ಕೊಟ್ಟೂರು : ನಾಡಿನ ಆರಾಧ್ಯ ದೈವ ಶ್ರೀ ಗುರುಬಸವೇಶ್ವರ ದೇವಾಲಯದ ಕಾಣಿಕೆ ಹುಂಡಿಗಳಲ್ಲಿ 78.70.030 ಲಕ್ಷ ರೂ ಸಂಗ್ರಹಣೆ ಆಗಿರುತ್ತದೆ ಎಂದು ಧಾರ್ಮಿಕ ಮತ್ತು ದತ್ತಿ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೇವಸ್ಥಾನದ ಪ್ರಾಂಗಣದಲ್ಲಿ ಬುಧವಾರದಂದು ಆರು ಕಾಣಿಕೆಹುಂಡಿ ಗಳನ್ನು ಭದ್ರತೆಯೊಂದಿಗೆ ತೆರೆದು ಎಣಿಕೆ ಕಾರ್ಯಕ್ಕೆ ಚಾಲನೆ ನೀಡಲಾಯಿತು
ಎಣಿಕೆ ಕಾರ್ಯದಲ್ಲಿ ದೇವಸ್ಥಾನದ ಆಯಗಾರ ಬಳಗ, ಕಟ್ಟೆಮನೆ ದೈವದವರು ಶಾಲಾ ಕಾಲೇಜು ವಿದ್ಯಾರ್ಥಿಗಳು, ಸದ್ಭಕ್ತರು ದೇವಸ್ಥಾನದ ಸಕಲ ಸಿಬ್ಬಂದಿಗಳು, ಅಧಿಕಾರಿಗಳು ಹಾಗೂ ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿಗಳು ಭಾಗವಹಿಸಿದ್ದರು ನಂತರ ಕಾಣಿಕೆಯಲ್ಲಿ ಸಂಗ್ರಹವಾದ ಮೊತ್ತವನ್ನು ಬ್ಯಾಂಕಿಗೆ ಜಮಾ ಮಾಡಲಾಯಿತು.





