ಸಿರುಗುಪ್ಪ: ಸೆ.22 ರಿಂದ ಹಿಂದುಳಿದ ವರ್ಗಗಳ ಆಯೋಗ ಶೈಕ್ಷಣಿಕ ಆರ್ಥಿಕ ಮತ್ತು ಸಾಮಾಜಿಕ ಜಾತಿಗಣತಿ ನಡೆಸುತ್ತಿದ್ದು, ಗಣತಿದಾರರು ಪ್ರತಿ ಮನೆ ಮನೆಗೆ ಬಂದು ಮಾಹಿತಿ ಕೇಳಿದಾಗ ಎಲ್ಲರೂ ಕಡ್ಡಾಯವಾಗಿ ಕ್ರಮ ಸಂಖ್ಯೆ 8 ಧರ್ಮ ಇಸ್ಲಾಂ, ಕ್ರಮ ಸಂಖ್ಯೆ 9 ಜಾತಿ ನದಾಫ್/ಪಿಂಜಾರ ಕ್ರಮ ಸಂಖ್ಯೆ 30 ಕುಲಕಸಬು ಹತ್ತಿ ಶುದ್ಧಗೊಳಿಸುವುದು (ಅನ್ವಯಿಸುವವರು ) ಇತರೆ ವೃತ್ತಿ ಮಾಡುವವರು ತಮ್ಮ ವೃತ್ತಿ ನೋಂದಾಯಿಸಿಕೊಳ್ಳುವಂತೆ ಕರ್ನಾಟಕ ರಾಜ್ಯದ ನದಾಫ್/ಪಿಂಜಾರ್ ಸಂಘದ ಸಿರುಗುಪ್ಪ ತಾಲೂಕು ಘಟಕದ ಅಧ್ಯಕ್ಷ ಎನ್.ವಲಿಪೀರ್ ತಿಳಿಸಿದ್ದಾರೆ.