Ad image

ಹಗರಿ: ಕೃಷಿ ಪರಿಕರಗಳ ಮಾರಾಟಗಾರರಿಗೆ ಡಿಪ್ಲೋಮಾ ಕೋರ್ಸ್

Vijayanagara Vani
ಹಗರಿ: ಕೃಷಿ ಪರಿಕರಗಳ ಮಾರಾಟಗಾರರಿಗೆ ಡಿಪ್ಲೋಮಾ ಕೋರ್ಸ್
ಬಳ್ಳಾರಿ,ಅ.15
ಕೃಷಿ ಕ್ಷೇತ್ರದಲ್ಲಿ ಕೃಷಿ ಪರಿಕರ ಮಾರಾಟಗಾರರು ರೈತರ ಕೈಹಿಡಿದ ಸಲಹೆಗಾರರಾಗಿ ಬೆಳೆದು, ರೈತರ ಆದಾಯ ವೃದ್ಧಿಗೆ ಪ್ರಮುಖ ಪಾತ್ರವಹಿಸಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಮಂಜುನಾಥ್ ಎಂ.ವಿ ಅವರು ಹೇಳಿದರು.
ಬುಧವಾರ ಹಗರಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು, ಮ್ಯಾನೇಜ್ ಮೆಂಟ್ ಹೈದರಾಬಾದ್, ಸಮೇತಿ (ಉತ್ತರ) ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ಇಲಾಖೆ, ಬಳ್ಳಾರಿ, ಕೃಷಿ ತಂತ್ರಜ್ಞಾನ ಸಂಸ್ಥೆ ಬಳ್ಳಾರಿ ಘಟಕ ಮತ್ತು ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ, ಹಗರಿ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕೃಷಿ ಪರಿಕರಗಳ ಮಾರಾಟಗಾರರಿಗೆ ಒಂದು ವರ್ಷದ “ಕೃಷಿ ವಿಸ್ತರಣಾ ಸೇವೆಗಳ ಡಿಪ್ಲೋಮೋ” ಕೋರ್ಸ್ ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಜ ವಿಸ್ತರಣಾ ನಿರ್ದೇಶಕ ಡಾ.ಅಮರೇಗೌಡ.ಎ ಅವರು ಮಾತನಾಡಿ, ಕೃಷಿ ಪರಿಕರಗಳ ವ್ಯಾಪಾರಿಗಳು ತಾಂತ್ರಿಕ ಜ್ಞಾನ ಪಡೆದು ರೈತರಿಗೆ ವಿಶ್ವಾಸಾರ್ಹ ಸಲಹೆಗಾರರಾಗಿ ಪರಿಣತಿಗೊಳ್ಳಬೇಕು ಎಂದು ಹೇಳಿದರು.
ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಕೆ.ಎಮ್ ಅವರು ಮಾತನಾಡಿ ಕೃಷಿ ಪರಿಕರ ಮಾರಾಟಗಾರರು ರೈತರಿಗೆ ತಾಂತ್ರಿಕ ಮಾರ್ಗದರ್ಶನ ನೀಡುವ ಮೂಲಕ ಕೃಷಿ ಉತ್ಪಾದಕತೆ ಹೆಚ್ಚಿಸಲು ಸಹಕರಿಸಬೇಕು. ಕೋರ್ಸ್ನಿಂದ ಸ್ಥಳೀಯ ಮಟ್ಟದಲ್ಲಿ ನೈಪುಣ್ಯಯುತ ಸೇವೆಗಳು ಬೆಳೆಯಲಿವೆ ಎಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಒಟ್ಟು 80 ಕೃಷಿ ಪರಿಕರ ಮಾರಾಟಗಾರರು ಭಾಗವಹಿಸಿ ಕೋರ್ಸ್ನ ಉದ್ದೇಶ ಮತ್ತು ಪ್ರಯೋಜನಗಳ ಕುರಿತು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಸಮೇತಿ (ಉತ್ತರ) ಧಾರವಾಡ ಡಿಎಇಎಸ್‌ಐ ನ ರಾಜ್ಯ ನೋಡೆಲ್ ಅಧಿಕಾರಿ ಡಾ.ಜಾಧವಎಸ್.ಎನ್., ಹಗರಿಯ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಹಿರಿಯ ವಿಜ್ಞಾನಿ ಡಾ.ಪಾಲಯ್ಯ.ಪಿ., ಹಗರಿ ಕೃಷಿ ಮಹಾವಿದ್ಯಾಲಯದ ಪ್ರಭಾರಿ ಅಧಿಕಾರಿ ಡಾ.ರವಿಶಂಕರ್.ಜಿ, ಪ್ರಾಧ್ಯಾಪಕ (ಪಶು ವಿಜ್ಞಾನ) ಡಾ.ರಮೇಶ್ ಬಿ.ಕೆ., ಹಿರಿಯ ವಿಜ್ಞಾನಿ (ಮಣ್ಣು ವಿಜ್ಞಾನ) ಡಾ.ರವಿ.ಎಸ್., ವಿಜ್ಞಾನಿ (ಕೃಷಿ ವಿಸ್ತರಣೆ) ಡಾ.ನವೀನ್‌ಕುಮಾರ್.ಪಿ., ವಿಜ್ಞಾನಿ (ಗೃಹ ವಿಜ್ಞಾನ) ಡಾ.ರಾಜೇಶ್ವರಿ ಆರ್., ಕೃಷಿ ತಂತ್ರಜ್ಞಾನ ಸಂಸ್ಥೆಯ ಕಾರ್ಯದರ್ಶಿ ಗುರು ಬಸವರಾಜ್‌ಟಿ.ಎಮ್ ಸೇರಿದಂತೆ ಇತರರು ಭಾಗವಹಿಸಿದ್ದರು.

Share This Article
error: Content is protected !!
";