Ad image

ದೇಶದ ಉತ್ತಮ ಪ್ರಜೆಯಾಗಿ ದೇಶದ ಗೌರವನ್ನು ಹೆಚ್ಚಿಸಿ: ಕಲ್ಮಠಶ್ರೀ

Vijayanagara Vani
ದೇಶದ ಉತ್ತಮ ಪ್ರಜೆಯಾಗಿ ದೇಶದ ಗೌರವನ್ನು ಹೆಚ್ಚಿಸಿ: ಕಲ್ಮಠಶ್ರೀ

ಮಾನ್ವಿ : ಪಟ್ಟಣದ ಕಲ್ಮಠ ಶ್ರೀ ಪಂಪಾ ವಿರೂಪಾಕ್ಷೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅವರಣದಲ್ಲಿ ಸರಸ್ವತಿ ಪೂಜೆ ನೆರವೇರಿಸುವ ಮೂಲಕ ಕಲ್ಮಠ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಮಹಾಸ್ವಾಮಿಗಳು ಶಾಲಾ ಪ್ರಾರಂಭೋತ್ಸವ ನೆರವೇರಿಸಿ ಮಾತನಾಡಿ ವಿದ್ಯಾರ್ಥಿಗಳು ಪಠ್ಯದ ಜೋತೆಗೆ ಶಿಕ್ಷಕರು ಕಲಿಸುವ ನೈತಿಕ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ರೂಡಿಸಿಕೊಂಡು ಶಿಕ್ಷಣವಂತರಾಗಿ, ತಮ್ಮ ಜೀವನದಲ್ಲಿ ಉನ್ನತವಾದ ಸಾಧನೆಯನ್ನು, ಗುರಿಯನ್ನು ಹೊಂದಿದಾಗ ಮಾತ್ರ ದೇಶದ ಉತ್ತಮ ಪ್ರಜೆಯಾಗಿ ದೇಶದ ಗೌರವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶಿಕ್ಷಣ ಇಲಾಖೆಯ ಸಿ.ಆರ್.ಪಿ.ಶ್ರೀಧರ್‌ರಾವ್‌ಕುಲಕರ್ಣಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಆರತಿ ಬೆಳಗಿ ಸ್ವಾಗತಿಸಿ ಗುಲಾಬಿ ಹೂ, ಬಲೂನ್, ಚಾಕ್ಲೆಟ್‌ಗಳನ್ನು ನೀಡಿ ಸ್ವಾಗತಿಸಿದರು
ವಿದ್ಯಾರ್ಥಿಗಳು ವಿವಿಧ ವೇಷ ಭೂಷಣ ತೋಟ್ಟು ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಕಲ್ಮಠ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಭಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದರು,ಮಂಜುನಾಥ್ ಕಮತರ್. ಎಮ್.ಎಮ್ ಹಿರೇಮಠ್, ಕೇಮ್ಯಾ ನಾಯಕ್, ಎಸ್. ಎಸ್ . ಪಾಟೀಲ್. ಸಿದ್ದನಗೌಡ ಪಾಟೀಲ್. ಶಾಂತಯ್ಯ, ರವಿ ಹುಲಿಯಾಪುರ್, ನರಸಿಂಹಲು.ಬಿ, ರಾಘವೇಂದ್ರ,ಜಯಶ್ರೀ,ಮಹಾAತಮ್ಮ,ಭ್ರಮಾರAಭsÀ, ರೂಪ, ಪವಿತ್ರ, ಅನ್ನಪೂರ್ಣ, ಪ್ರಭಾವತಿ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ಮಾನ್ವಿ : ಪಟ್ಟಣದ ಕಲ್ಮಠ ಶ್ರೀ ಪಂಪಾ ವಿರೂಪಾಕ್ಷೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅವರಣದಲ್ಲಿ ಕಲ್ಮಠ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಮಹಾಸ್ವಾಮಿಗಳು ಶಾಲಾ ಪ್ರಾರಂಭೋತ್ಸವ ನೆರವೇರಿಸಿದರು.

Share This Article
error: Content is protected !!
";