ಸ್ವಚ್ಚತೆ ಕಾಪಾಡಿ ಸಾಂಕ್ರಾಮಿಕ ರೋಗ ತಡೆಗಟ್ಟಿ – ಮಂಜುನಾಥ

Vijayanagara Vani
ಸ್ವಚ್ಚತೆ ಕಾಪಾಡಿ ಸಾಂಕ್ರಾಮಿಕ ರೋಗ ತಡೆಗಟ್ಟಿ – ಮಂಜುನಾಥ
ಪಟ್ಟಣದ ಇಂದಿರಾನಗರದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯ ಕಾರ್ಯಕ್ರಮದಡಿ ಸಾರ್ವಜನಿಕರಿಗೆ ಆರೋಗ್ಯದ ಜಾಗೃತಿ ಮೂಡಿಸಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಮಂಜುನಾಥ ಮಾತನಾಡಿ, ಮಾನ್ಸೂನ್ ಮಳೆ ಪ್ರಾರಂಭವಾಗುವಾಗ ಹವಾಮಾನ ಬದಲಾವಣೆಯಾಗುತ್ತದೆ, ಇದರಿಂದ ಮನುಷ್ಯನಲ್ಲಿ ಕೆಲವೊಂದು ಬದಲಾವಣೆಯಾಗಿ ರೋಗದ ಲಕ್ಷಣಗಳು ಕಂಡು ಬರುವ ಸಾಧ್ಯತೆಗಳಿರುತ್ತದೆ. ಈ ಮಳೆಯಿಂದ ವಾಂತಿಬೇದಿ, ಟೈಪಾಯಿಡ್, ಡೆಂಗ್ಯು, ಚಿಕನ್ ಗುನ್ಯ ಸೇರಿದಂತೆ ಇನ್ನಿತರ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತಗಳಿರುತ್ತವೆ. ಮನೆಯ ಪಕ್ಕದಲ್ಲಿ ಮಳೆ ನೀರು ನಿಲ್ಲದಂತೆ, ಕಸಕಡ್ಡಿ ಬೀಳದಂತೆ ಪ್ರತಿಯೊಬ್ಬರು ಮನೆಯ ಸುತ್ತಲೂ ಹಾಗೂ ಪರಿಸರವನ್ನು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಈ ಎಲ್ಲಾ ಮುಂಜಾಗೃತ ಕ್ರಮಗಳನ್ನು ಅನುಸರಿಸಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು. 
ಇಂದಿರಾನಗರದ ಪ್ರತಿ ಓಣಿಯಲ್ಲಿ ಸಂಚಾರ ಮಾಡುವ ಮೂಲಕ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯದ ಕುರಿತು ಮುಂಜಾಗೃತ ಕ್ರಮಗಳನ್ನು ತಿಳಿಸಿದರು. 
ಈ ಸಂದರ್ಭದಲ್ಲಿ ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಮಹೇಂದ್ರ, ಪಿಹೆಚ್‍ಸಿಓ ಗೀರಿಜಾ, ಆಶಾ ಕಾರ್ಯಕರ್ತೆ ಮುಮತ್ತಾಜ್, ಸುಧಾ, ನಾಗರತ್ನ ಹಾಗೂ ಇತರರು ಇದ್ದರು. 
WhatsApp Group Join Now
Telegram Group Join Now
Share This Article
error: Content is protected !!