ಬಳ್ಳಾರಿ :ನಗರದ ತಾಳೂರು ರಸ್ತೆಯ ಬಾಲಾಜಿ ಕಾಲೋನಿಯಲ್ಲಿರುವ ಕವನ ಪ್ರಕಾಶನದ ಪ್ರಕಾಶಕಿ ಶ್ರೀಮತಿ ವಾಣಿ ಅಜಯ್ ಬಣಕಾರ್ ರವರ ‘ಹೂನಗೆ’ ನಿವಾಸದಲ್ಲಿ ಕವನ ಪ್ರಕಾಶನದ ವತಿಯಿಂದ ಗುರುವಾರ ಸಂಜೆ 6.30 ಡಾ. ವಿಷ್ಣುವರ್ಧನ್ ರವರ 75 ಜನ್ಮದಿನ ಆಚರಣೆ ಹಾಗೂ ಕವಿಗೋಷ್ಠಿಯನ್ನು ಏರ್ಪಡಿಸಲಾಗಿತ್ತು.
ಕಲಿಯುಗದ ಕರ್ಣ ಸಾಹಸಸಿಂಹ ವಿಷ್ಣುವರ್ಧನ್ ಅವರ 75ನೇ ಜನ್ಮದಿನಾಚರಣೆ ಹಾಗೂ ಮರಣೋತ್ತರವಾಗಿ ಕರ್ನಾಟಕ ರತ್ನ ಘೋಷಿಸಿದ ಈ ಸಂದರ್ಭದಲ್ಲಿ ಕವಿಗೋಷ್ಠಿಯನ್ನು ದೊಡ್ಡಾಟ ಕಲಾವಿದ ಬಂಡ್ರಿ ಲಿಂಗಪ್ಪರವರು ಉದ್ಘಾಟಿಸಿ ದೊಡ್ಡಾಟದ ಮಾತುಗಳನ್ನು ಆಡಿದರು. ನಂತರ ಕವಿಗೋಷ್ಠಿಯಲ್ಲಿ ಡಾ. ಅರವಿಂದ್ ಪಾಟೀಲ್, ಪಿ.ಆರ್.ವೆಂಕಟೇಶ್, ಮಂಜುನಾಥ್ ರೆಡ್ಡಿ, ಡಾ. ಶ್ರೀನಿವಾಸ್ ಮೂರ್ತಿ, ಎ. ಎರಿಸ್ವಾಮಿ, ಡಾ. ಮಂಜುನಾಥ್ ಎಸ್, ಶ್ರೀಮತಿ ಕವಿತಾ ವಿರುಪಾಕ್ಷ, ಮಂಜುನಾಥ್ ಸ್ವಾಮಿ ಹೆಚ್ ಎಂ, ಡಾ. ತಿಪ್ಪೇರುದ್ರ, ಆಲಂಬಷ ಮುಂತಾದ ಕವಿಗಳು ಭಾಗವಹಿಸಿದ್ದರು.
ಕವಿಗೋಷ್ಠಿಯ ನಂತರ ಕೇಕ್ ಕಟ್ ಮಾಡುವುದರ ಮೂಲಕ ಡಾಕ್ಟರ್ ವಿಷ್ಣುವರ್ಧನ್ ರವರ 75ನೇ ಜನ್ಮದಿನಾಚರಣೆಯನ್ನು ಆಚರಿಸಿ ಸಂಭ್ರಮಿಸಲಾಯಿತು,
ಮುಖ್ಯ ಅತಿಥಿಗಳಾಗಿ ನೀರಾವರಿ ಇಲಾಖೆಯ ಮಂಜುನಾಥ್, ಉಪನ್ಯಾಸಕರಾದ ಮಂಜುನಾಥ್ ರೆಡ್ಡಿ, ಹಿರಿಯ ಸಾಹಿತಿಗಳಾದ ಪಿ.ಆರ್. ವೆಂಕಟೇಶ್, ಕವನ ಪ್ರಕಾಶನದ ಪ್ರಕಾಶಿಕಿಯರಾದ ಶ್ರೀಮತಿ ವಾಣಿ ಅಜಯ್ ಬಣಕಾರ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಹಾಗೂ ಈ ಕವಿಗೋಷ್ಠಿ ಕಾರ್ಯಕ್ರಮಕ್ಕೆ ಹಲವಾರು ಸಾಹಿತ್ಯ ಆಸಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಪ್ರಾರಂಭದಲ್ಲಿ ಕುಮಾರಿ ಪರ್ವೀನ್ ಬಾನು ಪ್ರಾರ್ಥನೆ ನೆರವೇರಿಸಿದರು, ಕವಿ ಅಜಯ್ ಬಣಕಾರ್ ಸ್ವಾಗತಿಸಿ ಪ್ರಸ್ತಾವಿಕ ನುಡಿಯನ್ನು ನುಡಿದರು, ನಾಗರೆಡ್ಡಿ ಕೆ ವಿ ನಿರೂಪಿಸಿ ವಂದಿಸಿದರು.