Ad image

ಮೀನುಗಾರಿಕೆಗೆ ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನ

Vijayanagara Vani
ಶಿವಮೊಗ್ಗ ಜುಲೈ 11; : ಮೀನುಗಾರಿಕೆ ಇಲಾಖೆಯು 2025-26ನೇ ಸಾಲಿನ ಜಿಲ್ಲಾ ವಲಯ ಮತ್ತು ರಾಜ್ಯ ವಲಯ ಯೋಜನೆಗಳಡಿ ವಿವಿಧ ಸೌಲಭ್ಯವನ್ನು ನೀಡಲು ಅರ್ಹ ಮೀನುಗಾರರಿಂದ ಅರ್ಜಿ ಆಹ್ವಾನಿಸಿದೆ.
ಜಿಲ್ಲಾ ವಲಯ ಯೋಜನೆಗಳು : ರೂ. 10000/- ಮೌಲ್ಯದ ಮೀನುಗಾರಿಕೆ ಸಲಕರಣೆ ಕಿಟ್ಟು/ಫೈಬರ್ ಗ್ಲಾಸ್ ಹರಿಗೋಲು ಖರೀದಿ ಯೋಜನೆ (ಕಳೆದ 3 ವರ್ಷಗಳಲ್ಲಿ ಈ ಯೋಜನೆಯಡಿ ಸೌಲಭ್ಯ ಪಡೆದಿರಬಾರದು ಹಾಗೂ ಒಬ್ಬರಿಗೆ ಒಮ್ಮೆ ಮಾತ್ರ ಫೈಬರ್ ಗ್ಲಾಸ್ ಹರಿಗೋಲು ವಿತರಿಸಲಾಗುವುದು) ಮತ್ತು ದ್ವಿಚಕ್ರ ವಾಹನ ಹಾಗೂ ಐಸ್ ಬಾಕ್ಸ್ ಖರೀದಿಗೆ ಸಹಾಯಧನ (ಈ ಹಿಂದೆ ಈ ಯೋಜನೆಯಡಿ ಸೌಲಭ್ಯ ಪಡೆದಿರಬಾರದು)
ರಾಜ್ಯ ವಲಯ ಯೋಜನೆಗಳು: ರೂ. 10000/- ಮೌಲ್ಯದ ಮೀನುಗಾರಿಕೆ ಸಲಕರಣೆ ಕಿಟ್ಟು/ಫೈಬರ್ ಗ್ಲಾಸ್ ಹರಿಗೋಲು ಖರೀದಿ ಯೋಜನೆ (ಕಳೆದ 3 ವರ್ಷಗಳಲ್ಲಿ ಈ ಯೋಜನೆಯಡಿ ಸೌಲಭ್ಯ ಪಡೆದಿರಬಾರದು ಹಾಗೂ ಒಬ್ಬರಿಗೆ ಒಮ್ಮೆ ಮಾತ್ರ ಫೈಬರ್ ಗ್ಲಾಸ್ ಹರಿಗೋಲು ವಿತರಿಸಲಾಗುವುದು), ಮೀನುಮರಿ ಖರೀದಿಗಾಗಿ ಸಹಾಯ ಯೋಜನೆ ಹಾಗೂ ಕೆರೆ ಅಂಚಿನ ಕೊಳಗಳಲ್ಲಿ ಮೀನುಮರಿ ಪಾಲನೆಗೆ ಸಹಾಯ.
ಆಸಕ್ತರು ಜಿಲ್ಲಾ ಪಂಚಾಯತ್ ಯೋಜನೆಗಳಿಗೆ ಪೋರ್ಟಲ್ ಮೂಲಕ ಮತ್ತು ರಾಜ್ಯ ವಲಯ ಯೋಜನೆಗಳಿಗೆ ಸೇವಾಸಿಂಧು ಪೋರ್ಟಲ್ ಮೂಲಕ ಜು. 15 ರಿಂದ ಆ. 14ರೊಳಗಾಗಿ ಅರ್ಜಿ ಸಲ್ಲಿಸುವಂತೆ ಮೀನುಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಮೊಬೈಲ್ ಸಂಖ್ಯೆ ಶಿವಮೊಗ್ಗ-9986040981, ಭದ್ರಾವತಿ-9743370815, ಶಿಕಾರಿಪುರ- 9535386449/ 9686939028, ಸಾಗರ -9538044365, ಸೊರಬ -9535386449, ತೀರ್ಥಹಳ್ಳಿ- 8655132438 ಇವರುಗಳನ್ನು ಸಂಪರ್ಕಿಸುವುದು.

Share This Article
error: Content is protected !!
";