ಸಿರುಗುಪ್ಪ: ನಗರದ ಡ್ರೈವರ್ ಕಾಲೋನಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜೀವ್ ಗಾಂಧಿ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರುಗಳಾದ ಸಿದ್ಧಲಿಂಗ ಜೆ. ಮಸೂತಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಕ ಎಸ್. ಮಸೂತಿ ದಂಪತಿಗಳ ಪುತ್ರಿಯಾದ ಕುಮಾರಿ ರೇಣುಕಾ ಅವರ ದ್ವಿತೀಯ ವರ್ಷದ ಜನ್ಮದಿನವನ್ನು ಗುರುವಾರದಂದು ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ, ಅಂಕಲಿಪಿ ಮತ್ತು ಪೆನ್ನುಗಳನ್ನು ವಿತರಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ 6ನೇ ವಿಭಾಗದ ಸಿ.ಆರ್.ಪಿ.ಯವರಾದ ಮಾರುತಿ ಅವರು ಮಾತನಾಡುತ್ತಾ ”ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಸಾರ್ವಜನಿಕರ ಪಾತ್ರ ಬಹಳ ಮುಖ್ಯವಾಗಿದ್ದು, ಈ ದಿನ ನಮ್ಮ ಸರ್ಕಾರಿ ಶಾಲೆಯಲ್ಲಿ ರಾಜೀವ್ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರುಗಳಾದ ಸಿದ್ಧಲಿಂಗ ಜೆ. ಮಸೂತಿ ಮತ್ತು ಪ್ರಿಯಾಂಕ ಎಸ್. ಮಸೂತಿ ದಂಪತಿಗಳು ತಮ್ಮ ಮಗಳ ದ್ವಿತೀಯ ವರ್ಷದ ಜನ್ಮದಿನ ಆಚರಣೆ ಅಂಗವಾಗಿ ಶಾಲೆಯ 80ಕ್ಕೂ ಮೇಲ್ಪಟ್ಟ ಮಕ್ಕಳೆಲ್ಲರಿಗೂ ನೋಟ್ ಪುಸ್ತಕ, ಪೆನ್ನು, ಅಂಕಲಿಪಿಯನ್ನು ವಿತರಿಸಿದ್ದು ಅಭಿನಂದನಾರ್ಹವಾಗಿದೆ. ಇದೇ ರೀತಿಯಾಗಿ ಸಾರ್ವಜನಿಕರು ಅನಗತ್ಯ ದುಂದು ವೆಚ್ಚಗಳನ್ನು ತಪ್ಪಿಸಿ ಸರ್ಕಾರಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ಸಹಾಯ ಮಾಡಿದರೆ ಬಡಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನಮಾನಕ್ಕೆ ಬರಲು ಸಾಧ್ಯವಾಗುತ್ತದೆ” ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜೀವ್ ಗಾಂಧಿ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರುಗಳಾದ ಸಿದ್ಧಲಿಂಗ ಜೆ. ಮಸೂತಿಯವರು “ನಾವು ಖಾಸಗಿ ಶಾಲೆಯ ಮುಖ್ಯ ಗುರುಗಳಾಗಿದ್ದರೂ ಸಹ, ನಾವು ಓದಿದ್ದು ಕನ್ನಡ ಶಾಲೆಗಳಲ್ಲಿ ಹಾಗಾಗಿ ಕನ್ನಡ ಮತ್ತು ಸರ್ಕಾರಿ ಶಾಲೆಯ ಮೇಲಿನ ಅಭಿಮಾನ ಮರೆತಿಲ್ಲ ತಮ್ಮ ಮಗಳ ಜನ್ಮ ದಿನಾಚರಣೆಯನ್ನು ಸರ್ಕಾರಿ ಶಾಲೆಯಲ್ಲಿ ಈ ರೀತಿಯಾಗಿ ಆಚರಿಸಿದ್ದು ಖುಷಿ ನೀಡಿದೆ. ಇದೇ ರೀತಿ ಮುಂದೆ ಅಗತ್ಯವಿದ್ದಾಗ ತಮ್ಮ ಕೈಲಾದಷ್ಟು ಸಹಾಯವನ್ನು ನಾವು ಮಾಡಲು ಸಿದ್ಧರಿದ್ದೇವೆ” ಎಂದು ಹೇಳಿದರು
ಸದರಿ ಕಾರ್ಯಕ್ರಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ
ಬಿ.ಎಂ.ಶಿವಗಂಗಮ್ಮ, ಭಾರತಿ, ಅತಿಥಿ ಶಿಕ್ಷಕರಾದ ಅನಿತಾ, ಜಯಮ್ಮ, ಗಣ್ಯರಾದ ಪಂಪನಗೌಡ ಮುದ್ದಣ್ಣನವರ್, ಕೆ.ಎಂ.ಮಲ್ಲಿಕಾರ್ಜುನಯ್ಯ ಸ್ವಾಮಿ, ಪಂಪನಗೌಡ ಮತ್ತು ಶಾಲೆಯ ಮಕ್ಕಳೆಲ್ಲರೂ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಬಿ. ಎಂ.ಶಿವಗಂಗಮ್ಮ ಅವರು ಸಿದ್ದಲಿಂಗ ಜೆ ಮಸೂತಿ ಮತ್ತು ಪ್ರಿಯಾಂಕ ಎಸ್. ಮಸೂತಿ ದಂಪತಿಗಳಿಗೆ ಅಭಿನಂದನೆ ಸಲ್ಲಿಸಿದರು.