ಮಸ್ಕಿ:- ನಗರದ ನಂದಿ ಪಬ್ಲಿಕ್ ಶಾಲೆಯಲ್ಲಿ ವನಸಿರಿ ಫೌಂಡೇಶನ್ ತಾಲೂಕ ಘಟಕ ದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಶರಣೇಗೌಡ ಪಾಟೀಲ ಸಸಿ ನೆಟ್ಟು ನೀರುಣಿ ಮಾತನಾಡಿ ನಗರೀಕರದಿಂದ ಮನುಷ್ಯ ಗಿಡಮರಗಳನ್ನು ಹೆಚ್ಚು ಹೆಚ್ಚು ಕಡಿಯುತ್ತಿದ್ದಾನೆ.ಗಿಡಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ಜಾಗತಿಕ ತಾಪಮಾನದಲ್ಲಿ ಏರುಪೇರಗಳಾಗುತ್ತಿವೆ. ಜಾಗತಿಕ ತಾಪಮಾನದ ಪ್ರಕಾರ ನಾವುಗಳೆಲ್ಲರೂ 10ಲಕ್ಷಕ್ಕೂ ಹೆಚ್ಚು ಗಿಡಮರಗಳನ್ನು ಬೆಳಸಬೇಕಾಗಿದೆ.ಈ ನಿಟ್ಟಿನಲ್ಲಿ ವನಸಿರಿ ಫೌಂಡೇಶನ್ ಪ್ರತಿನಿತ್ಯ ಪರಿಸರ ಸಂರಕ್ಷಣೆಯಲ್ಲಿ ತೊಡಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ.ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು,ಪರಿಸರ ಪ್ರೇಮಿಗಳು ವನಸಿರಿ ಫೌಂಡೇಶನ್ ಜೊತೆಗೆ ಕೈಜೋಡಿಸಿ ಪರಿಸರವನ್ನು ಉಳಿಸಿ ಬೆಳಸಲು ಮುಂದಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಸ್ಕಿ ವನಸಿರಿ ಫೌಂಡೇಶನ್ ತಾಲೂಕ ಘಟಕದ ಅಧ್ಯಕ್ಷರಾದ ರಾಜು ಪತ್ತಾರ ಬಳಗಾನೂರ,ನಂದಿ ಪಬ್ಲಿಕ್ ಶಾಲೆಯ ಅಧ್ಯಕ್ಷರಾದ ರವಿಕುಮಾರ ಅಚ್ಚಪ್ಪನವರ್, ಅಮರೇಗೌಡ ಪಾಟೀಲ, ನಾಗರಾಜ ಸ್ಥಾವರಮಠ, ಅಂಬಿಕಾ ಪಾಟೀಲ, ಶರಣಮ್ಮ,ಆಸ್ಮಾ ಬೇಗಂ, ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.