ಪತ್ರಕರ್ತರ ಭವನ ಮತ್ತು ಪತ್ರಕರ್ತರಿಗೆ ನಿವೇಶನ ಕೊಡಿಸುವುದು ನನ್ನ ಮಖ್ಯ ಗುರಿ: ಚಂದ್ರಶೇಖರ್.

Vijayanagara Vani
ಪತ್ರಕರ್ತರ ಭವನ ಮತ್ತು ಪತ್ರಕರ್ತರಿಗೆ ನಿವೇಶನ ಕೊಡಿಸುವುದು ನನ್ನ ಮಖ್ಯ ಗುರಿ: ಚಂದ್ರಶೇಖರ್.

ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ತಾಲ್ಲೂಕಿನ ಪತ್ರಕರ್ತರ ಭವನ ನಿರ್ಮಾಣ ಮಾಡುವುದು ಮತ್ತು ಕಾರ್ಯನಿರತ ಪತ್ರಕರ್ತ ರಿಗೆ ನಿವೇಶನ ಕೊಡಿಸುವುದು ನನ್ನ ಮುಖ್ಯ ಗುರಿ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಶೇಖರ್.ಡಿ. ಉಪ್ಪಾರ್ ತಿಳಿಸಿದರು.
ಅವರು ದೊಡ್ಡಬಳ್ಳಾಪುರ ತಾಲ್ಲೂಕಿನ ಎಸ್ ಎಸ್ ಘಾಟಿ ಯಲ್ಲಿನ ಹ್ಯಾಪಿ ವ್ಯಾಲಿ ರೆಸಾರ್ಟ್‌ ನಲ್ಲಿ ನಡೆದ ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಸಾಲಿನ ಪದಾದಿಕಾರಿಗಳ ಪದಗ್ರಹಣ ಕಾರ್ಯ ಕ್ರಮದಲ್ಲಿ ಮಾತನಾಡುತ್ತ,ತಾಲ್ಲೂಕು ಪತ್ರಕರ್ತ ರಲ್ಲಿ ಸಮನ್ವಯತೆ ಕೊರತೆ ಇದ್ದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಮಣಿಕವಾಗಿ ಸಂಘದ ಏಳ್ಗೆಗಾಗಿ ದುಡಿಯುತ್ತೇನೆ ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜಿ.ಶ್ರೀನಿವಾಸ ಮಾತನಾಡಿ ಪತ್ರಕರ್ತರು ನೈಜ ಸುದ್ದಿಯನ್ನು ಪ್ರಕಟಿಸಬೇಕು ಸತ್ಯಾ ಸತ್ಯತೆ ಯನ್ನು ಅರಿತು ಸುದ್ದಿಗಳನ್ನು ಮಾಡಬೇಕು.93 ವರ್ಷ ಗಳ  ಸುದೀರ್ಘ ಇತಿಹಾಸ ಹೊಂದಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ಎಲ್ಲಾ ಪದಾದಿಕಾರಿಗಳು ಒಗ್ಗಟ್ಟಾಗಿ ಸಂಘದ ನಿವೇಶನ ಮತ್ತು ಪತ್ರಕರ್ತರ ಭವನ ನಿರ್ಮಾಣಕ್ಕೆ ಶ್ರಮಿಸಲು ಮನವಿ ಮಾಡಿ ನೂತನ ಸಾಲಿಗೆ ಆಯ್ಕೆಯಾದ ಪದಾದಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಆರ್ ರಮೇಶ್  ಜಿಲ್ಲಾ ಖಜಾಂಚಿ ಶಾಂತಮೂರ್ತಿ ಉಪಾಧ್ಯಕ್ಷ ಮುರಳಿ ಮೋಹನ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಆರ್ ಸತೀಶ್ ನಾಮಿನಿ ಸದಸ್ಯ ಬಿ.ರಮೇಶ್ ಹೊಸಕೋಟೆ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಮಂಜುನಾಥ್ ಮತ್ತು ತಾಲೂಕಿನ ಎಲ್ಲಾ ಪತ್ರಕರ್ತರು ಭಾಗವಹಿಸಿದ್ದರು.

ನೂತನ ಸಾಲಿಗೆ ಆಯ್ಕೆಯಾದ ಪದಾಧಿಕಾರಿಗಳಿಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ಅನೇಕ ಕನ್ನಡ ಪರ  ಹಾಗೂ ಇನ್ನಿತರ ಎಲ್ಲಾಸಂಘಟನೆಯ ಮುಖಂಡರು ಗಳು ರಾಜಕಾರಣಿಗಳು ಶುಭ ಹಾರೈಸಿದರು.

WhatsApp Group Join Now
Telegram Group Join Now
Share This Article
error: Content is protected !!