Ad image

ನೀರಿನ ಅಭಾವಕ್ಕೆ ಮಾಜಿ ಸಚಿವ ನಾಡಗೌಡ  ಕಾರಣ: ಶಾಸಕ ಬಾದರ್ಲಿ ತೀರುಗೇಟು,

Vijayanagara Vani
ನೀರಿನ ಅಭಾವಕ್ಕೆ ಮಾಜಿ ಸಚಿವ ನಾಡಗೌಡ  ಕಾರಣ: ಶಾಸಕ ಬಾದರ್ಲಿ ತೀರುಗೇಟು,
filter: 0; fileterIntensity: 0.0; filterMask: 0; captureOrientation: 0; module: video; hw-remosaic: false; touch: (-1.0, -1.0); modeInfo: Beauty ; sceneMode: 0; cct_value: 0; AI_Scene: (-1, -1); aec_lux: 94.0; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 48;
ಸಿಂಧನೂರು: ಕುಡಿಯುವ ನೀರಿನ ನಿಜವಾದ ಪರಿಸ್ಥಿತಿ ಅರಿತುಕೊಂಡ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಪತ್ರಿಕೆ ಹೇಳಿಕೆ ಕೊಡಬೇಕು ಹೊರತು, ಯಾರನ್ನು ತೇಜೋವಧೆ ಮಾಡಿ ಜನರಲ್ಲಿ ಗೊಂದಲ ವಾತಾವರಣ ಸೃಷ್ಟಿ ಮಾಡಬಾರದು.ಎರಡು ಬಾರಿ ಶಾಸಕರಾಗಿ, ಒಂದು ಬಾರಿ ಸಚಿವರಾಗಿ ಅನುಭವ ಇದ್ದವರು. ನೀರಿನ ಬಗ್ಗೆ ಅನುಭವ ಉಳ್ಳವರು,ರಾಜಕೀಯವಾಗಿ ಹೇಳಿಕೆ ಕೊಡುವುದು ಸಮಂಜಸವಲ್ಲ.ನೀರಿನ ಸಮಸ್ಯೆ ಉಲ್ಬಣಕ್ಕೆ ನೇರ ಹೊಣೆ ವೆಂಕಟರಾವ್ ನಾಡಗೌಡರ ನಿರ್ಲಕ್ಷ್ಯವೆ ಕಾರಣವೆಂದು ಶಾಸಕ ಹಂಪನಗೌಡ ಬಾದರ್ಲಿ  ತಿರುಗೇಟು ನೀಡಿದರು. 
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಡಗೌಡ ಶಾಸಕರಾಗಿದ್ದ ಅವಧಿಯಲ್ಲಿ ಸಿಂಧನೂರು ಪಟ್ಟಣದ ನಾಗರೀಕರಿಗೆ ಕುಡಿಯುವ ನೀರಿನ ಕೆರೆಗಾಗಿ 259 ಎಕರೆ ಭೂಮಿ ಖರೀದಿ ಮಾಡಿದ್ದರು. ಅದು ಒಂದು ಕಡೆ ಗುಡ್ಡ ತಳಪಾಯ ಸರಿಯಾಗಿಲ್ಲ. ನೀರು ಸರಬರಾಜು ಆಗುವಂತಹ ವಾತವಾರಣವಿಲ್ಲ ಮುಖ್ಯವಾಗಿ ಭೂಮಿಯಲ್ಲಿ ಸತ್ವ ಇದೆ ನೀರನ್ನು ಬಹಳ ಹೀರುತ್ತದೆ. ಮಿಶ್ರಣ ಭೂಮಿ ಇರುವುದರಿಂದ ಉಪ್ಪಿನ ಅಂಶ, ಮತ್ತು ಉಸಿಕಿನ ಅಂಶ ಸೇರಿದಂತೆ ಬೇರೆ ಬೇರೆ ನೀರು ಮಿಶ್ರಣ ಇರುವುದರಿಂದ ಅಲ್ಲಿ ಎಷ್ಟು ನೀರು ಸಂಗ್ರಹ ಮಾಡಿದರು ಕೂಡ ಹಾವಿಯಾಗಿ ಹೋಗುತ್ತದೆ. ಮತ್ತು ನೀರು ಕೆಳಗಡೆ ಪೋಲಾಗಿ ಹೋಗುವ ಭೂಮಿಯನ್ನು ಖರೀದಿ ಮಾಡಿದ್ದಕ್ಕೆ ನಗರದ ನಾಗರಿಕರಿಗೆ ನೀರಿನ ಸಮಸ್ಯೆಯಾಗುತ್ತಿದೆ.
