ಮಾನ್ವಿ: ತಾಲೂಕಿನ ಕರಾಬದಿನ್ನಿ ಗ್ರಾಮದಲ್ಲಿನ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಅರೋಗ್ಯ ಇಲಾಖೆಯಿಂದ ರಾಷ್ಟ್ರೀಯ ಅಯೋಡಿನ್ ಕೊರತೆಯ ನ್ಯೂನತೆಗಳ ನಿಯಂತ್ರಣ ಕಾರ್ಯಕ್ರಮ ಅಂಗವಾಗಿ ತಾಯಿಂದಿರಿಗೆ ಮಾಹಿತಿ ಶಿಕ್ಷಣ ಸಂವಹನ ಕುರಿತು ನಡೆದ ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಮಾತನಾಡಿ ಮಾನವರಿಗೆ ಅಗತ್ಯವಾದ ಸೂಕ್ಷö ಪೋಷಕಾಂಶಗಳಲ್ಲಿ ಅಯೋಡಿನ್ ಒಂದಾಗಿದೆ.ಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅಯೋಡಿನ್ ಅತ್ಯಗ0ತ್ಯವಾಗಿದೆ. ಆಯೋಡಿನ್ ಕೊರತೆಯಿಂದ ಥೈರಾಯಿಡ್ ಗ್ರಂಥಿಯ ಹಿಗ್ಗುವಿಕೆ , ಮಾನಸಿಕ ಅಸ್ವಸ್ಥತೆ. ಶ್ರವಣ ದೋಷ , ಸ್ನಾಯು ಸೆಳೆತ, ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಗರ್ಭಿಣಿ ಮಹಿಳೆಯರಲ್ಲಿ ಅಯೋಡಿನ್ ಕೊರತೆಯಿಂದ ಆಸ್ವಾಭಾವಿಕ ಗರ್ಭಪಾತ, ಸಾಂದರ್ಭಿಕ ವೈಪರೀತ್ಯಗಳು, ಮತ್ತು ಮಗುವಿನಲ್ಲಿ ಕುಬ್ಜತೆ. ಕಂಡು ಬರುತ್ತದೆ ಅದರಿಂದ ಪ್ರತಿಯೊಬ್ಬರು ಅಯೋಡಿನ್ ಯುಕ್ತವಾದ ಉಪ್ಪನ್ನು ಸೇವನೇ ಮಾಡುವ ಮೂಲಕ ಅಯೋಡಿನ್ ಕೊರತೆಯನ್ನು ನಿವಾರಿಸಿ ಕೊಳ್ಳಬಹುದು ಎಂದು ತಿಳಿಸಿದರು
ಆರೋಗ್ಯ ನಿರೀಕ್ಷಣಾ ಅಧಿಕಾರಿ ವಿಶ್ವರಾಧ್ಯ, ಪ್ರಾಥಮಿಕ ಆರೋಗ್ಯ ಸುರಕ್ಷಿತ ಅಧಿಕಾರಿ ಬಸ್ಸಮ್ಮ ,ಅಂಗನವಾಡಿ ಕಾರ್ಯಕರ್ತೆ ಮುಂಜುಳಾ, ದ್ಯಾವಮ್ಮ ,ಚನ್ನಮ್ಮ, ಆಶಾ ಕಾರ್ಯಕರ್ತರಾದ. ಅಮರಮ್ಮ ಸೇರಿದಂತೆ ಗ್ರಾಮದ ಮಹಿಳೆಯರು ಭಾಗವಹಿಸಿದರು.
ಮಾನ್ವಿ: ತಾಲೂಕಿನ ಕರಾಬದಿನ್ನಿ ಗ್ರಾಮದಲ್ಲಿನ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಅರೋಗ್ಯ ಇಲಾಖೆಯಿಂದ ರಾಷ್ಟ್ರೀಯ ಅಯೋಡಿನ್ ಕೊರತೆಯ ನ್ಯೂನತೆಗಳ ನಿಯಂತ್ರಣ ಕಾರ್ಯಕ್ರಮ ನಡೆಯಿತು.