ರಾಯಚೂರು ಆಗಸ್ಟ್ 19 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 2006-07ನೇ ಸಾಲಿನಿಂದ ಭಾಗ್ಯಲಕ್ಷ್ಮಿ
ಯೋಜನೆಯನ್ನು ಜಾರಿ ಬಂದಿದ್ದು, ಈ ಯೋಜನೆಯಡಿ ಭಾಗ್ಯಲಕ್ಷ್ಮಿ ಬಾಂಡ್ ಅಥವಾ ಸೌಲಭ್ಯವನ್ನು ಪಡೆದಿರುವ ಫಲಾನುಭವಿಗಳಿಗೆ 2024-25ನೇ ಸಾಲಿನಿಂದ 18 ವರ್ಷ ಪೂರ್ಣಗೊಂಡ ನಂತರ ಭಾಗ್ಯಲಕ್ಷ್ಮಿ ಪರಿಪಕ್ವ ಮೊತ್ತವನ್ನು ಪಾವತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ 2006-07, 2007-08ನೇ ಸಾಲಿನಲ್ಲಿ ಭಾಗ್ಯಲಕ್ಷ್ಮಿ ಸೌಲಭ್ಯವನ್ನು ಪಡೆದಿರುವ ಫಲಾನುಭವಿಗಳು 18 ವರ್ಷ ಪೂರ್ಣಗೊಂಡಿದ್ದು, ಈ ಫಲಾನುಭವಿಗಳು ಹತ್ತಿರ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ನಿಗಧಿತ ನಮೂನೆಗಳನ್ನು ಪಡೆದು ಪರಿಪಕ್ವ ಮೊತ್ತ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಗನವಾಡಿ ಕೇಂದ್ರಗಳಿಗೆ ಅಥವಾ ಶಿಶು ಅಭಿವೃದ್ಧಿ ಯೋಜನೆನಾಧಿಕಾರಿಗಳಿಂದ ಮಾಹಿತಿ ಪಡೆಯಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.