Ad image

ಸುಕ್ಷೇತ್ರ ಸೋಮಲಾಪುರದಲ್ಲಿ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹಗಳುಅವಧೂತ ಚಿದಾನಂದ ತಾತನವರ ಮಹಿಮೆ ಅಪಾರ, ಅನನ್ಯ

Vijayanagara Vani

ಬಳ್ಳಾರಿ ಜೆಲ್ಲೆಯ ಕುರುಗೋಡು ತಾಲೂಕಿನ ಸೋಮಲಾಪುರ ಒಂದು ಕಾಲದಲ್ಲಿ ಕಳ್ಳತನ,ದರೋಡೆಯೇ ಜೀವನವಾಗಿಸಿಕೊಂಡು ಬದುಕುತ್ತಿದ್ದ ಕುಗ್ರಾಮ. ಇಲ್ಲಿನ  ಜನರಲ್ಲಿ ಪ್ರೀತಿ,ಕರುಣೆ,ಪರಸ್ಪರ ಸಹಕಾರ ಮನೋಭಾವ ಮೂಡಿಸಿ ಸುಜ್ಞಾನವೆಂಬ ಅಮೃತವನ್ನುಣಬಡಿಸಿದ ಸಿದ್ದಿ ಸಾಧಕ ಅವಧೂತ ಚಿದಾನಂದ ತಾತನವರ ಆಗಮನವಾಯಿತು.

ಅವರ ಆಗಮನದಿಂದ ಜನರ ಬದುಕುವ ದಿಕ್ಕೇ ಬದಲಾಯಿತು.ಅವಧೂತ ಚಿದಾನಂದ ತಾತನವರು ಅನೇಕ ಪವಾಡಗಳನ್ನು ಮಾಡಿ ಜನರನ್ನು ಸನ್ಮಾರ್ಗದತ್ತ ಕೊಂಡೊಯ್ದರು.

 ಅಲ್ಲಿಂದ ಗ್ರಾಮದಲ್ಲಿ ಸುಖ ಶಾಂತಿ ನೆಲೆಸಿತು. ತಾತನವರು ಬಡವರ ಕಷ್ಟ ಅರಿತು ಉಚಿತ ಸಾಮೂಹಿಕ ವಿವಾಹಗಳಿಗೆ ಚಾಲನೆ ನೀಡಿದರು.ಇದರ ಜೊತೆಗೆ ಜಾತ್ರಾ ಮಹೋತ್ಸವ, ಜನರ ಅಜ್ಞಾನ ತೊಡೆದು ಹಾಕಲು ಸಾಧು ಸತ್ಪರುಷರಿಂದ ಪ್ರವಚನ ಕಾರ್ಯಗಳನ್ನು ಏರ್ಪಡಿಸಿದರು.ಅಲ್ಲಿಂದ ಸೋಮಲಾಪುರ ಎಂಬ ಗ್ರಾಮದ ಹೆಸರು ಜಗದ್ವಿಖ್ಯಾತವಾಗಿ ಸುಕ್ಷೇತ್ರ ಸೋಮಲಾಪುರ ಎಂಬ ಹಣೆಪಟ್ಟಿ ಪಡೆದುಕೊಂಡಿತು.

*ಅವಧೂತ ಚಿದಾನಂದ ತಾತನವರ ಪರಿಚಯ*ಆಂದ್ರಪ್ರದೇಶ ವೆಂಗಿಮೆಳ್ಳಿ ಎನ್ನುವ ಪುಟ್ಟ ಗ್ರಾಮದಲ್ಲಿನ ಒಕ್ಕಲಿಗ ದಂಪತಿಗಳ ಮುದ್ದು ಮಗನಾಗಿ ಚಿದಾನಂದ ತಾತ ಜನಿಸಿದರು.ಬಾಲ್ಯದಲ್ಲಿಯೇ ಆಧ್ಯಾತ್ಮದ ಕಡೆ ಹೆಚ್ಚು ಒಲವು ಹೊಂದಿದ್ದರು.ಮನೆಯ ಗೋಡೆಗೆ ಹಚ್ಚಿದ್ದ ಸುಣ್ಣವನ್ನೇ ವಿಭೂತಿ ಮಾಡಿಕೊಂಡು ಮೈಗೆಲ್ಲಾ ಬಳಿದುಕೊಂಡು ದೇವರ ಧ್ಯಾನ ಮಾಡುತ್ತ ಕುಳಿತು ಬಿಡುತ್ತಿದ್ದರು.ಇದನ್ನು ಕಂಡು ಹಲವರು ಹಲವರು ಆಶ್ಚರ್ಯ ಪಟ್ಟಿದ್ದು ಉಂಟು.

