Ad imageAd image

ಕುರುಗೋಡಿನಲ್ಲಿ ಅದ್ದೂರಿಯಾಗಿ ಜರುಗಿದ ರಾಜ್ಯೋತ್ಸವ ಕಾರ್ಯಕ್ರಮ

Vijayanagara Vani
ಕುರುಗೋಡಿನಲ್ಲಿ ಅದ್ದೂರಿಯಾಗಿ ಜರುಗಿದ ರಾಜ್ಯೋತ್ಸವ ಕಾರ್ಯಕ್ರಮ
70 ನೇ ಕನ್ನಡ ರಾಜ್ಯೋತ್ಸವ ಹಿನ್ನಲೆ ಪಟ್ಟಣದ ತಹಶಿಲ್ದಾರರ ಕಛೇರಿಯಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು‌. ಧ್ವಜಾರೋಹಣ ನೆರವೇರಿಸಿದ ತಹಶಿಲ್ದಾರ್ ನರಸಪ್ಪ ಮಾತನಾಡಿ ಕಾವೇರಿಯಿಂದ ಮಾ ಗೋದಾವರಿವರೆಗಿರ್ಪ ಕನ್ನಡ ನಾಡದೋಳ್ ಎಂಬ ಕವಿರಾಜ ಮಾರ್ಗಕಾರನ ಮಾತಿನಂತೆ ಕನ್ನಡ ನಾಡು ಕಾವೇರಿಯಿಂದ ಗೋದಾವರಿವರೆಗೂ ಹಬ್ಬಿತ್ತು.
ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇಂತಹ ಐತಿಹಾಸಿಕ ಭಾಷೆಯನ್ನು ಉಳಿಸಿ ಬೆಳಸಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದು ಕನ್ನಡ ಭಾಷೆ ಅಭಿವೃದ್ಧಿಯಾಗಬೇಕಾದರೆ ಮೊದಲು  ನಾವು ಕನ್ನಡದ ಪ್ರೇಮ ಬೆಳೆಸಿಕೊಳ್ಳಬೇಕು.ನಮ್ಮ ದೇಶ ವಿಭಿನ್ನತೆಯಲ್ಲಿ ಏಕತೆ ಹೊಂದಿರುವ ದೇಶವಾಗಿದೆ. ನಮ್ಮ ರಾಜ್ಯದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ನೀಡೋಣ ಅದರಾಚೆಗೆ ಬೇರೆಯವರಿಗೂ ಕನ್ನಡ ಕಲಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಶಾಸಕ ಗಣೇಶ್ ಮೆರವಣಿಗೆಗೆ ಚಾಲನೆ ನೀಡಿದರು.
ಇದೇ ವೇಳೆ  ವಿವಿಧ ಶಾಲೆಗಳ ಮಕ್ಕಳೊಂದಿಗೆ  ಪಟ್ಟಣದ ಮುಖ್ಯರಸ್ತೆ,ಗೆಣಿಕೆಹಾಳ್ ರಸ್ತೆ ಮೂಲಕ. ಮೆರವಣಿಗೆ ತೆರಳಿ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು‌.
ಈ ಸಂದರ್ಭದಲ್ಲಿ ಗ್ರೇಡ್‌2 ತಹಶಿಲ್ದಾರ್ ಮಲ್ಲೇಶಪ್ಪ,ಪಿ.ಎಸ್.ಐ ಸುಪ್ರೀತ್ ವಿರುಪಾಕ್ಷಪ್ಪ,ಪುರಸಭೆ ಮುಖ್ಯಾಧಿಕಾರಿ ಹರ್ಷವರ್ಧನ,ಪುರಸಭೆ ಅಧ್ಯಕ್ಷ ಶೇಖಣ್ಣ,ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಇ.ಓ ಕೆ.ವಿ ನಿರ್ಮಲ,
ಶಿಕ್ಷಣ ಇಲಾಖೆಯ ಅಧಿಕಾರಿ ಮನೋಹರ್,
 ದೈಹಿಕ ಪರವೀಕ್ಷಕಿ ಪದ್ಮರೆಡ್ಡಿ,ಕಸಾಪ ಅಧ್ಯಕ್ಷ ಮಸೂತಿ ನಾಗರಾಜ್,ಶಿರಸ್ತೆದಾರ ವಿಜಯ್ ಕುಮಾರ್,ಕೋಳೂರ ಕುರುಗೋಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಾನಾಳ್  ಚನ್ನಬಸವರಾಜ್ , ವಿ‌.ಎ ರಮೇಶ್,ಪುರಸಭೆ ಸದಸ್ಯರು,ತಾಲ್ಲೂಕು ಆಡಳಿತ ಸಿಬ್ಬಂದಿ,
 ವಿವಿಧ ಕನ್ನಡ ಪರ ಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳು , ವಿವಿಧ ಶಾಲೆಗಳ ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.
Share This Article
error: Content is protected !!
";