Ad image

ಸಂಡೂರು: ಫಿಜಿಯೋಥೆರಪಿಸ್ಟ್, ಸಹಾಯಕಿ ಹುದ್ದೆಗಳ ನೇಮಕಕ್ಕಾಗಿ ಅರ್ಜಿ ಆಹ್ವಾನ

Vijayanagara Vani
ಬಳ್ಳಾರಿ,1
ಪ್ರಸ್ತಕ ಸಾಲಿಗೆ ಸಂಡೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ ವಿಶೇಷ ಚೇತನ ಮಕ್ಕಳಿಗೆ ಫಿಜಿಯೋಥೆರಪಿ ಚಿಕಿತ್ಸೆ ನೀಡಲು ಒಂದು ಫಿಜಿಯೋಥೆರಪಿಸ್ಟ್ ಹುದ್ದೆ ಹಾಗೂ ಎಸ್‌ಆರ್‌ಪಿ ಕೇಂದ್ರದ ವೈದ್ಯರ ಸಹಾಯಕ್ಕಾಗಿ ಒಬ್ಬ ಮಹಿಳಾ ಸಹಾಯಕಿಯರ ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ 08 ತಿಂಗಳ ಅವಧಿಗೆ ತಾತ್ಕಲಿಕವಾಗಿ ನೇಮಕ ಮಾಡಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಆಗಸ್ಟ್ 04 ಕೊನೆಯ ದಿನ. ವಿದ್ಯಾರ್ಹತೆ: ವೈದ್ಯರ ಹುದ್ದೆಗೆ ಬ್ಯಾಚುಲರ್ ಆಫ್ ಫಿಜಿಯೋಥೆರಪಿ ಅಥವಾ ಡಿಪ್ಲೋಮಾ ಆಫ್ ಫಿಜಿಯೋಥೆರಪಿ ಆಗಿರಬೇಕು. ಮಹಿಳಾ ಸಹಾಯಕಿ ಹುದ್ದೆಗೆ 07 ತರಗತಿ ಉತ್ತೀರ್ಣರಾಗಿರಬೇಕು.
ಆಸಕ್ತ ಅಭ್ಯರ್ಥಿಗಳು ತಮ್ಮ ಅಗತ್ಯ ದಾಖಲೆಗಳೊಂದಿಗೆ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ, ಬಿಆರ್‌ಸಿ ಕಚೇರಿ, ಸಂಡೂರು ಇಲ್ಲಿಗೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಮೊ.9945113304, 9900240450 ಗೆ ಸಂಪರ್ಕಿಸಬಹುದು ಎಂದು ಸಂಡೂರು ಕ್ಷೇತ್ರ ಸಮನ್ವಯಾಧಿಕಾರಿಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
error: Content is protected !!
";