Ad image

“ಪುಟ್ಟಗೂಡಿನ ಪಟ್ಟದರಸಿ” ಸ್ಕೌಟ್ಸ್ಗೈಡ್ಸ್ಕುರಿತು ಮೊದಲ ಕನ್ನಡ ಮಕ್ಕಳ ಸಿನೆಮಾ :ರಾಜ್ಯ ಪ್ರಧಾನಆಯುಕ್ತ ಪಿ.ಜಿ.ಆರ್.ಸಿಂಧ್ಯಾ

Vijayanagara Vani
“ಪುಟ್ಟಗೂಡಿನ ಪಟ್ಟದರಸಿ” ಸ್ಕೌಟ್ಸ್ಗೈಡ್ಸ್ಕುರಿತು ಮೊದಲ ಕನ್ನಡ ಮಕ್ಕಳ ಸಿನೆಮಾ :ರಾಜ್ಯ ಪ್ರಧಾನಆಯುಕ್ತ ಪಿ.ಜಿ.ಆರ್.ಸಿಂಧ್ಯಾ

 

ಸ್ಕೌಟ್ ಮಾಸ್ಟರ್, ಪ್ರಾಥಮಿಕ ಶಾಲಾ ಶಿಕ್ಷಕ, ಸಾಹಿತಿಕೊಟ್ರೇಶ್‌ಎಸ್.ಉಪ್ಪಾರ್‌ಅವರ “ಪುಟ್ಟಗೂಡಿನ ಪಟ್ಟದರಸಿ” ಕಾದಂಬರಿಆಧಾರಿತ ನಿರ್ಮಾಣವಾಗುತ್ತಿರುವ ಚಲನಚಿತ್ರವು ಸ್ಕೌಟ್ಸ್ಗೈಡ್ಸ್ಕುರಿತು ಮೊದಲ ಕನ್ನಡ ಮಕ್ಕಳ ಸಿನೆಮಾವಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತುಗೈಡ್ಸ್ಕರ್ನಾಟಕರಾಜ್ಯ ಸಂಸ್ಥೆಯ ಪ್ರಧಾನಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾರವರು ಅಭಿಪ್ರಾಯಪಟ್ಟರು.

ಅವರು ನಿರ್ಮಾಪಕ ಲಕ್ಷಿ ಕಲಾಸಿಪಾಳ್ಯದ ಮಹಾಲಕ್ಷೀಥಿಯೇಟರ್ ಬ್ಯಾನರಡಿಯಲ್ಲಿ ನಿರ್ಮಾಣವಾಗುತ್ತಿರುವಕೊಟ್ರೇಶ್‌ಎಸ್.ಉಪ್ಪಾರ್‌ಅವರ “ಪುಟ್ಟಗೂಡಿನ ಪಟ್ಟದರಸಿ” ಕಾದಂಬರಿಆಧಾರಿತ ಮಕ್ಕಳ ಚಲನಚಿತ್ರದಚಿತ್ರೀಕರಣದಲ್ಲಿ ಭಾಗವಹಿಸಿ ಮಾತನಾಡಿ ಈ ಚಿತ್ರದ ಮುಖೇನ ಸ್ಕೌಟ್ಸ್ ಮತ್ತುಗೈಡ್ಸ್ಧ್ಯೇಯ, ಉದ್ದೇಶಗಳು ಅನಾವರಣಗೊಂಡಿವೆ. ಸಾಮಾಜಿಕ ವಿಕಸನದಲ್ಲಿ ಸ್ಕೌಟ್‌ಅಥವಾಗೈಡ್‌ನ ಪಾತ್ರವೇನುಎಂಬುದನ್ನುಇದು ಬಿಂಬಿಸಿದೆ. ಈ ಮೊದಲು ಪೋಲಿಕಿಟ್ಟಿ ಎಂಬ ನಾಟಕ ಸ್ಕೌಟ್ಸ್ ಮತ್ತುಗೈಡ್ಸ್ಕುರಿತುರಚನೆಯಾಗಿ ಯಶಸ್ವೀ ಕಂಡಿತ್ತು.ಪ್ರಸ್ತುತ ಪುಟ್ಟಗೂಡಿನ ಪಟ್ಟದರಸಿಯ ರೂಪದಲ್ಲಿಕಮಲಿಯ ಮೂಲಕ ಉತ್ತಮ ಮೌಲ್ಯಗಳನ್ನು ಬಿತ್ತುತ್ತಿದೆಎಂದರು.

