Ad image

ಪ್ರತಿಯೊಬ್ಬರೂ ಸಸಿ ನೀಡುವ ಅಭ್ಯಾಸವನ್ನು ರೂಡಿಸಿಕೊಳ್ಳಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಪಿ.ಶೇಖರ್* 

Vijayanagara Vani
ಪ್ರತಿಯೊಬ್ಬರೂ ಸಸಿ ನೀಡುವ ಅಭ್ಯಾಸವನ್ನು ರೂಡಿಸಿಕೊಳ್ಳಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಪಿ.ಶೇಖರ್* 
ಬಳ್ಳಾರಿ, ಜೂ.5 : ಕೌಲ್ ಬಜಾರ್ ಪ್ರದೇಶದ ಬಂಡಿಹಟ್ಟಿ ಭಾಗದ ಬೆಳಗಲ್ ರಸ್ತೆಯಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕರ್ನಾಟಕ ಏಕೀಕರಣ ರಕ್ಷಣಾ ಸೇನಾ ಸಮಿತಿ ವತಿಯಿಂದ ವಾರ್ಡ್ 32ರ ಬಂಡಿಹಟ್ಟಿ ಗ್ರಾಮದ ರೈತ ಘಟಕದ ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುತ ಶಾಲೆಯ ಆವರಣದಲ್ಲಿ ಸಸಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಇದೇ ವೇಳೆ ಕಾರ್ಯಕ್ರಮದ ಕೇಂದ್ರ ಬಿಂದುಗಳು ಹಾಗೂ ಸಂಘಟನೆಯ ರಾಜ್ಯಾಧ್ಯಕ್ಷರಾದ ಪಿ.ಶೇಖರ್ ಅವರು ಮಾತನಾಡಿ ಬಂಡಿಹಟ್ಟಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಇಂದು ನಮ್ಮ ಗ್ರಾಮ ಘಟಕದ ಅಧ್ಯಕ್ಷರಾದ ಬಸವರಾಜ್ ಮತ್ತು ಸೇರಿದಂತೆ ಅನೇಕ ಪದಾಧಿಕಾರಿಗಳು ಶಾಲೆಯ ಆವರಣದಲ್ಲಿ ಸಸಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬಹಳ ಹೆಮ್ಮೆ ಎನಿಸುತ್ತಿದೆ.
ಯಾಕಂದ್ರೆ ಈ ಸಂಘಟನೆಯು ಸುಮಾರು 25ವರ್ಷಗಳಿಂದ ಸಂಘಟನೆಯ ಮೂಲಕ ಅನೇಕ ಕಾರ್ಯಕ್ರಮಗಳನ್ನ ಮಾಡುತ್ತಾ ಬಂದಿದ್ದೇವೆ ಎಂದು ಹೇಳಿದರು.
ಅದಕ್ಕಾಗಿ ತಾವುಗಳು ಕೂಡ ತಮ್ಮ ಮನೆಯ ಅಂಗಳದಲ್ಲಿ ಪ್ರತಿಯೊಬ್ಬರು ಎರಡು ಸಸಿ ಗಿಡಗಳನ್ನು ನೀಡಬೇಕು ಮತ್ತು ಸಮಯ ಸಿಕ್ಕಾಗ ಗಿಡಗಳನ್ನು ನೀಡುವಂತಹ ಅಭ್ಯಾಸವನ್ನು ರೂಡಿಸಿಕೊಂಡರೆ ಇಡೀ ದೇಶದಲ್ಲಿ ಪರಿಸರ ರಾಷ್ಟ್ರ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಆ ಕಳೆದ ತಿಂಗಳಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮನ ಎಂದು ಕಾಣದಂತ ಬಿಸಲನ್ನು ಕಂಡು ಸಾಕಷ್ಟು ಅಡೆತಡೆಗಳನ್ನು ಹೊಂದಿದ್ದೇವೆ ಅದಕ್ಕಾಗಿ ಮುಂಬರುವ ದಿನಗಳಲ್ಲಿ ಬಿಸಿಲಿನ ತಾಪಮಾನವನ್ನು ಕಡಿಮೆ ಮಾಡಲು ಇಂದಿನಿಂದಲೇ ನಾವು ಶಶಿ ಗಿಡಗಳನ್ನು ನೆಟ್ಟು ಪರಿಸರಪವನ್ನು ಕಾಪಾಡಿ ತಂಪಾಗಿಸಲು ಜನರು ಮುಂದಾಗಬೇಕೆಂದು ಹೇಳಿದರು.
ನಂತರ ಮಕ್ಕಳಿಗೆ ನೆಲ ಜಲ ಭಾಷೆ ಮತ್ತು ಪರಿಸರ ಬಗ್ಗೆ ಜಾಗೃತಿಯನ್ನು ಮೂಡಿಸಿದರು. ಶಾಲೆ ಆವರಣದಲ್ಲಿ ಸುಮಾರು 50ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ನೀರನ್ನು ಹಾಕುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ದಾದಾಪೀರ್, ರೈತ ಘಟಕ ಅಧ್ಯಕ್ಷರಾದ ಬಸವರಾಜ, ಬಂಡಿಹಟ್ಟಿ ಗ್ರಾಮ ಘಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ, ಉಪಾಧ್ಯಕ್ಷರಾದ ರಮೇಶ, ಕಾರ್ಮಿಕ ಘಟಕದ ಅಧ್ಯಕ್ಷರಾದ ರುದ್ರೇಶ್, ಖಜಾಂಚಿಗಳಾದ ಗಂಗಾಧರ ಸೇರಿದಂತೆ ಶಾಲೆಯ ಶಿಕ್ಷಕ ಶಿಕ್ಷಕಿಯರು ಮತ್ತು ಶಾಲೆಯ ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು.
Share This Article
error: Content is protected !!
";