Ad image

ಕ್ಷಯರೋಗದ ಔಷಧಿಗಳ ಕೊರತೆಯಾಗದಂತೆ ನಿರ್ವಹಿಸಿ: ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು

Vijayanagara Vani
ಕ್ಷಯರೋಗದ ಔಷಧಿಗಳ ಕೊರತೆಯಾಗದಂತೆ ನಿರ್ವಹಿಸಿ: ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು

ಬಳ್ಳಾರಿ,ಸೆ.25(ಕರ್ನಾಟಕ ವಾರ್ತೆ):
ನಿಕ್ಷಯ ತಂತ್ರಾಂಶ ಡಿವಿಡಿಎಮ್‌ಎಸ್ ನಲ್ಲಿ ಕ್ಷಯರೋಗಿಗಳಿಗೆ ನೀಡುವ ಔಷಧಿಗಳನ್ನು ದಾಖಲಿಸಿ ಕ್ಷಯರೋಗಿಗಳಿಗೆ ನಿಗದಿತ ಸಮಯಕ್ಕೆ ಔಷಧಿಗಳನ್ನು ತಲುಪಿಸಬೇಕು. ಡಿಎಸ್‌ಟಿಬಿ, ಡಿಆರ್‌ಟಿಬಿ ಹಾಗೂ ಟಿಪಿಟಿ ಔಷಧಿಗಳ ದಾಸ್ತಾನುಗಳನ್ನು ನಿರ್ವಹಣೆ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು.
ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲೆಯ ಫಾರ್ಮಸಿ ಅಧಿಕಾರಿಗಳಿಗೆ ಹಾಗೂ ರಾಷ್ಟ್ರಿಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಸಿಬ್ಬಂದಿ ವರ್ಗದವರೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಗತ್ಯವಿರುವ ಎಲ್ಲಾ ಔಷಧಿಗಳನ್ನು ಸಮಯಕ್ಕೆ ತಕ್ಕಂತೆ ಲಭ್ಯವಾಗುವಂತೆ ಮಾಡಬೇಕು. ಪ್ರತಿದಿನ/ವಾರದ ಕೋಷ್ಟಕ ಪರಿಶೀಲನೆ ಮಾಡಬೇಕು. ಬೇಡಿಕೆ ಮತ್ತು ಬಳಕೆ ಆಧಾರದ ಮೇಲೆ ಮುಂಚಿತವಾಗಿ ಬೇಡಿಕೆ ಕುರಿತು ಪತ್ರ ಬರೆಯಬೇಕು ಎಂದರು.
ಅವಧಿ ಮುಗಿಯುವ ಔಷಧಿಗಳನ್ನು ಗಮನಿಸಿ, ಮೊದಲು ಬಳಸುವ ವ್ಯವಸ್ಥೆ ಅನುಸರಿಸಬೇಕು. ಔಷಧಿ ಕೊರತೆ ಸಂಭವಿಸುವ ಮುಂಚೆ ಎಚ್ಚರಿಕೆ ವ್ಯವಸ್ಥೆ ಇರಬೇಕು. ಸಮೀಪದ ಆರೋಗ್ಯ ಕೇಂದ್ರಗಳೊಂದಿಗೆ ಸಮನ್ವಯ ಸಾಧಿಸಿ ತುರ್ತು ಪೂರೈಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ದಾಸ್ತಾನು ಕುರಿತು ನಿಯಮಿತ ವರದಿ ಮತ್ತು ಹಂತಗೊಳಿಸಿದ ಮೇಲ್ವಿಚಾರಣೆ ನಡೆಸುವುದು, ಕೋಷ್ಟಕದ ಸ್ಥಿತಿ ಬಗ್ಗೆ ನಿಯಮಿತ ವರದಿ ಸಲ್ಲಿಸಬೇಕು. ನಿಯಮಿತವಾಗಿ ಪರಿಶೀಲನೆ ನಡೆಸಬೇಕು. ಇ-ಔಷಧ ಪೋರ್ಟಲ್‌ನಲ್ಲಿ ಪ್ರತಿ ದಾಸ್ತಾನು ನಿರ್ವಹಣೆ ಮಾಡಲು ತಿಳಿಸಿದರು.
ಅಂತರಾಷ್ಟ್ರಿಯ ಫಾರ್ಮಸಿ ಅಧಿಕಾರಿಗಳ ದಿನಾಚರಣೆ ಅಂಗವಾಗಿ ಎಲ್ಲಾ ಫಾರ್ಮಸಿ ಅಧಿಕಾರಿಗಳಿಗೆ ತಮ್ಮ ಕರ್ತವ್ಯ ಶ್ಲಾಘಿಸಿ ಶುಭ ಕೋರಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಡಾ.ಹರೀಶ್, ಜಿಲ್ಲೆಯ ಎಲ್ಲಾ ಫಾರ್ಮಸಿ ಅಧಿಕಾರಿಗಳು, ರಾಷ್ಟಿçÃಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು.

Share This Article
error: Content is protected !!
";