*
*ಧಾರವಾಡ ಜು.18:* ಜುಲೈ 15 ರಂದು ನಬಾರ್ಡ ಕ್ಷೇತ್ರಿಯ ಕಾರ್ಯಲಯ ಬೆಂಗಳೂರುನಲ್ಲಿ ಆಯೋಜಿಸಿದ್ದ ನಬಾರ್ಡ 44 ಸಂಸ್ಥೆ ದಿನಾಚರಣೆ ಅಂಗವಾಗಿ ಸ್ವಾವಲಂಬಿ ಒಕ್ಕೂಟಗಳು ಆಯೋಜಿಸಿದ್ದ ಕೈ ಕುಸುರಿ ಹಾಗೂ ಕೈಮಗ್ಗ ವಸ್ತುಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದ ಧಾರವಾಡದ ಸ್ವಾವಲಂಬಿ ಸಖಿ ಒಕ್ಕೂಟ ತಯಾರಿಸಿದ ಅದ್ಭುತವಾದ ಆರಿ ಕಸೂತಿ ಉತ್ಪನ್ನಗಳಿಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜಿನೀಶ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಆರಿ ಕಲೆಯು, ಕಾಶ್ಮೀರದಲ್ಲಿ ಹುಟ್ಟಿಕೊಂಡಿದ್ದರು, ನಮ್ಮ ಧಾರವಾಡದ ಮಹಿಳೆಯರು ಅದನ್ನು ವಿವಿಧ ಉತ್ಪನ್ನಗಳಿಗೆ ಅಳವಡಿಸಿಕೊಂಡಿದ್ದಾರೆ. ಅದರಿಂದ ಅವರು ಬಹಳಷ್ಟು ಕಲಾತ್ಮಕ ವಸ್ತುಗಳನ್ನು ತಯಾರಿಸಿದ್ದಾರೆ. ಇದುವರೆಗೆ 1.85 ಕೋಟಿಯ ವ್ಯವಹಾರ ಮಾಡಿದ್ದು, ಅದಕ್ಕೆ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಅವರು ಖಣದ ಬಟ್ಟೆ ಮತ್ತು ಆರಿ ಕಲೆಯನ್ನು ನವೀಕರಿಸಿ ಅದರಿಂದ ಆಭರಣಗಳು, ಬ್ಯಾಗುಗಳು, ಮಕ್ಕಳ ಉಡುಪುಗಳು, ಲೆಹೆಂಗಾ ಬ್ಲೌಸ್ ಇತ್ಯಾದಿ ಉಡುಪುಗಳನ್ನು ತಯಾರಿಸಿದ್ದಾರೆ. ಹುಬ್ಬಳ್ಳಿಯ ಶಿರೂರ ಪಾರ್ಕ್ ಹತ್ತಿರ ಇವರು ಒಂದು ಮಳಿಗೆಯನ್ನು ತೆರೆದು, ಸದರಿ ಉತ್ಪನ್ನಗಳ ಮಾರಾಟವನ್ನು ಉತ್ತಮವಾಗಿ ಕೈಗೊಂಡಿದ್ದಾರೆ.
