Ad image

ನಿಷ್ಠೆ, ಶ್ರದ್ಧೆಯಿಂದ ಕೌಶಲ್ಯಪೂರ್ಣವಾಗಿ ಕೆಲಸ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ : ಡಿಸಿ ಪಿ.ಕೆ. ಮಿಶ್ರಾ

Vijayanagara Vani
ನಿಷ್ಠೆ, ಶ್ರದ್ಧೆಯಿಂದ ಕೌಶಲ್ಯಪೂರ್ಣವಾಗಿ ಕೆಲಸ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ : ಡಿಸಿ ಪಿ.ಕೆ. ಮಿಶ್ರಾ

ಬಳ್ಳಾರಿ, ಮೇ. 24: ನಿಷ್ಠೆ, ಶ್ರದ್ಧೆ ಮತ್ತು ಪಾಲ್ಗೊಳ್ಳುವಿಕೆಯಿಂದ ತಾವು ಕೆಲಸ‌ ಮಾಡಿದಲ್ಲಿ ಉತ್ತಮ ಭವಿಷ್ಯ ರೂಪುಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಬಳ್ಳಾರಿ ಚೇಂಬರ್ ಕೌಶಲ್ಯಾಭಿವೃದ್ಧಿ ಕೇಂದ್ರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಖನಿಜ ನಿಧಿಯ ಜಂಟಿ ಆಶ್ರಯದಲ್ಲಿ ಹೋಟಲ್ ಮೇನೇಜ್‍ಮೆಂಟ್ ಕೋರ್ಸ್‍ನ ಕೌಶಲ್ಯಪೂರ್ಣ ತರಬೇತಿ ಪಡೆದಿರುವ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಹೋಟೆಲ್ ಮೇನೇಜ್ಮೆಂಟ್ ತರಬೇತಿ ಪಡೆದಿರುವ ಎಲ್ಲರೂ ಉದ್ಯೋಗ ಸೃಷ್ಟಿ ಮಾಡಿ  ಅನೇಕರಿಗೆ ಉದ್ಯೋಗಗಳನ್ನು ನೀಡಬೇಕು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಅತ್ಯಲ್ಪ ಅವಧಿಯಲ್ಲಿ ಉತ್ತಮ ತರಬೇತಿ ನೀಡಿರುವುದು ಶ್ಲಾಘನೀಯ – ಅಭಿನಂದನೀಯ ಎಂದರು.

ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ‌ ಸಂಕನೂರ್ ಅವರು ಮುಖ್ಯ ಅತಿಥಿಗಳಾಗಿ, ಖಾನಾ ಖಜಾನಾ ಮತ್ತು ಮಾಸ್ಟರ್ ಚೆಫ್ ಟಿವಿಯಲ್ಲಿ ಬರುತ್ತಿದ್ದ ಜನಪ್ರಿಯ ಹೋಟೆಲ್ ‌ಉದ್ಯಮದ ಕಾರ್ಯಗಳಾಗಿದ್ದವು. ಹೋಟೆಲ್‌ ಮ್ಯಾನ್ಮೇಜೆಂಟ್ ಕೋಸ್೯ ಅಂದರೆ‌ ರುಚಿಕರ  ಹಾಗೂ ಸುವಾಸನೆ ಭರಿತ ಆಹಾರ ಮಾತ್ರವಲ್ಲ, ಆಹಾರವನ್ನು ಪೂರೈಸುವ ಶೈಲಿ, ವಿಶೇಷತೆಗಳೂ‌ ಮುಖ್ಯವಾಗಿವೆ.

ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಕೌಶಲ್ಯ ಪೂರ್ಣವಾಗಿ ಸೇವೆ ಸಲ್ಲಿಸಲು ಸೇವಾ ವಲಯಕ್ಕೆ ಹೆಚ್ಚಿನ ಅವಕಾಶಗಳಿವೆ. ಆದರೆ, ನಮ್ಮಲ್ಲಿ ಕೌಶಲ್ಯಯುಕ್ತ ಪ್ರತಿಭೆಗಳು ಸಿಗುತ್ತಿಲ್ಲ. ಕಾರಣ ಬಳ್ಳಾರಿ ‌ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹೋಟೆಲ್ ಮೇನೇಜ್ಮಂಟ್ ಕೋಸ್೯ ಕೌಶಲ್ಯ ಪೂರ್ಣ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯರು, ಚೇಂಬರ್ ಸ್ಕಿಲ್ ‌ಡೆವಲಪ್ಮೆಂಟ್ ಸೆಂಟರ್‌ನ ಚೇರ್ಮೆನ್ ಆಗಿರುವ ಯಶವಂತರಾಜ್ ನಾಗಿರೆಡ್ಡಿ ಅವರು, ೨೦೧೯ರಲ್ಲಿ‌ ಪ್ರಾರಂಭವಾಗಿರುವ‌ ಬಳ್ಳಾರಿ ಚೇಂಬರ್ ಸ್ಕಿಲ್ ಡೆವಲಪ್‌ಮೆಂಟ್ ‌ಸೆಂಟರ್ ಈವರೆಗೆ ೬೫೦೦ ಕ್ಕೂ ಹೆಚ್ಚಿನ ಅಭ್ಯರ್ಥಿಗಳಿಗೆ ಟ್ಯಾಲಿ, ಜಿಎಸ್ಟಿ, ಬೇಸಿಕ್ ಇಂಗ್ಲೀಷ್, ಕಮ್ಯುನಿಕೇಷನ್ ಇಂಗ್ಲೀಷ್, ಹೋಟೆಲ್ ಮ್ಯಾನೇಜ್ಮೆಂಟ್ ಕೋಸ್೯ ಇನ್ನಿತರೆ ವಿಷಯಗಳ ತರಬೇತಿ ನೀಡಲಾಗಿದೆ.

ಪ್ರಸ್ತುತ ಹೋಟೆಲ್ ಮ್ಯಾನ್ಮೇಜ್ಮಂಟ್ ಕೋಸ್೯ನ ಕೌಶಲ್ಯ ಪೂರ್ಣ ತರಬೇತಿಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಬಳ್ಳಾರಿ ಮತ್ತು ‌ವಿಜಯನಗರ ಜಿಲ್ಲೆಯ ಅಂತಾರಾಷ್ಟ್ರೀಯ ದರ್ಜೆಯ ಹೋಟೆಲ್ ಗಳಾದ ಎವಾಲ್ವ್ ಬ್ಲಾಕ್‌,  ವಿಜಯಶ್ರೀ ಹೆರಿಟೇಜ್, ಹೋಟೆಲ್ ಪ್ಯಾಲಾ ಪ್ಯಾರಡೈಸ್, ರಾಯಲ್ ಆರ್ಚಿಡ್, ಶಿವಲೀಲಾ ಪ್ಯಾಲೇಸ್ ‌ಸೇರಿ ಸ್ವಯಂ ಉದ್ಯೋಗಕ್ಕೆ ಆದ್ಯತೆ ನೀಡಿ ಆಸಕ್ತರಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗಿದೆ‌ ಎಂದು ಪ್ರಾಸ್ತಾವಿಕ ಭಾಷಣದಲ್ಲಿ‌‌ ಸಂಸ್ಥೆ ಬೆಳೆದುಬಂದ ದಾರಿಯನ್ನು ವಿವರಿಸಿದರು.