ಆಲೂರು ಸಕಲೇಶಪುರ ಸ್ಥಳೀಯ ಶಾಸಕ ಸಿಮೆಂಟ್ ಮಂಜುನಾಥ್‌ರವರುಚಿತ್ರೀಕರಣದಲ್ಲಿ ಭಾಗೀಯಾಗಿ ಮಾತನಾಡಿ ನಮ್ಮಕ್ಷೇತ್ರದ ಶಿಕ್ಷಕ, ಸಾಹಿತಿಕೊಟ್ರೇಶ್‌ಎಸ್.ಉಪ್ಪಾರ್‌ಅವರು ಬರೆದ “ಪುಟ್ಟಗೂಡಿನ ಪಟ್ಟದರಸಿ” ಕಾದಂಬರಿ ಚಲನಚಿತ್ರವಾಗಿ ಮೂಡಿಬರುತ್ತಿರುವುದುತುಂಬಾ ಸಂತಸತAದಿದೆ.ಸಕಲೇಶಪುರದಯುವಕಅರುಣ್‌ಗೌಡಕರಡಿಗಾಲ ನಿರ್ದೇಶನ ಮಾಡುತ್ತಿರುವುದು ಹಾಗೂ ನಮ್ಮಕ್ಷೇತ್ರದಲ್ಲಿಯೇ ಚಿತ್ರೀಕರಣಗೊಳ್ಳುತ್ತಿರುವುದು, ಸ್ಥಳೀಯ ಕಲಾವಿದರುಗಳನ್ನು ಬಳಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.ಚಲನಚಿತ್ರದಲ್ಲಿ ನಡೆಯುವ ಮಕ್ಕಳ ಪ್ರಬಂಧ ಸ್ಪರ್ಧೆಗೆ ಸ್ಥಳೀಯ ಸಮಸ್ಯೆಯನ್ನೇ ಅಳವಡಿಸಿರುವುದು ಔಚಿತ್ಯಪೂರ್ಣವಾಗಿದೆ.ಪರಿಸರ ನಾಶಕ್ಕೆ ಮಾನವನದುರಾಸೆಯೇಕಾರಣ.ನಮ್ಮ ಸ್ವಾರ್ಥಕ್ಕಾಗಿ ಪ್ರಕೃತಿ ನಾಶಗೈದುಅರಣ್ಯನಾಶ, ಮರಳು ಮಾಫಿಯಾ, ಗಣಿಗಾರಿಕೆಗಳಿಂದ ಪ್ರಕೃತಿಮೇಲೆ ನಿರಂತರವಾಗಿ ದಾಳಿಮಾಡುತ್ತಿದ್ದೇವೆ. ಆದ್ದರಿಂದ ಉಷ್ಣಾಂಶ ದಿನದಿಂದ ದಿನಕ್ಕೆ ಹೆಚ್ಚುವುದರೊಂದಿಗೆ ಕಾಡುಪ್ರಾಣಿಗಳು ನಾಡಿಗೆ ನುಗ್ಗುತ್ತಿವೆ. ಆದ್ದರಿಂದ ನಾವುಗಳೆಲ್ಲ ಎಚ್ಚೆತ್ತುಕೊಳ್ಳಬೇಕಿದೆ ಜಾಗೃತರಾಗಬೇಕಿದೆಎಂದರು.

