ಬಳ್ಳಾರಿ,ಆ.19
ಸಾರ್ವಜನಿಕರಿಗೆ ಎಲ್ಲಾ ವಿಧದ ಆರೋಗ್ಯ ಸೇವೆ-ಸೌಲಭ್ಯ ತಲುಪಿಸಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ ಅವರು ಹೇಳಿದರು.
ಮಂಗಳವಾರ ಸಿರುಗುಪ್ಪ ತಾಲ್ಲೂಕಿನ ಕುಡುದರಹಾಳ್ ಗ್ರಾಮದ ಆರೋಗ್ಯ ಕೇಂದ್ರಕ್ಕೆ ನೀಡಿ ಸಿಬ್ಬಂದಿಗಳೊ0ದಿಗೆ ಚರ್ಚಿಸಿ ಮಾತನಾಡಿದ ಅವರು ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿದರು.
ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿದಿನ ಮೂರು ಪಾಳಿ ವೇಳೆಯಲ್ಲಿ ಕೆಲಸ ನಿರ್ವಹಿಸಿಕೊಂಡು ಹೋಗಲು ನಮ್ಮ ಕ್ಲಿನಿಕ್ ಮತ್ತು ಆರ್.ಬಿ.ಎಸ್.ಕೆ ಅಡಿ ವೈದ್ಯರು, ಶುಶ್ರೂಷಕರು, ಗ್ರೂಪ್-ಡಿ ಮತ್ತು ವಾಹನ ಚಾಲಕರನ್ನು ನಿಯೋಜಿಸಲಾಗಿದೆ. ರೋಗಿಗಳ ಹಿತ ದೃಷ್ಟಿಯಿಂದ ತೀವ್ರತರ ಜ್ವರ ಪ್ರಕರಣಗಳಿಗೆ 108 ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಬಳಿಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಗ್ರಾಪಂ ವತಿಯಿಂದ ಚರಂಡಿಗಳ ಸ್ವಚ್ಛತೆ ಮತ್ತು ಬ್ಲಿಚಿಂಗ್ ಪೌಡರ್ ಸೇರಿದಂತೆ ಕಾಲಾನುಸಾರ ನಿರ್ವಹಣೆ ಕೈಗೊಳ್ಳಬೇಕು. ಗ್ರಾಮದಲ್ಲಿ ನಿಂತ ನೀರಿನ ತಗ್ಗು ಪ್ರದೇಶಗಳಲ್ಲಿ ಮಣ್ಣು ಹಾಕಿ ಮುಚ್ಚಬೇಕು. ಘನತಾಜ್ಯ ಮತ್ತು ಟೈರ್ಗಳ ಸೂಕ್ತ ವಿಲೇವಾರಿ ಮಾಡಲು ತಿಳಿಸಿದರು.
ಒಣ ದಿನ ಎಂದು ನಿಗದಿಪಡಿಸಿ ಒಂದು ದಿನ ಸಂಪೂರ್ಣವಾಗಿ ನೀರು ಸರಬರಾಜು ನಿಲ್ಲಿಸಿ ಸಂಜೆ ವೇಳೆ ಸರಬರಾಜು ಮಾಡಬೇಕು. ಫಾಗಿಂಗ್ ಕಾರ್ಯ ಕೈಗೊಳ್ಳಬೇಕು. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿಗಳು ಲಾರ್ವ ತಾಣಗಳ ಸಮೀಕ್ಷೆ ನಡೆಸಿ ಲಾರ್ವ ಕಂಡುಬ0ದ ಕೂಡಲೇ ಸಂಪೂರ್ಣವಾಗಿ ನೀರು ಖಾಲಿ ಮಾಡುವಂತೆ ಸೂಚಿಸಬೇಕು ಎಂದರು.
ಪ್ರತಿದಿನ ಶಾಲೆಯಲ್ಲಿ ಲಾರ್ವಗಳ ಪ್ರಾತ್ಯಕ್ಷಿತೆ ಹಾಗೂ ಡೆಂಗ್ಯು ಜ್ವರ ಕುರಿತು ಆರೋಗ್ಯ ಶಿಕ್ಷಣ ನೀಡಬೇಕು. ಆಶಾ ಕಾರ್ಯಕರ್ತೆಯರಿಂದ ಪ್ರತಿ ದಿನ ಜ್ವರ ಸಮೀಕ್ಷೆ ಮಾಡಬೇಕು. ಸಾಮಾನ್ಯ ಜ್ವರ ಪ್ರಕರಣ ಕಂಡುಬAದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ಚಿಕಿತ್ಸಾ ಸೌಲಭ್ಯ ಪಡೆಯಲು ತಿಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತçಜ್ಞೆ ಡಾ.ವಿಶಾಲಾಕ್ಷಿ, ಜಿಲ್ಲಾ ಕೀಟ ಶಾಸ್ತçಜ್ಞೆ ನಂದಾ ಕಡಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದಮ್ಮೂರ್ ಬಸವರಾಜ್, ಕ್ಷೇತ್ರ ಕಾರ್ಯಕ್ರಮ ವ್ಯವಸ್ಥಾಪಕ ಪ್ರಹಲ್ಲಾದ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಭೀಮರಾಜ್ ರೆಡಿ,್ಡ ಕ್ಷೇತ್ರ ಎಪಿಡಾಮ್ಲಾಜಿಸ್ಟ್ ರವಿಕುಮಾರ್, ಆರೋಗ್ಯ ನಿರೀಕ್ಷಣಾಧಿಕಾರಿ ನವೀನ್ ಸೇರಿದಂತೆ ಪ್ರಾಥಮಿಕ ಸುರಕ್ಷತಾ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು.
—————