ನಾನು ಶಾಸಕನಾದ ಮೇಲೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎರಡು ಬಾರಿ ಸಭೆ ಮಾಡಿ, ಎರಡು ಹಂತಗಳಲ್ಲಿ ಕೆರೆ ನಿರ್ಮಾಣ ಮಾಡಬೇಕು. 259 ಎಕರೆ ಕೆರೆ ಒಂದೇ ಹಂತದಲ್ಲಿ ನಿರ್ಮಾಣ ಮಾಡಿದರೆ ಕೊನೆ ಮಣ್ಣು ತೇವಾಂಶ ಜಾಸ್ತಿಯಾಗಿ ಪದೇ ಪದೇ ಮಣ್ಣು ಹೊಡೆದು ಹೋಗುವ ವಾತಾವರಣವಿದೆ ಹಾಗೂ  ಸಮತಟ್ಟಾದ ಭೂಮಿಯು ಇಲ್ಲದಿರುವುದರಿಂದ ಅಧಿಕಾರಿಗಳು ಕೆರೆ ಮಧ್ಯದಲ್ಲಿ ಹೊಡ್ಡು ನಿರ್ಮಾಣ ಮಾಡಿ, ಮೊದಲ ಹಂತ 110 ಎಕರೆ ಮತ್ತು ಇನ್ನುಳಿದ ಭೂಮಿ ಎರಡನೇ ಹಂತದಲ್ಲಿ ನಿರ್ಮಾಣ ಮಾಡಿದರೆ ಯೋಗ್ಯವೆಂದು ಆ ದಿನಗಳಲ್ಲೇ ತೀರ್ಮಾನ ಮಾಡಲಾಗಿತ್ತು.
ಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆ ಮಾಡಿದ್ದಾರೆ. ರಾಯಚೂರು ಜಿಲ್ಲೆಗೆ ಮೊದಲು ನೀರು ತುಂಬಿಸುತ್ತಾರೆ. ಆಮೇಲೆ ಸಿಂಧನೂರು ಕೆರೆಗೆ ತುಂಬಿಸುತ್ತಾರೆಂಬ ಆರೋಪವು ಇದೆ. ಆದರೆ ಇದು ನನ್ನ ಕಾಲದಲ್ಲಿ ಮಾತ್ರವಲ್ಲ ಹಿಂದೆ ಇದ್ದ ವಿರುಪಾಕ್ಷಪ್ಪ, ನಾಡಗೌಡರು ಮತ್ತು ನನ್ನ ಅವಧಿಯಲ್ಲೂ ಸಹ ರಾಯಚೂರು ಭಾಗಕ್ಕೆ ಮೊದಲಿಗೆ ನೀರು ತುಂಬಿಸಿದ್ದು ಇದೆ. ಕಾರಣ ಅಲ್ಲಿ ಹೆಚ್ಚಾಗಿ ಥೈಲ್ಯಾಂಡ್ ಭೂಮಿ ಇರುವುದರಿಂದ ಮೊದಲ ಆದ್ಯತೆ ಕೊಡುತ್ತಾ ಬಂದಿದ್ದೇವೆ.
ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ವಿಷಯವನ್ನು ಬೇರೆ ಕಡೆ ಡೈವರ್ಟ್ ಮಾಡಲು ಸುಳ್ಳು ಪ್ರಚಾರ ಮಾಡುವುದನ್ನು ಬಿಡಬೇಕು. ನೀವು ಅನುಭವಿ ರಾಜಕಾರಣಿ, ಇವಾಗ ಮಳೆ ಆಗುವುದರಿಂದ ತುಂಗಭದ್ರಾ ಡ್ಯಾಮ್ ನಲ್ಲಿ 1577 ಅಡಿ ನೀರು ಸಂಗ್ರಹವಾಗಿದೆ ಕಾಲುವೆಗೆ ನೀರು ಬಿಡಬೇಕಾದರೆ 1583 ಅಡಿ ನೀರು ಇದ್ದರೆ ಮಾತ್ರ ಕಾಲುವೆಗೆ ನೀರು ಹರಿಸಲು ಸಾಧ್ಯ.ಈಗಾಗಲೇ ಕಡಿಯುವ ನೀರಿನ ಕೆರೆ ದುರಸ್ತಿಗಾಗಿ ಹೆಚ್ಚುವರಿಯಾಗಿ ಮೊದಲನೇ ಹಂತದಲ್ಲಿ 30 ಕೋಟಿಯ ಡಿಪಿಆರ್ ಸಿದ್ದಪಡಿಸಿ ಸರ್ಕಾರದಿಂದ ಅನುಮೋದನೆ ಪಡೆಯಲಾಗಿದೆ. ಟೆಂಡರ್ ಕರೆಯುವುದು ಬಾಕಿಯಿದೆ.
ಬೇಸಿಗೆಯಲ್ಲಿ 6 ತಿಂಗಳವರೆಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ ಹಲವು ಬಾರಿ ಅಧಿಕಾರಿಗಳ ಸಭೆ ಮಾಡಿ, 6 ದಿನಗಳ ಕಾಲ ತಾಲೂಕಿನ ಎಲ್ಲಾ ಕೆರೆಗಳನ್ನು ಭರ್ತಿ ಮಾಡಿಕೊಳ್ಳಲು ತಿಳಿಸಲಾಗಿತ್ತು. ಅದರಂತೆ ತುಂಬಿಸಿಕೊಂಡಿದ್ದಾರೆ. ನಮ್ಮ ಪ್ರಯತ್ನ ನಾವು ಮಾಡಿದ್ದೇವೆ. ಇದು ನಾವು ಮಾಡಿದ ತಪ್ಪಲ್ಲ ಸೃಷ್ಟಿಕರ್ತ ಮಾಡಿದ್ದು, ಡ್ಯಾಮ್ ನಲ್ಲಿ ನೀರಿಲ್ಲ ಹೇಗೆ ಬಿಡುವುದು ನಗರದಲ್ಲಿ 70 ಬೋರವೆಲ್ ಗಳನ್ನು ಕೊರೆಸಲಾಗಿದೆ. ಆದರೂ ನೀರಿನ ಕೊರತೆಯಾಗಿದೆ. ಈಗಾಗಲೇ ಸಂಬಂಧಪಟ್ಟ ಮಂತ್ರಿಗಳು ಮತ್ತು ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿ ಸಿಂಗಟಾಲ್ಲೂರು ನದಿಯಿಂದ 1 ಟಿಎಮ್ ಸಿ ಕಾಲುವೆಗೆ ನೀರು ಬಿಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇನ್ನರೆಡ್ಮೂರು ದಿನಗಳಲ್ಲಿ ತಾಲೂಕಿನಾದ್ಯಂತ ಎಲ್ಲಾ ಕೆರೆಗಳಿಗೆ ನೀರನ್ನು ತುಂಬಿಸಲಾಗುತ್ತದೆ ಎಂದು ಹೇಳಿದರು.ಕಾಂಗ್ರೆಸ್ ಮುಖಂಡರಾದ ಖಾಜಿ ಮಲ್ಲಿಕ್, ಎನ್.ಅಮರೇಶ, ಶೇಖರಪ್ಪ ಗಿಣಿವಾರ ಇದ್ದರು.

Share This Article
error: Content is protected !!
";