Ad image

ಬೇಡವಾದ ನವಜಾತ ಶಿಶು ಕಂಡುಬಂದಲ್ಲಿ ಸರ್ಕಾರಿ ವಿಶೇಷ ದತ್ತು ಸಂಸ್ಥೆಗೆ ಒಪ್ಪಿಸಿ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ

Vijayanagara Vani
ಬೇಡವಾದ ನವಜಾತ ಶಿಶು ಕಂಡುಬಂದಲ್ಲಿ ಸರ್ಕಾರಿ ವಿಶೇಷ ದತ್ತು ಸಂಸ್ಥೆಗೆ ಒಪ್ಪಿಸಿ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ

 

ಬಳ್ಳಾರಿ,ಅ.06
ಬೇಡವಾದ ಮತ್ತು ಸಾರ್ವಜನಿಕ ಸ್ಥಳದಲ್ಲಿ ನವಜಾತ ಶಿಶು ಕಂಡುಬಂದಲ್ಲಿ ಅಂತಹ ಮಕ್ಕಳನ್ನು ಸರ್ಕಾರಿ ವಿಶೇಷ ದತ್ತು ಸಂಸ್ಥೆಗೆ ಒಪ್ಪಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.
ಸಾರ್ವಜನಿಕರು ಯಾವುದೇ ಕಾರಣದಿಂದ ತಮಗೆ ಜನಿಸಿದ ನವಜಾತ ಶಿಶುಗಳು, ಅನಾಥ, ಪರಿತ್ಯಕ್ತ ಮಗುವು ತಮಗೆ ಬೇಡವಾದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ ಕರೆ ಮಾಡಿ ಮಾಹಿತಿ ನೀಡಿದರೆ ಸಂಬಂಧಪಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಗುವನ್ನು ಸ್ವೀಕರಿಸಿ, ಸರ್ಕಾರಿ ವಿಶೇಷ ದತ್ತು ಸಂಸ್ಥೆಗೆ ದಾಖಲು ಮಾಡುತ್ತಾರೆ.
ಇಲ್ಲವೇ ಬಳ್ಳಾರಿ ನಗರದ ಕಂಟೋನ್ ಮೆಂಟ್ ಪ್ರದೇಶದ ಶಾಂತಿಧಾಮ ಆವರಣದ ಸರ್ಕಾರಿ ವಿಶೇಷ ದತ್ತು ಸಂಸ್ಥೆ, ಇಲ್ಲಿಗೆ ಒಪ್ಪಿಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.
ಈ ಪ್ರಕ್ರಿಯೆಯಲ್ಲಿ ನವಜಾತ ಮಗುವಿನ ತಾಯಿ/ಪೋಷಕರಿಗೆ ಯಾವುದೇ ವಿಚಾರಣೆಗೆ ಒಳಪಡಿಸಲಾಗುವುದಿಲ್ಲ. ಈ ಬಗ್ಗೆ ಸಾರ್ವಜನಿಕರು ಸಹ ಯಾವುದೇ ಭಯ ಆತಂಕವಿಲ್ಲದೇ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ ಕರೆ ಮಾಡಿ ಬೇಡವಾದ ಮಕ್ಕಳನ್ನು ಒಪ್ಪಿಸಬೇಕು.
ಸಾರ್ವಜನಿಕರು ಯಾವುದೇ ಕಾರಣಕ್ಕೂ ಮಕ್ಕಳನ್ನು ಕಸದ ಬುಟ್ಟಿಯಲ್ಲಿ, ರಸ್ತೆ ಬದಿಯಲ್ಲಿ, ತಿಪ್ಪೆ ಗುಂಡಿಯಲ್ಲಿ ಹಾಕುವುದರ ಮೂಲಕ ಮಕ್ಕಳ ಸಾವಿಗೆ ಕಾರಣರಾಗಬಾರದು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
————–

Share This Article
error: Content is protected !!
";