ಬಳ್ಳಾರಿ ‌ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ‌ ಜಂಟಿ ಕಾರ್ಯದರ್ಶಿ ಡಾ. ಮರ್ಚೇಡ್ ಮಲ್ಲಿಕಾರ್ಜುನ ಗೌಡ ಅವರು, ಕೇವಲ ೪೫ ದಿನಗಳಲ್ಲಿ ಕೋಸ್೯ಗೆ ಬೇಕಾದ ಎಲ್ಲಾ ಪ್ರಾಯೋಗಿಕ ತರಬೇತಿಗೆ ಅಗತ್ಯವಿರುವ ಕಿಚನ್, ಬಾರ್, ರೆಸ್ಟೋರೆಂಟ್, ಇನ್ನಿತರೆ ಗಳ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ. ಅಂತಾರಾಷ್ಟ್ರೀಯ ದರ್ಜೆಯ ಹೋಟೆಲ್ ಗಳಲ್ಲಿ ಉತ್ತಮ – ಉನ್ನತ ದರ್ಜೆಯ ತರಬೇತಿಯನ್ನು ನೀಡಲಾಗಿದೆ. ಹೋಟೆಲ್ ಉದ್ಯಮದಲ್ಲಿ‌ ಉದ್ಯೋಗ ಅವಕಾಶಗಳು ಸಾಕಷ್ಟಿವೆ. ಕೌಶಲ್ಯಪೂರ್ಣ ಉದ್ಯೋಗಿಗಳ ಕೊರತೆ ಸಾಕಷ್ಟಿದೆ. ಈ‌ ನಿಟ್ಟಿನಲ್ಲಿ ನಮ್ಮ‌ ಸಂಸ್ಥೆ ಇನ್ನೂ ಹೆಚ್ಚಿನ ಯುವಶಕ್ತಿಗೆ ತರಬೇತಿ ನೀಡಲು ಉತ್ಸುಕರಾಗಿದ್ದೇವೆ ಎಂದರು.

ಬಳ್ಳಾರಿ ‌ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ‌ ಗೌರವ ‌ಅಧ್ಯಕ್ಷರಾಗಿರುವ ಸಿ.‌ ಶ್ರೀನಿವಾಸರಾವ್ ಅವರು, ಪ್ರವಾಸೋದ್ಯಮ ಮತ್ತು ಹೋಟೆಲ್ ಉದ್ಯಮದಲ್ಲಿ‌ ಹೆಚ್ಚಿನ ಉದ್ಯೋಗ ಅವಕಾಶಗಳಿದ್ದು ಪ್ರತಿಯೊಬ್ನರೂ ಗಮನ‌ ನೀಡಬೇಕು ಎಂದರು.
ತರಬೇತಿ ಪಡೆದಿರುವ ಮಣಿಕಂಠ ಮತ್ತು ಪಿ.ಬಿ.ಎನ್. ಶ್ರಾವಣಿ ಅವರು, ಬಳ್ಳಾರಿ ‌ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹೋಟೆಲ್ ಮೇನೇಜ್ಮಂಟ್ ಕೋಸ್೯ ಅಂತಾರಾಷ್ಟ್ರೀಯ ಗುಣಮಟ್ಟದ – ದರ್ಜೆಯ ತರಬೇತಿಯನ್ನು ನೀಡಿದೆ. ನಾವು ಎಲ್ಲರೂ ಕೌಶಲ್ಯಪೂರ್ಣ ತರಬೇತಿ ಪಡೆದಿದ್ದೇವೆ. ಕೌಶಲ್ಯದ ತರಬೇತಿಯು ನಮಗೆ‌ ಸ್ವಾಭಿಮಾನದ ‌ಸ್ವಾವಲಂಭನೆಯ ಭವಿಷ್ಯವನ್ನು ರೂಪಿಸಿದೆ ಎಂದರು.
ವೇದಿಕೆಯ ಮೇಲೆ‌  ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ. ಸೋಮಶೇಖರ ಮತ್ತು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪಿ.ಎಸ್. ಹಟ್ಯಪ್ಪ ಅವರು ಮುಖ್ಯ ಅತಿಥಿಗಳಾಗಿದ್ದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಬಿ.‌ ಮಹಾರುದ್ರಗೌಡ ಅವರು ಸ್ವಾಗತಿಸಿದರು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಅವರು ವಂದನಾರ್ಪಣೆ ಸಲ್ಲಿಸಿದರು.
ಅಭಿನಂದನೆ
ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್ ಮಿಶ್ರಾ ಮತ್ತು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಶರಣಪ್ಪ ಸಂಕನೂರು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ – ಅಭಿನಂದಿಸಿ ಗೌರವಿಸಲಾಯಿತು.

Share This Article
error: Content is protected !!
";