೆ ಜರುಗಿದ್ದು, ಈ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಕೆಲವು ಸೂಚನೆಗಳನ್ನು ಪಾಲಿಸಲು ಸೂಚಿಸಿರುತ್ತಾರೆ.
ಹತ್ತಿ ಬಿತ್ತನೆ ಬೀಜ ಉತ್ಪಾದನಾ ಕ್ಷೇತ್ರದಲ್ಲಿ ಬಂದ ಇಳುವರಿಯನ್ನು ಯಾವುದೇ ಗರಿಷ್ಟ ಮಿತಿ ಹಾಕದೆ ಸಂಪೂರ್ಣವಾಗಿ ಕಂಪನಿಗಳು ಖರೀದಿ ಮಾಡಬೇಕು. ಈ ವರ್ಷದಿಂದ ರೈತರು, ಬೀಜ ಸಂಘಟಕರು ಹಾಗೂ ಕಂಪನಿಗಳ ನಡುವೆ ಕರಾರು ಒಪ್ಪಂದ ಮಾಡಿಕೊಳ್ಳಲು ಪ್ರೆರೇಪಿಸಬೇಕು. ಎಲ್ಲಾ ಸಂಘಟಕರ ಹೆಸರು, ಪೋನ್ ನಂಬರ್ಗಳನ್ನು ಕಂಪನಿಯವರಿಂದ ಪಡೆದು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಬಿತ್ತನೆ ಬೀಜ ಕಂಪನಿಗಳು ನೀಡಿರುವ ಉತ್ಪಾದನಾ ಕ್ಷೇತ್ರಗಳ ಪಟ್ಟಿ, ರೈತರ ಹೆಸರು, ಸರ್ವೆ ಸಂಖ್ಯೆ ಮತ್ತು ಸಂಘಟಕರ ವಿವರಗಳನ್ನು ಜಿಲ್ಲಾಡಳಿತಕ್ಕೆ ಒದಗಿಸಬೇಕು.
ಇನ್ನು ಮುಂದೆ ಬೀಜೋತ್ಪಾದನೆಯಲ್ಲಿ ತೊಡಗಿರುವ ಕಂಪನಿಗಳು ಹಾಗೂ ಬೀಜೋತ್ಪಾದನೆ ಮಾಡುವ ರೈತರು ಕಡ್ಡಾಯವಾಗಿ ಕರಾರು ಒಪ್ಪಂದ ಮಾಡಿಕೊಂಡು, ಒಪ್ಪಂದದಲ್ಲಿ ನಮೂದು ಮಾಡಲಾದ ಅಂಶಗಳಂತೆ ಕಾರ್ಯನಿರ್ವಹಿಸಬೇಕು. ಈ ಎಲ್ಲಾ ಅಂಶಗಳನ್ನು ಕಂಪನಿಗಳು ಹಾಗೂ ಬೀಜ ಸಂಘಟಕರು ತಪ್ಪಿದಲ್ಲಿ ಅವರ ವಿರುದ್ಧ ದೂರನ್ನು ಲಿಖಿತ ರೂಪದಲ್ಲಿ ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ನೀಡುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಟಿ.ಎಸ್.ರುದ್ರೇಶಪ್ಪ ಅವರು ಪ್ರಕಟಣೆ ತಿಳಿಸಿದ್ದಾರೆ.

Share This Article
error: Content is protected !!
";