ಅಮೃತ ಸರೋವರದಲ್ಲಿ ಪರಿಸರ ಜಾಗೃತಿಕೆರೆ ದಡದಲ್ಲಿ ಸಸಿ ಹಚ್ಚಿದ ತಾಪಂ ಇಒ / ಶಾಲಾ ವಿದ್ಯಾರ್ಥಿಗಳು ಭಾಗಿ 

Vijayanagara Vani
ಅಮೃತ ಸರೋವರದಲ್ಲಿ ಪರಿಸರ ಜಾಗೃತಿಕೆರೆ ದಡದಲ್ಲಿ ಸಸಿ ಹಚ್ಚಿದ ತಾಪಂ ಇಒ / ಶಾಲಾ ವಿದ್ಯಾರ್ಥಿಗಳು ಭಾಗಿ 
ಮಸ್ಕಿ : ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿಪಡಿಸಿದ ಗುಂಡ ಗ್ರಾಮ ಪಂಚಾಯತಿಯ ಹೊಗರನಾಳ ಗ್ರಾಮದ ಕೆರೆ ದಡದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. 
ಕೆರೆ ದಡದಲ್ಲಿ ಸಸಿ ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಅಂಬರೀಶ್ ಅವರು ಚಾಲನೆ ನೀಡಿದರು. ನಂತರ ಮಾತನಾಡಿ, ಮಾನವನ ತೀವ್ರ ಹಸ್ತಕ್ಷೇಪದಿಂದ ಪರಿಸರ ಇಂದು ತೀವ್ರ ಕಳವಳ ಮಟ್ಟಕ್ಕೆ ತಲುಪಿದೆ. ಜೀವ ಸಂಕುಲದ ಉಳಿವಿಗೆ ಪರಿಸರ ಸಂರಕ್ಷಣೆ ಇಂದು ಅತ್ಯವಶ್ಯವಾಗಿದೆ. ಪರಿಸರ ಮಾಲಿನ್ಯ ತಡೆಗೆ ಎಲ್ಲೆಡೆ ಮರಗಳನ್ನು ಬೆಳೆಸಬೇಕಿದೆ. ಇಂಥ ಮಹತ್ವ ಪೂರ್ಣ ಕೆಲಸವನ್ನು ಅರಣ್ಯ ಇಲಾಖೆ ಅಥವಾ ಸರ್ಕಾರದ ಮೇಲೆ ಹೇರದೆ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು. ಈ ಹಿನ್ನಲೆಯಲ್ಲಿ ಅಮೃತ ಸರೋವರದಲ್ಲಿ ಪರಿಸರ ದಿನ ಆಚರಿಸಲಾಗಿದೆ ಎಂದರು.
ತಾಪಂ ಸಹಾಯಕ ನಿರ್ದೇಶಕರಾದ (ಗ್ರಾಮೀಣ ಉದ್ಯೋಗ) ಶಿವಾನಂದರಡ್ಡಿ ಮಾತನಾಡಿ, ನರೇಗಾ ಯೋಜನೆಯಡಿ ನರ್ಸರಿ ಅಭಿವೃದ್ಧಿ, ರಸ್ತೆಯ ಎರಡು ಬದಿಗಳಲ್ಲಿ ಸಸಿ ನೆಡಲು ಕೂಲಿ ಕಾರ್ಮಿಕರನ್ನು ನಿಯೋಜಿಸಲಾಗುತ್ತಿದೆ. ಪ್ರಸಕ್ತ ವರ್ಷದ ಕ್ರಿಯಾ ಯೋಜನೆಯಲ್ಲಿಯೂ ಅರಣ್ಯ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಅರಣ್ಯ ಇಲಾಖೆಯವರು ಹೊಲಗಳಲ್ಲಿ ನೆಡುವ ಗಿಡಗಳನ್ನು ರೈತರು ಸಂರಕ್ಷಿಸಿದರೆ ಮಾತ್ರ ಇಲಾಖೆಯ ಉದ್ದೇಶ ಸಕಾರವಾಗಲಿದೆ ಎಂದರು. 
ಈ ವೇಳೆ ಗುಂಡ ಗ್ರಾಪಂ ಪಿಡಿಒ ಸುಧೀರ್, ಗ್ರಾಪಂ ಸಿಬ್ಬಂದಿ ರಮೇಶ್, ಕಂಪ್ಯೂಟರ್ ಆಪರೇಟರ್ಗಳಾದ ವಸಂತ, ದುರ್ಗೇಶ, ಎನ್ಆರ್ಎಲ್ಎಂ ವಲಯ ಮೇಲ್ವಿಚಾರಕರಾದ ಪ್ರಕಾಶ್, ಸ್ಪೂರ್ತಿ ಸಂಜೀವಿನಿ ಗುಂಡ ಗ್ರಾಪಂ ಮಟ್ಟದ ಒಕ್ಕೂಟದ ಅಧ್ಯಕ್ಷೆ ಚಂದ್ರಮ್ಮ, ಅರಣ್ಯ ಇಲಾಖೆಯ ಶರಣಬಸವ, ಎಲ್ಸಿಆರ್ಪಿ, ಎಂಬಿಕೆ, ಶಾಲಾ ವಿದ್ಯಾರ್ಥಿಗಳು, ಗ್ರಾಪಂ ಸಿಬ್ಬಂದಿ ಇದ್ದರು.
ಮಸ್ಕಿ ತಾಲೂಕಿನ ಗುಂಡ ಗ್ರಾಪಂಯ ಹೊಗರನಾಳದ ಅಮೃತ ಸರೋವರ ಕೆರೆ ದಡದಲ್ಲಿ ಬುಧವಾರ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಅಂಬರೀಶ್ ಸಸಿ ನೆಟ್ಟರು. ಈ ವೇಳೆ ತಾಪಂ ಸಹಾಯಕ ನಿರ್ದೇಶಕರಾದ ಶಿವಾನಂದರಡ್ಡಿ, ಗುಂಡ ಗ್ರಾಪಂ ಪಿಡಿಒ ಸುಧೀರ್, ಸಿಬ್ಬಂದಿ ರಮೇಶ್, ಕಂಪ್ಯೂಟರ್ ಆಪರೇಟರ್ಗಳಾದ ವಸಂತ, ದುರ್ಗೇಶ, ಎನ್ಆರ್ಎಲ್ಎಂ ವಲಯ ಮೇಲ್ವಿಚಾರಕರಾದ ಪ್ರಕಾಶ್, ಅರಣ್ಯ ಇಲಾಖೆಯ ಶರಣಬಸವ ಇತರರಿದ್ದರು.
WhatsApp Group Join Now
Telegram Group Join Now
Share This Article
error: Content is protected !!