 ನಂತರ ಅಂಬಾ ಭವಾನಿ ದೇವಿಯ ಉಪಾಸರಾಗಿ ಸಿದ್ದ ಪರ್ವತದಲ್ಲಿ ಹಲವು ವರ್ಷಗಳ ಕಾಲ ತಪಸ್ಸು ಆಚರಿಸಿದ್ದರು.ಕಾಮ,ಕ್ರೋಧ,ಮೋಹ,ಲೋಭ ,ಮದ ಮತ್ಸರ ಎಂಬ ಅರಿಷಡ್ವರ್ಗ ಗಳನ್ನು ಗೆದ್ದು ಅವಧೂತರೆಂದು ಹೆಸರು ಪಡೆದುಕೊಂಡರು.ಅಲ್ಲಿಂದ ಇಳಕಲ್ಲು,ಬಳ್ಳಾರಿ ತಾಲೂಕಿನ ಬೇವೂರು,ಸೋಮಲಾಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಮಠಗಳನ್ನು ಕಟ್ಟಿ ಜನರ ಅಜ್ಞಾನ,ಅಂಧಕಾರ,ಮೂಢನಂಬಿಕೆಗಳನ್ನು  ತೊಡೆದು ಹಾಕಿದರು.

ಜನರನ್ನು  ಮುಕ್ತಿ ಕಡೆಗೆ ತೆಗೆದುಕೊಂಡು ಹೋಗುವ ದೇವಾಲಯಗಳಾಗಿ ಮಾರ್ಪಡಿಸಿದರು.ಮಠಗಳಿಗೆ ಭಕ್ತರು ನೀಡಿದ ಕಾಣಿಕೆಗಳಿಂದ ಒಂದಷ್ಟು ಆದಾಯ ಹರಿದು ಬಂತು.*ಪವಾಡ ಪುರುಷ*

ಮಠ ಕಟ್ಟಿದ ಅವಧೂತ ಚಿದಾನಂದ ತಾತನವರು  ತಾವೇ ಸ್ವತಃ ಹೊಲದಲ್ಲಿ ಉಳುಮೆ ಮಾಡಿದರು. ಮೂಲಕ ಸೋಮಾರಿಗಳಿಗೆ ಪಾಠವಾದರು.ಜನಸಾಮಾನ್ಯರಿಗೆ ನೀತಿ ಬೋಧನೆ,ಪ್ರವಚನ, ಸೋತು ಬಂದವರಿಗೆ ಗೆಲುವಿನ ಗುಟ್ಟು ತಿಳಿಸಿ ಪ್ರೇರೇಪಿಸಿದರು. ಮೂಲಕ ಜನರನ್ನು ಉದ್ದರಿಸಿದರು.

 *ಇಳಕಲ್ಲು ಮಠದಲ್ಲಿ ಶಿವೈಕ್ಯ*

 ಕೊನೆಯಲ್ಲಿ ಶ್ರೀ ಗಳ ಆಸೆಯಂತೆ ಬಾದಾಮಿ ತಾಲೂಕಿನ ಹಲಕುರ್ಕಿ ಶ್ರೀ ಸದ್ಗುರು ಷಡಕ್ಷರ ಅವಧೂತರ ಮಠದ ಪೀಠಾಧ್ಯಕ್ಷರಾದರು. ಇದರಿಂದ ಸೋಮಲಾಪುರ ಕೀರ್ತಿ ಪತಾಕೆ ಮುಗಿಲೆತ್ತರಕ್ಕೆ ಹಾರಿತು.

ಕೊನೆಗೆ ಇಳಕಲ್ಲಿನ ಮಠದಲ್ಲಿ ಶಿವೈಕ್ಯರಾದರು.

 ಇವರ ಸರಳ,ಮಾದರಿ ಜೀವನ ಇತರರಿಗೆ ಆದರ್ಶವಾದದ್ದು. ಇವರ  ಜೀವನ ಕ್ರಮದಿಂದ ಪ್ರಭಾವಿತರಾದ ಇವರ ಭಕ್ತ ಗಣ  ರಥವನ್ನು ನಿರ್ಮಿಸಿ ಪ್ರತಿವರ್ಷ ರಥೋತ್ಸವ ನಡೆಸುತ್ತಿದ್ದಾರೆ.ಇದರ ಜೊತೆಗೆ ಬಡವರ ,ಅಶಕ್ತರಿಗೆ ಉಚಿತ ವಿವಾಹ ಕಾರ್ಯಗಳನ್ನು ಮಾಡುತ್ತಿದ್ದಾ

*ಸರ್ವ ಧರ್ಮ ಉಚಿತ ಸಾಮೂಹಿಕ ವಿವಾಹಗಳು*

 ಕಳೆದ ಹಲವಾರು ವರ್ಷಗಳಿಂದಲೂ ಮಠದಲ್ಲಿ ಪ್ರತಿ ವರ್ಷ ಉಚಿತ ಸರ್ವ ಧರ್ಮ ಸಾಮೂಹಿಕ ವಿವಾಹಗಳನ್ನು ಏರ್ಪಡಿಲಾಗುತ್ತಿದೆ.