2021 ರಲ್ಲಿ ಧಾರವಾಡ ಜಿಲ್ಲೆಯಲ್ಲಿ, ನಬಾರ್ಡ್ ಸಹಭಾಗಿತ್ವದಲ್ಲಿ, 350 ಸದಸ್ಯರನ್ನು ಒಳಗೊಂಡು ಈ ಕಂಪನಿ ಪ್ರಾರಂಭಿಸಿದರು. ಇದಕ್ಕೆ 9 ಜನ ಮಹಿಳಾ ನಿರ್ದೇಶಕರು ಎಲ್ಲರೂ ಗ್ರಹಿಣಿಯರಾಗಿದ್ದು ಈ ಕಂಪನಿಯನ್ನು ಬಲಿಷ್ಠವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಆರು ಘಟಕಗಳಿದ್ದು, ಆರಿಬ್ಯಾಗ್ ಯೂನಿಟ್, ಎಥನಿಕ್ ವೇರ್, ಲಾಂಜ್ ವೇರ, ಫ್ರೇಮ್ ಯುನಿಟ್, ಜುವೆಲರಿ ಯೂನಿಟ್, ಕುರ್ತಿ ಯೂನಿಟ್ ಹೀಗೆ ಆರು ಘಟಕಗಳನ್ನು ನಿರ್ವಹಿಸುತ್ತಿದ್ದಾರೆ. ಎಲ್ಲಾ ಉತ್ಪನ್ನಗಳನ್ನು ಅಲ್ಲಿಯೇ ತಯಾರಿಸಲಾಗುತ್ತಿದೆ.
ಕರ್ನಾಟಕ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಅವಸರ್ ಎಂಬ ಒಂದು ಮಳಿಗೆಯನ್ನು ಸ್ಥಾಪಿಸಿದ್ದಾರೆ. ಈ ಮಳಿಗೆ ನಮಗೆ ದೊರೆತಿರುವುದು , ಒಂದು ಸುವರ್ಣ ಅವಕಾಶವಾಗಿದೆ. ಎಂದು ಡಾ. ಶಾಲಿನಿ ರಜನೀಶ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ಸ್ವಾವಲಂಬಿ ಸಖಿ ಕಂಪನಿಯು, ಸಾಮಾಜಿಕ ಜಾಲ ತಾಣಗಳಾದ face book,instagram (@authentic_Karnataka) ನಲ್ಲಿಯೂ ಸಕ್ರಿಯವಾಗಿದೆ. ತಮ್ಮ ವೆಬ್ ಸೈಟ authentickarnataka.in ಮೂಲಕ ವ್ಯವಹರಿಸುತ್ತಿದೆ.
ಈ ಚಟುವಟಿಕೆಗಳಿಗೆ ನಬಾರ್ಡ್ ಬ್ಯಾಂಕ ಆರ್ಥಿಕವಾಗಿ ಹಾಗೂ ಟ್ರೈನಿಂಗ್ ಗಳಿಗಾಗಿ ಸಹಾಯವನ್ನು ನೀಡುವ ಮೂಲಕ ಮಹಿಳೆಯರಿಗೆ ಆಧಾರವಾಗಿ ನಿಂತಿದೆ. ಸ್ವಾವಲಂಬಿ ಮಹಿಳೆಯರ ಈ ಕಥೆಯು ಎಲ್ಲ ಮಹಿಳೆಯರಿಗೂ ಸ್ಪೂರ್ತಿಯಾಗಲಿ ಎಂದು ಡಾ. ಶಾಲಿನಿ ರಜನೀಶ್ ರವರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ನಬಾರ್ಡ್ನ ಚೀಫ್ ಜನರಲ್ ಮ್ಯಾನೇಜರ ಡಾ. ಸುರೇಂದ್ರ ಬಾಬು ಗುಪ್ತಾ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೀಜನಲ್ ಡೈರೆಕ್ಟರ್ ಡಾ.ಸೋನಾಲಿ ಸೇನ್, ಕೆನರಾ ಬ್ಯಾಂಕ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಭವೇಂದ್ರ ಕುಮಾರ್, ಧಾರವಾಡ ನಬಾರ್ಡನ ಸಹಾಯಕ ಮಹಾ ಪ್ರಬಂಧಕ ಮಯೂರ ಕಾಂಬ್ಳೆ, ಸ್ವಾಲಂಬಿ ಸಖಿ ಒಕ್ಕೂಟದ ಸರ್ವಮಂಗಳ ಮೊತಿ, ವಿಜಯ ಮುದಿಗೌಡರ ಮತ್ತು ಅಕ್ಷತಾ ಎಫ್. ಅವರು ಇದ್ದರು.