Ad image

ನಗರದಲ್ಲಿ ಹುತಾತ್ಮ ಯೋಧ ಕೆ ರಾಮಕೃಷ್ಣ ಪಾರ್ಥಿವ ಶರೀರ ಮೆರವಣಿಗೆ

Vijayanagara Vani
ನಗರದಲ್ಲಿ ಹುತಾತ್ಮ ಯೋಧ ಕೆ ರಾಮಕೃಷ್ಣ ಪಾರ್ಥಿವ ಶರೀರ ಮೆರವಣಿಗೆ

ಬಳ್ಳಾರಿ, ಮೇ.14: ಭಾರತೀಯ ಸೈನ್ಯದಲ್ಲಿ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ನ ಯೋಧನಾಗಿ ಬಾಂಗ್ಲಾದೇಶದ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಮಕೃಷ್ಣ ಕರ್ತವ್ಯದಲ್ಲಿದ್ದಾಗಲೇ ಮೇ 12 ತಾರಿಖಿನಂದು ಹುತಾತ್ಮರಾಗಿರುತ್ತಾರೆ. ಇವರ ಪಾರ್ಥಿವ ಶರೀರವನ್ನು ಇಂದು ನಗರಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಮಾಜಿ ಯೋಧರು ಮತ್ತು ಅವರ ಸಂಬAಧಿಕರು, ವಿದ್ಯಾರ್ಥಿಗಳು ನಗರದ ಸಾರ್ವಜನಿಕರು ಪಾರ್ಥಿವ ಶರೀರವನ್ನು ಎಂ.ಜಿ. ಸರ್ಕಲ್ ನಿಂದ ಮೆರವಣಿಗೆ ಮೂಲಕ ಎಪಿಎಂಸಿ ಮಾರ್ಕೆಟನ ಹತ್ತಿರ ಇರುವ ಬೆಂಕಿ ಮಾರಮ್ಮ ದೇವಸ್ಥಾನದ ಬಳಿಯಿಂದ ಕೊಳಚಿಗೇರಿಗೆ ಮೇರವಣಿಗೆ ಮೂಲಕ ತರಲಾಯಿತು. 

ಪಶ್ಚಿಮ ಬಂಗಾಳದ ಕಲ್ಕತ್ತಾ ನಗರದಲ್ಲಿ 145 ನೇ ಬಿಎಸ್‌ಎಫ್ ಬೆಟಾಲಿಯನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಕೆ. ರಾಮಕೃಷ್ಣ ನಗರದ ಬಂಡಿಮೋಟ್‌ನ ಉಜ್ಜಯನಿ ಶಾಲೆಯಲ್ಲಿ ಅಭ್ಯಾಸ ಮಾಡಿ, 2002 ರಲ್ಲಿ ಬಿಎಸ್ ಎಫ್ ಸೇನೆಯಲ್ಲಿ ಸೇವೆಗೆ ಸೇರಿದ್ದರು, ಅವರು ತಾಯಿ. ಪತ್ನಿ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಸಕಲ ಸರ್ಕಾರಿ ಗೌವರಗಳೊಂದಿಗೆ ಇಂದು ನಗರದ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು. ಈ ಸದರ್ಭದಲ್ಲಿ ಯುವಕರು ಜೈ ಜವಾನ್, ಜೈ ಜವಾನ್, ಭಾರತ್ ಮಾತಾಕಿ ಜೈ ಘೋಷಣಗಳನ್ನು ಕೂಗಿದರು.

Share This Article
error: Content is protected !!
";