Ad image

ಪಟ್ಟಣದಲ್ಲಿ ಅಪರಾಧ ತಡೆಗೆ ಸೂಕ್ತ ಕ್ರಮವಹಿಸಲಾಗಿದೆ : ಸಿ.ಪಿ.ಐ ವಿಶ್ವನಾಥ ಹಿರೇಗೌಡರ್

Vijayanagara Vani
ಪಟ್ಟಣದಲ್ಲಿ ಅಪರಾಧ ತಡೆಗೆ ಸೂಕ್ತ ಕ್ರಮವಹಿಸಲಾಗಿದೆ : ಸಿ.ಪಿ.ಐ ವಿಶ್ವನಾಥ ಹಿರೇಗೌಡರ್
ಪಟ್ಟಣದಲ್ಲಿ ನಡೆಯುವ ಯಾವುದೇ ಅಪರಾಧ ಪ್ರಕರಣಗಳ ಪತ್ತೆ ಹಚ್ಚಲು ವಿಡಿಯೋ ದೃಶ್ಯಾವಳಿಗಳು ಅತಿ ಮುಖ್ಯವಾಗಿದ್ದು ಪಟ್ಟಣದ 16ಕಡೆಗಳಲ್ಲಿ  ಸಿಸಿ ಕ್ಯಾಮೆರಾ ಅಳವಡಿಸಲು ಪ್ರಮುಖವಾಗಿ ಗುರುತಿಸಲಾಗಿದೆ ಎಂದು ಸಿಪಿಐ ವಿಶ್ವನಾಥ ಹಿರೇಗೌಡ ಹೇಳಿದರು.
ಪಟ್ಟಣದ ಪುರಸಭೆಯಲ್ಲಿ ಗುರುವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಮೂಲಕ ಅತಿ ಹೆಚ್ಚಿನ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಬಹುದಾಗಿದೆ. ಒಂದೊಂದು ದೃಶ್ಯ ಸಾಕಷ್ಟು ಮಾಹಿತಿಗಳನ್ನು ಒದಗಿಸುತ್ತವೆ ಅದ್ದರಿಂದ ಪ್ರಮುಖ ವೃತ್ತಗಳಲ್ಲಿ ರಸ್ತೆಗಳಲ್ಲಿ ಕ್ಯಾಮೆರಾ ಅಳವಡಿಸಿದರೆ ಕಳ್ಳರನ್ನು ಹಿಡಿಯಲು ಅನೂಕೂಲವಾಗುತ್ತದೆ ಮೂರು ಜನಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ರಾತ್ರಿ ಸಮಯದಲ್ಲಿ ಕಂಡು ಬಂದರೆ ಅವರ ಚಲನವಲನಗಳ ಮೇಲೆ ನಿಗಾ ಇರಿಸಲು ಸಿಸಿ ಕ್ಯಾಮೆರಾ ಅತಿ ಮುಖ್ಯವಾದ ಡಾಟ ಒದಗಿಸುತ್ತದೆ ಎಂದು ಸಿಪಿಐ ವಿಶ್ವನಾಥ ಹಿರೇಗೌಡ ಅವರು ಹೇಳಿದರು.
ಕಂಪ್ಲಿ ಕ್ಷೇತ್ರದ ಶಾಸಕ ಜೆ ಎನ್ ಗಣೇಶ  ಮುಖ್ಯಾಧಿಕಾರಿ ಹರ್ಷವರ್ಧನ್ ಪುರಸಭೆ  ಅಧ್ಯಕ್ಷ ಶೇಖಣ್ಣ ಪಿಎಸ್ಐ ಸುಪ್ರೀತ್ ವಿರುಪಕ್ಷಪ್ಪ,ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ ಹಾಗೂ ಪುರಸಭೆ ಸದಸ್ಯರು ಇತರರು ಇದ್ದರು.

Share This Article
error: Content is protected !!
";