ಈ ಸಂದರ್ಭದಲ್ಲಿರಾಜ್ಯ ಪ್ರಧಾನಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ಸ್ಥಳೀಯ ಶಾಸಕ ಸಿಮೆಂಟ್ ಮಂಜುನಾಥ್, ಸಮಾಜ ಸೇವಕ ಗಣೇಶ್‌ತಮ್ಲಾಪುರ, ರಾಜ್ಯ ಸಂಘಟನಾಆಯುಕ್ತ ಪ್ರಭಾಕರ ಭಟ್, ರಾಜ್ಯ ಮಾಜಿಜಂಟಿ ಕಾರ್ಯದರ್ಶಿ ಚಲ್ಲಯ್ಯ, ಜಿಲ್ಲಾ ಸಹಾಯಕಆಯುಕ್ತ ಎಂ.ಬಾಲಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಪಾತ್ರಧಾರಿಪ್ರದೀಪ್‌ಗೌಡ, ರಾಜ್ಯ ಸಹಾಯಕ ಸಂಘಟನಾಆಯುಕ್ತೆ ಎಚ್.ಎಂ.ಪ್ರಿಯಾ0ಕ,ಜಿಲ್ಲಾ ಸ್ಕೌಟ್‌ಆಯುಕ್ತ ಸ್ಟೀಫನ್ ಪ್ರಕಾಶ್,ಜಿಲ್ಲಾ ಮಾಜಿಜಂಟಿ ಕಾರ್ಯದರ್ಶಿ ಎಚ್.ಜಿ.ಕಾಂಚನಮಾಲ, ಮಾಜಿಜಿಲ್ಲಾ ಸಹ ಕಾರ್ಯದರ್ಶಿ ಆರ್.ಜಿ.ಗಿರೀಶ್, ಗೈಡ್‌ಕ್ಯಾಪ್ಟನ್ ಶಿಲ್ಪಕೃತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ತಾರಾಗಣದಲ್ಲಿಕಲಾವಿದರಾದ ಸಿದ್ದುಮಂಡ್ಯ, ಪೂಜಾರಘುನಂದನ್, ಕುಮಾರಿ ಶರಣ್ಯ, ಗ್ಯಾರಂಟಿರಾಮಣ್ಣ, ಲತಾಮಣಿತುರುವೇಕೆರೆ, ಎಚ್.ಎಸ್.ಪ್ರಭಾಕರ್, ಅಂಬಿಕಾ, ಮುರುಳಿ ಹಾಸನ್, ಸಾಸು ವಿಶ್ವನಾಥ್, ಶರತ್ ಬಾಬು, ಡಾ.ಹಸೀನಾ ಎಚ್.ಕೆ, ಬಿ.ಪಿ.ಗಿರೀಶ್, ಭಾನುಮತಿ, ಶಶಿಚಂದ್ರಿಕಾ, ರೀನಾ, ಧರ್ಮ ತಾಳೂರು, ಸ್ಪೂರ್ತಿ, ಸಿಂಚನ, ದೀಪಿಕಾ, ಹೇಮಲತಾ, ಶ್ರೇಯಸ್, ವೀಣಾ, ಆಶಾ, ಲಕ್ಷಿö, ಯಶಸ್, ಚಂದನ್, ಶ್ವೇತಾ ಮಂಜುನಾಥ್, ಉಷಾ ಸೇರಿದಂತೆ ಹಲವರಿದ್ದಾರೆ.

ಕಲಾಸಿಪಾಳ್ಯ ಲಕ್ಷಿö ಮಹಾಲಕ್ಷಿö್ಮÃಥಿಯೇಟರ್ ಬ್ಯಾನರಡಿಯಲ್ಲಿ ಮೂಡಿಬರುತ್ತಿರುವ ಈ ಚಲನಚಿತ್ರಕ್ಕೆ ಸಂಭಾಷಣೆಯನ್ನು ವಿಜಯ ಹಾಸನ್ ಬರೆದಿದ್ದು, ಛಾಯಾಗ್ರಹಣವನ್ನುಚಂದು, ಸಂಕಲನ ಸ್ಟಾö್ಯನಿ ಜಾಯ್ಸನ್, ಸಹ ನಿರ್ದೇಶನ ಶರತ್ ಬಾಬು ಹಾಗೂ ಅನಿಲ್ ಕುಮಾರ್, ಸಹಾಯಕ ನಿರ್ದೇಶಕರಾಗಿಅರ್ಜುನ್‌ಇದ್ದುಇದೇ ಮೊದಲ ಬಾರಿಗೆಅರುಣ್‌ಗೌಡಕರಡಿಗಾಲ ನಿರ್ದೇಶನದಜವಾಬ್ದಾರಿ ಹೊತ್ತಿದ್ದಾರೆ.

Share This Article
error: Content is protected !!
";