ಸದ್ಯ ಮಠದ ಪೀಠಾಧಿಪತಿಗಳಾದ ಸದ್ಗುರು ಶ್ರೀ ಶ್ರೀ ಶ್ರೀ ಷಡಕ್ಷರಿ ಮಹಾಸ್ವಾಮಿಗಳು ಅವಧೂತರು ಭಕ್ತರ ವಿಶ್ವಾಸಗಳಿಸಿಕೊಂಡು ಪ್ರತಿ ವರ್ಷ ಉಚಿತ ಸಾಮೂಹಿಕ ವಿವಾಹ ಹಾಗೂ ಜಾತ್ರಾ ಮಹೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಚಿದಾನಂದ ಅವಧೂತರ 32ನೇ ಪುಣ್ಯಾರಾಧನೆ ಪ್ರಯುಕ್ತ  ಇದೇ ಏಪ್ರಿಲ್ 28 ರಂದು ಭಾನುವಾರದಂದು ಸದ್ಗುರು ಶ್ರೀ ಶ್ರೀ ಶ್ರೀ ಷಡಕ್ಷರ ಮಹಾಸ್ವಾಮಿ ಅವಧೂತರ ನೇತೃತ್ವದಲ್ಲಿ ಸುಮಾರು 92 ಜೋಡಿಗಳಿಗೆ ಸರ್ವ ಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತು ಜಾತ್ರಾ ಮಹೋತ್ಸವ  ಜರುಗಿಸಲಾಗುತ್ತಿದೆ

 

ಶನಿವಾರ ಮಾರೆಮ್ಮ ದೇವಿಯ ದೇವಾಲಯದಿಂದ ಅವಧೂತರ ಮಠದ ವರೆಗೆ ಕುಂಭಮೇಳ,ಭಾವಚಿತ್ರ ಮೆರವಣಿಗೆ,ಶಿವಭಜನೆ,ಜರುಗಿದ್ದು ಭಾನುವಾರ ಬೆಳಗ್ಗೆ 92 ಜೋಡಿ ವಿವಾಹ ಮತ್ತು ಸಂಜೆ ರಥೋತ್ಸವ ಜರುಗಲಿದೆ.

 

ಕಾರ್ಯಕ್ರಮಕ್ಕೆ ಸದ್ಗುರು ದಿಗಂಬರ ಅವದೂತರ ಮೂಲ ಮಠ ಹಲಕುರ್ಕಿ ಸೋಮಲಾಪುರದ  ಶ್ರೀ ಶ್ರೀ ಷಡಕ್ಷರಿ ಮಹಾಸ್ವಾಮಿಗಳು, ಹಂಪಿ ಸಾವಿರ ದೇವರ ಮಠ ಎಮ್ಮಿಗನೂರಿನ ಶ್ರೀ .ಬ್ರ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು, ಕುರುಗೋಡು ಕೊಟ್ಟೂರು ಮಠದ .ನಿ.ಪ್ರ. ನಿರಂಜನ ಪ್ರಭುದೇವರು,ಮನ್ನಿಕೇರಿ ದಿಗಂಬರೇಶ್ವರ  ಪೂಜ್ಯ ಶ್ರೀ ನಿರ್ವಾಣ ಮಹಾಸ್ವಾಮಿಗಳು, ಹೆಚ್ ವೀರಾಪುರದ ಜ್ಞಾನ ಜ್ಯೋತಿ ಜಡೇಶ ಶಿವಯೋಗಿ ಮಂದಿರದ ಪರಮ ಪೂಜ್ಯ ಜಡೇಶ್ ತಾತನವರು ಉಪಸ್ಥಿತರಿರುತ್ತಾರೆ.ರಾತ್ರಿ 10:30 ಕ್ಕೆ ಬಯಲಾಟ ನಾಟಕ ಮಂಡಳಿ ವತಿಯಿಂದ ವೀರ ಅಭಿಮನ್ಯು ಕಾಳಗ ಬಯಲಾಟ ಪ್ರದರ್ಶನವಿದೆ.

ಕಾರ್ಯಕ್ರಮಕ್ಕೆ ಬಂದ ಭಕ್ತಾಧಿಗಳಿಗೆ ಉಚಿತ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ.

 

Share This Article
error: Content is protected !!
";