ಕೊಟ್ಟೂರು ತಾಲೂಕಿನ ಮಲ್ಲನಾಯಕಹಳ್ಳಿ ಗ್ರಾಮದ ಬಳಿ ಸೇತುವೆ ನಿರ್ಮಾಣ ಅವಶ್ಯವಾಗಿದ್ದು ಎರಡು ಕೋಟಿ ಅನುದಾನದಲ್ಲಿ ಮುಂದಿನ ದಿನಗಳಲ್ಲಿ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಗೆ ವಹಿಸಲಾಗುವುದು ಎಂದು ಶಾಸಕ ನೇಮಿರಾಜ್ ನಾಯ್ಕ್ ಹೇಳಿದರು. ಅವರು ಮೂರು ದಿನಗಳ ಹಿಂದೆ ಭಾರಿ ಮಳೆಗೆ ವಡ್ಡರ ಹಳ್ಳ ಹರಿದು ಕೊಟ್ಟೂರು ಕೂಡ್ಲಿಗಿ ಹೆದ್ದಾರಿ ರಸ್ತೆ ಬಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ ಪರಿಣಾಮ ಶುಕ್ರವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು ನೂತನ ಸೇತುವೆ ನಿರ್ಮಿಸುವ ಕಾರ್ಯ ಸುಮಾರು ನಾಲ್ಕು ದಶಕಗಳಿದಲೂ ಆಗದೇ ಇರುವುದು, ಈ ಭಾಗದ ಜನರಿಗೆ ಮಳೆ ಬಂದಾಗ ವಡ್ರಹಳ್ಳ ಸೇತುವೆ ಮೇಲೆ ಓಡಾಡಲು ತುಂಬ ಕಷ್ಟ ಅನುಭವಿಸುತ್ತಿದ್ದಾರೆ.
ಸೇತುವೆ ನಿರ್ಮಾಣ ಕಾರ್ಯ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಯವರಿಗೆ ಈಗಾಗಲೇ ಸೂಚಿಸಿರುವೆ ಈ ಹಿಂದೆ ಸೇತುವೆ ನಿರ್ಮಾಣಕ್ಕೆ ೨ ಕೋಟಿರೂಗಳ ಯೋಜನೆ ರೂಪಿಸಿದ್ದು ಸೇತುವೆಯನ್ನು ಮತ್ತೊಷ್ಟು ವಿಸ್ತಾರಗೊಳಿಸಿ ನಿರ್ಮಿಸಲು ಬೇಕಾಗುವ ಮತ್ತೊಷ್ಟು ಅನುದಾನವನ್ನು ಕೊಡುವಂತೆ ಸರ್ಕಾರಕ್ಕೆ ಒತ್ತಾಯ ಪಡಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎಇಇ ವೆಂಕಟರಮಣ, ಜೆಇ ದೊಡ್ಡಮನಿ ಕೊಟ್ರೇಶ್, ಜಿ.ಪಂ ಮಾಜಿ ಸದಸ್ಯ ಎಂ.ಎಂ .ಜೆ. ಹರ್ಷವರ್ಧನ ಮತ್ತಿತರರು ಇದ್ದರು